ನೊಂದ ರೈತರ ನೆರವಿಗೆ ಬಾರದ ಕಾಂಗ್ರೇಸ್ ಸರ್ಕಾರ:ಕೂಚಬಾಳ

ತಾಳಿಕೋಟೆ:ಜು.19: ಮಳೆಯ ಅಭಾವದಿಂದ ರಾಜ್ಯದಲ್ಲಿ ಎಲ್ಲಯೂ ಬಿತ್ತನೆಯ ಕಾರ್ಯ ಪ್ರಾರಂಭಗೊಂಡಿಲ್ಲಾ ಇಡೀ ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಜಾರಿದ್ದಾರೆ ಅವರ ನೆರವಿಗೆ ಬರಬೇಕಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಕನಿಷ್ಠ ರೈತರಿಗೆ ದೈರ್ಯ ಹೇಳುವಂತಹ ಕೆಲಸ ಮಾಡದಿರುವದು ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಆರೋಪಿಸಿದರು.
ಮಂಗಳವಾರರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಸಾಲ ಸೂಲ ಮಾಡಿಕೊಂಡಿರುವ ರೈತರು ಮಳೆಯ ಕೊರತೆಯಿಂದ ದಿಕ್ಕು ತೋಚದೇ ಆತ್ಮಹತ್ಯಗೆ ಶರಣಾಗುತ್ತಿದ್ದಾರೆ ಕೂಡಲೇ ಸರ್ಕಾರ ಬರಗಾಲ ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸುತ್ತೇನೆಂದ ಅವರು ರೈತ ಸಮೂದಾಯದವರು ದೈರ್ಯದಿಂದ ಜೀವನವನ್ನು ಎದುರಿಸಬೇಕು ಜೀವ ಎನ್ನುವದು ಅತ್ಯುಮುಲ್ಯವಾದ ಆಸ್ತಿಯಾಗಿದೆ ನಿಮ್ಮ ಹಿಂದೆ ಕುಟುಂಭವಿದೆ ದೈರ್ಯದಿಂದ ಇರಬೇಕು ಎಂದು ಆತ್ಮಸ್ಥೈರ್ಯದ ಮಾತುಗಳ ಮನವಿ ಮಾಡಿದ ಅವರು ಇಡೀ ರಾಜ್ಯವು ಬರಗಾಲದಿಂದ ತತ್ತರಿಸುತ್ತಿರುವ ಸಮಯದಲ್ಲಿ ಕಾಂಗ್ರೇಸ್ ಸರ್ಕಾರದ ದುರಾಡಳಿತ ಹೆಚ್ಚಾಗಿದೆ ವರ್ಗಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದೆ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಜೈನಮುನಿಗಳ ಹತ್ಯೆ ವೇಣುಗೋಪಾಲ ಹತ್ಯೆ ಅಲ್ಲದೇ ಬೆಂಗಳೂರ ನಗರ ಒಳಗೊಂಡು ರಾಜ್ಯದ ವಿವಿಧಡೆ ಸಾಕಷ್ಟು ಹತ್ಯೆಗಳು ನಡೆಯುತ್ತಿವೆ ಇದರಿಂದ ರಾಜ್ಯದಲ್ಲಿ ಕಾನೂನು ಇದೆ ಇಲ್ಲವೋ ಎಂಬ ಅನುಮಾನ ಹುಟ್ಟಿಸುವಂತೆ ಕಾಣುತ್ತಿದೆ ಎಂದರು.
ಬೆಂಗಳೂರಲ್ಲಿ ಮಹಾ ಘಟಬಂದನ್ ಹೆಸರಿನಲ್ಲಿ ದೇಶದಲ್ಲಿಯ ಎಲ್ಲ ವಿರೋಧ ಪಕ್ಷಗಳನ್ನು ಕಟ್ಟಿಕೊಂಡು ಸಭೆಯನ್ನು ಕಾಂಗ್ರೇಸ್ ಸರ್ಕಾರ ಮಾಡುತ್ತಿದೆ ಸಭೆ ಮಾಡಲು ಯಾರೂ ಬೇಡ ಅನ್ನುವದಿಲ್ಲಾ ಸಭೆಯಲ್ಲಿ ಆಯ್‍ಎಎಸ್ ಅಧಿಕಾರಗಳನ್ನು ಆಡಳಿತ ಅಧಿಕಾರಿಗಳನ್ನು ಈ ಸಭೆಗೆ ನಿಯೋಜಿಸಿಕೊಂಡಿರುವದು ನೋಡಿದರೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿರುವದಕ್ಕೆ ಸಾಕ್ಷೀಯಾಗಿದೆ ವಿಧಾನ ಸೌದದಲ್ಲಿ ಅಸೇಂಬ್ಲಿ ನಡೆದಿದೆ ಅಸೇಂಬ್ಲಿಯಲ್ಲಿ ರಾಜ್ಯದ ರೈತರ, ಜನ ಸಾಮಾನ್ಯರ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವದನ್ನು ಬಿಟ್ಟು ಕಳೆದ 1 ವಾರದಿಂದಲೂ ಎಲ್ಲ ಮಂತ್ರಿಗಳನ್ನು ಕಟ್ಟಿಕೊಂಡು ಘಟಬಂದನ್ ಸಭೆಯ ತಯಾರಿ ಕೈಗೊಂಡಿರುವದು ಯಾಕೆ? ಈ ಸಭೆಯ ಉದ್ದೇಶ ಎದಕೋಸ್ಕರ ಸಭೆ ನಡೆದಿದೆ ಎಂಬುದನ್ನು ಜನರ ಮುಂದೆ ಬಿಚ್ಚಿಡುವಂತಹ ಕೆಲಸ ಸಿದ್ದರಾಮಯ್ಯನವರು ಮಾಡಬೇಕೆಂದು ಒತ್ತಾಯಿಸಿದರು. ಮೋದಿಜಿಗೆ ಘಟಬಂದನ್ ಸಾಟಿ ಇಲ್ಲಾ
ಎಲ್ಲ ವಿರೋಧ ಪಕ್ಷಗಳನ್ನು ಕಟ್ಟಿಕೊಂಡು ಹೇಗಾದರೂ ಮಾಡಿ ಮೋದಿಜಿ ಅವರನ್ನು ಎದುರಿಸಬೇಕೆಂದು ಅವರನ್ನು ಅಧಿಕಾರದಿಂದ ಇಳಿಸಿ ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೇಸ್ ಕುರುಡನ ತಿರುಕನ ಕನಸ್ಸನ್ನು ಕಾಣುತ್ತಿದೆ ಸ್ವಾರ್ಥದ ಅನುಕೂಲತೆಗಾಗಿ ಮಾಡುತ್ತಿರುವದು ದೇಶದ ಎಲ್ಲ ಜನರಿಗೆ ಗೊತ್ತಿರುವ ಸಂಗತಿಯಾಗಿದೆ ನರೇಂದ್ರ ಮೋದಿಜಿ ಅವರ ಆಡಳಿತ 9 ವರ್ಷಗಳಲ್ಲಿ ಮಾಡಿರುವ ಯೋಜನೆಗಳಿಂದ ಜನರು ಅವರನ್ನು ದೇಶದ ಎತ್ತರಮಟ್ಟದಲ್ಲಿ ಕೂಡ್ರಿಸಿದ್ದಾರೆ ಸರ್ವರ ಕಲ್ಯಾಣ, ಸಮಗ್ರ ಅಭಿವೃದ್ದಿಯ ಉದ್ದೇಶವನ್ನು ಇಟ್ಟುಕೊಂಡು ಮೋದಿಜಿ ಅವರು ಕೆಲಸವನ್ನು ಮಾಡಿದ್ದಾರೆ ಜಗತ್ತಿನೊಳಗೆ ಅತ್ಯಂತ ಉನ್ನತ ಪ್ರಶಸ್ತಿಗಳು ದೇಶದ ಪ್ರಜಾಪ್ರಭುತ್ವದ ಆಡಳಿತದ ಅವಧಿಯಲ್ಲಿ ಅತೀ ಹೆಚ್ಚು ಪ್ರಶಸ್ತಿಗಳು ಮೋದಿಜಿ ಅವರಿಗೆ ಸಿಕ್ಕಿವೆ ಇಡೀ ದೇಶದ ಜನರು ಮೋದಿಜಿ ಅವರ ನಿಸ್ವಾರ್ಥ ಸೇವೆ ದೂರದೃಷ್ಠಿಯ ಆಡಳಿತವನ್ನು ಜನರು ಬಹಳ ಹತ್ತರದಿಂದ ನೋಡಿದ್ದಾರೆ ಕಾಂಗ್ರೇಸ್‍ನವರು ಯಾವುದೇ ಘಟಬಂದನ್ ಮಾಡಿದರೂ ಯಾವ ಘಟಬಂದನವೂ ಲೆಕ್ಕಕ್ಕೆ ಬರುವದಿಲ್ಲಾ ತಮ್ಮ ಕುಟುಂಭವನ್ನು ರಕ್ಷೀಸಿಕೊಳ್ಳಬೇಕು ಯುಪಿಎ ಸರ್ಕಾರ ಇದ್ದಾಗ ಆಡಳಿತವಿದ್ದಾಗ ಇಡೀ ದೇಶವನ್ನು ಲೂಟಿ ಹೊಡೆದು ಕೊಳ್ಳೆ ಹೊಡೆದು ಬ್ರಷ್ಟಾಚಾರ ಮಾಡಿದ್ದನ್ನು ಜನರು ನೋಡಿದ್ದಾರೆ ಲಕ್ಷಾಂತರ ಕೋಟಿಗಟ್ಟಲೇ ಹಗರಣದಲ್ಲಿಯೇ ಯುಪಿಎ ಸರ್ಕಾರ ತೊಡಗಿತ್ತು ಇದರ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿತ್ತು ಇಲ್ಲಿಯವರೆಗೆ ಜಾಮೀನಿನ ಮೂಲಕ ದೇಶದಲ್ಲಿ ಓಡಾಟ ನಡೆಸುತ್ತಿರುವ ನಾಯಕರುಗಳು ಕಾಂಗ್ರೇಸ್ಸಿಗರಾಗಿದ್ದಾರೆ ಇದು ಜನರಿಗೆ ಗೊತ್ತಿದೆ ಮತ್ತೋಮ್ಮೆ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಸರ್ಕಾರ ಕಳೆದ ಭಾರಿಗಿಂತಲೂ ಹೆಚ್ಚಿನ ಸ್ಥಾನವನ್ನು ಗೆಲ್ಲುವಂತಹ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ ಇತ್ತಿಚಗೆ ಕಾಂಗ್ರೇಸ್ ಪಕ್ಷವು ರಾಜ್ಯದ ಜನರಿಗೆ ಸುಳ್ಳುಬರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೇಲೆ ಜನರು ಈಗ ಕಾಂಗ್ರೇಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಯಾಕಾದರೂ ಇವರಿಗೆ ಮತಹಾಕಿದಿವಿ ಎನ್ನುತ್ತಿದ್ದಾರೆಂದು ಹೇಳಿದ ಕೂಚಬಾಳ ಅವರು ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೇ ಮೋದಿಜಿ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಜನರು ತಿರ್ಮಾನಿಸಿದ್ದಾರೆ ದೇಶದಲ್ಲಿ ಯುಪಿಎ ಕಳ್ಳ ಕಾಕರಿಗೆ ಮತ್ತೇ ಅವಕಾಶ ನೀಡುವದಿಲ್ಲಾವೆಂಬ ನಿರ್ಣಯಕ್ಕೆ ಜನರು ಬಂದಿದ್ದಾರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.