ನೊಂದ ಕುಟುಂಬಕ್ಕೆ 2ಲಕ್ಷ ಪರಿಹಾರ ಶಾಸಕ ಡಿ.ರವಿಶಂಕರ್

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.10:- ನನ್ನ ಕ್ಷೇತ್ರದ ಚಂದಗಾಲು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಮನೆಯ ಯಜಮಾನ ಮಹದೇವ ನಾಯಕ ಇಂದು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ಶಾಸಕ ಡಿ.ರವಿಶಂಕರ್ ಚಂದಗಾಲು ಗ್ರಾಮಕ್ಕೆ ಬೇಟಿ ಕೊಟ್ಟು ಮೃತಪಟ್ಟ ಮಹದೇವನಾಯಕ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರು
ಇದೊಂದು ಅಮಾನವೀಯ ಘಟನೆಯಾಗಿದ್ದು ತಪ್ಪಿತಸ್ಥನ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮತೆಗೆದುಕೊಳ್ಳಬೇಕಾಗಿದೆ . ಆ ಮೂಲಕ ಸಮಾಜದಲ್ಲಿ ಇಂತಹ ದುಷ್ಟ ಶಕ್ತಿಗಳನ್ನು ದಮನ ಮಾಡಬೇಕಿದೆ.
ಇದೇಸಂಧರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ನೆಡೆದ ದುರ್ಘಟನೆಯ ಬಗ್ಗೆ ಚರ್ಚಿಸಿದೆನು.ಮುಖ್ಯಮಂತ್ರಿ ಗಳು ನೊಂದ ಕುಂಟುಂಬಕ್ಕೆ ಸಂಪೂರ್ಣ ಚಿಕಿತ್ಸಾ ವೆಚ್ಚ ಹಾಗೂ ಪರಿಹಾರವನ್ನು ನೀಡುತ್ತೇನೆಂದು ಹೇಳಿದರಲ್ಲದೆ ತಪ್ಪಿತಸ್ಥನ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿರುತ್ತಾರೆ .
ನೊಂದ ಕುಟುಂಬ ಈ ಆಘಾತದಿಂದ ಆದಷ್ಟು ಬೇಗ ಹೊರಬರಲಿ. ಮುಂದಿನ ದಿನಗಳಲ್ಲಿ ಈ ಕುಟುಂಬದ ಸಂಪೂರ್ಣ ರಕ್ಷಣೆ ನನ್ನ ಜವಾಬ್ದಾರಿಯಾಗಿರುತ್ತದೆ.
ಆ ಕುಟುಂಬದ ಒಬ್ಬ ಸಹ ಸದಸ್ಯನಾಗಿ ಕುಟುಂಬವನ್ನು ಸಲಹುವುದು ನನ್ನ ಕರ್ತವ್ಯವಾಗಿದೆ. ನೊಂದ ಕುಟುಂಬಕ್ಕೆ ವಯಕ್ತಿಕವಾಗಿ ಎರಡು ಲಕ್ಷ ಪರಿಹಾರ ನೀಡಿದ್ದೇನೆ ಎಂದು ತಿಳಿಸಿದರು.