ನೋಂದಾಯಿತ ಗೋಶಾಲೆಗಳಿಗೆ ಅನುದಾನ ಬಿಡುಗಡೆ

ಕಲಬುರಗಿ,ಜು.16- ಪುಣ್ಯಕೋಟಿ ದತ್ತು ಯೋಜನೆಯಡಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೊಂದಾಯಿತ ಗೋ-ಶಾಲೆಗಳಿಗೆ 1.25 ಕೋಟಿ ಅನುದಾನ ನೀಡಲಾಗಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ ತಿಳಿಸಿದರು.
ವಿಧಾನ ಪರಷತ್ತಿನಲ್ಲಿ ಎಂಎಲ್‍ಸಿ- ಬಿ.ಜಿ ಪಾಟೀಲ ಅವರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಎರಡು ಜಿಲ್ಲೆಗಳಲ್ಲಿರುವ 12 ಗೋ ಶಾಲೆಗಳಿಗೆ ಸರ್ಕಾರದಿಂದ 1.24 ಕೋಟಿ ಹಾಗೂ ಸರ್ಕಾರೇತರ ದೇಣಿಗೆ ರೂಪದಲ್ಲಿ 1.33 ಕೋಟಿ ರೂ.ಗಳನ್ನು ಕೊಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 10 ಗೋ ಶಾಲೆಗಳು ಮತ್ತು ಯಾದಗಿರಿ ಜಿಲ್ಲೆಯಲ್ಲಿ 2 ಗೋ ಶಾಲೆಗಳಿವೆ.
ಮೀನಜಿಗಿ ಮತ್ತು ರಾಚನಹಳ್ಳಿ ಗ್ರಾಮಗಳ ಗೋ ಶಾಲೆಗಳಿಗೆ ನೀರು ವಿದ್ಯುತ, ಮೇವು ಸಂಗ್ರಹ ಸೌಲಭ್ಯ, ಜಾನುವಾರು ಕೊಟ್ಟಿಗೆ ಸೌಲಭ್ಯ ಕಲ್ಪಿಸಲಾಗಿದೆ. ಸುರಪುರ ತಾಲೂಕಿನ ಗುಡಿಯಾಳ ಗ್ರಾಮದ ಗೋ ಶಾಲೆಯ ನಿರ್ರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಕಳೆದ 2021-22 ಮತ್ತು 2022-23ರ ಸಾಲಿನಲ್ಲಿ ಗೋಶಾಲೆಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ 2.50 ಕೋಟಿ ಬಿಡುಗಡೆ ಮಾಡಲಾಗಿದೆ ಕೂಲಿ, ಹೊರಗುತ್ತಿಗೆ ಸಿಬ್ಬಂದಿ ವೇತನ ವಿದ್ಯುತ ಬಿಲ್ ಪಾವತಿ ಇತರೆ ವೆಚ್ಚಗಳಿಗೂ ಅನುದಾನ ಖರ್ಚು ಮಾಡಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ವಿವರಿಸಿದ್ದಾರೆ.