ನೊಂದವರ ಹಾಗೂ ತಳ ಸಮುದಾಯದ ಪರ ಕೆಲಸಮಾಡುವ ಏಕೈಕ ವ್ಯಕ್ತಿ ಸಿದ್ಧರಾಮಯ್ಯಃ ರಾಮಚಂದ್ರಪ್ಪ

ವಿಜಯಪುರ, ಜು.19-ನೊಂದವರ ಹಾಗೂ ತಳ ಸಮುದಾಯದ ಪರ ಕೆಲಸಮಾಡುವ ಹಾಗೂ ಗಟ್ಟಿಧ್ವನಿಯಿಂದ ಮಾತನಾಡುವ ಕರ್ನಾಟಕ ರಾಜಕಾರಣದಲ್ಲಿ ಏಕೈಕ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಹೇಳಿದರು.
ನಗರದ ಯೂನಿಯನ್ ಹಾಲ್‍ನಲ್ಲಿ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹಕಾರ್ಯದರ್ಶಿ ರವಿ ಕಿತ್ತೂರ ನೇತೃತ್ವದಲ್ಲಿ ಅಹಿಂದ ಸಮುದಾಯದ ಮುಖಂಡರು ಹಮ್ಮಿಕೊಂಡ ಸಿದ್ರಾಮಯ್ಯನವರ 75ನೇ ವರ್ಷದ ಅಮೃತ ಮಹೋತ್ಸವ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿದ್ಧರಾಮಯ್ಯನವರು ರಾಜ್ಯಕ್ಕೆ 5 ವರ್ಷ ನೀಡಿದ ಕೊಡುಗೆ ಅಪಾರವಾದದ್ದು. ಇಂತಹ ಆಡಳಿತದ ನಿರೀಕ್ಷೆಯಲ್ಲಿ ಮತ್ತೊಮ್ಮೆ ರಾಜ್ಯದ ಜನರು ನೋಡುತ್ತಿದ್ದಾರೆ. ಅಗಷ್ಟ 3 ರಂದು ದಾವಣಗೆರೆಯಲ್ಲಿ ನಡೆಯುವ ಅಮೃತ ಮಹೋತ್ಸವ ಯಶಸ್ವಿಗೊಳಿಸಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಸುಬ್ರಮಣ್ಯ ಮಾತನಾಡಿ, ಸಿದ್ರಾಮಯ್ಯ ಕುರುಬ ಸಮಾಜದಲ್ಲಿ ಜನಿಸಿರಬಹುದು. ಆದರೆ ಅವರು ಎಲ್ಲ ಸಮಾಜದವರನ್ನು ಪ್ರೀತಿಸುವ ಹಾಗೂ ಗೌರವಿಸುವ ಕಾರ್ಯ ಮಾಡಿದ್ದಾರೆ. ಸರ್ವ ಸಮಾಜವನ್ನು ಅಭಿವೃದ್ಧಿಗೊಳಿಸಿ ಕೀರ್ತಿ ಸಿದ್ಧರಾಮಯ್ಯನವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಅಹಿಂದ ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ಸಿದ್ರಾಮಯ್ಯನವರು ಎಲ್ಲ ತಳಸಮುದಾಯದ ಅಭಿವೃದ್ಧಿಗೆ ದೂರದೃಷ್ಟಿ ಹೊಂದಿದವರು. ಇಂತಹ ನಾಯಕರು ಸಿಗುವುದು ವಿರಳ. ಅವರು ಯಾವತ್ತು ಜನ್ಮದಿನ ಆಚರಿಸಿಕೊಂಡಿದವರಲ್ಲ. ಸರ್ವ ನಾಯಕರು ಒತ್ತಾಯ ಮಾಡಿ ಒಪ್ಪಿಸಿದ್ದಾರೆ. ಇಂತಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿ ಹಳ್ಳಿಯಿಂದ ಪಾಲ್ಗೊಳ್ಳಬೇಕೆಂದು ಹೇಳಿದರು.
ಬೃಹತ್ ಬೆಂಗಳೂರು ಮಾಜಿ ಮಹಾಪೌರರಾದ ಡಿ.ವೆಂಕಟೇಶಮೂರ್ತಿ ಮಾತನಾಡಿ, ಸಿದ್ರಾಮಯ್ಯನವರು ಅಪಾರ ಅನುಭವ ಹೊಂದಿರುವ ವ್ಯಕ್ತಿ ಅವರನ್ನು ಸರ್ವ ಪಕ್ಷದವರು ಪ್ರೀತಿಸುತ್ತಾರೆ. ಅವರು ನೀಡಿದ ಯೋಜನೆಗಳು ಜನಮಾನಸದಲ್ಲಿ ಉಳಿದಿವೆ. ಇಂತಹ ಧೀಮಂತ ನಾಯಕನ ಅಮೃತ ಮಹೋತ್ಸವವನ್ನು ಇಡೀ ದೇಶ ಮೆಚ್ಚುವ ಹಾಗೆ ಮಾಡುವುದು ನಮ್ಮ ನಿಮ್ಮೆಲ್ಲರಜವಾಬ್ದಾರಿಯಾಗಿದೆ ಎಂದು ಹೇಳಿದರು.
ದಲಿತ ಮುಖಂಡರಾದ ನಾಗರಾಜ ಲಂಬು ಹಾಗೂ ಅಡಿವೆಪ್ಪ ಸಾಲಗಲ್ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ದಲಿತರ ಏಳ್ಗೆಗೆ ತಿದ್ದುಪಡಿ ತಂದು ಅನುದಾನ ಮೀಸಲಿಟ್ಟ ಮಹಾನ್ ವ್ಯಕ್ತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಂಗ್ರೆಸ್ ಮುಖಂಡರಾದ ಹಮೀದ್ ಮುಶ್ರೀಫ ಮಾತನಾಡಿ, ವಿಜಯಪುರ ನಗರದಿಂದ ಈ ಕಾರ್ಯಕ್ರಮಕ್ಕೆ ಮೂರು ವಾಹನದೊಂದಿಗೆ ತೆರಳುವುದಾಗಿ ಘೋಸಿಸಿದರು. ವೇದಿಕೆಯ ಮೇಲೆ ಮುಖಂಡರಾದ ಶ್ರೀದೇವಿ ಉತ್ಲಾಸ್ಕರ, ಅನುಸೂಯಾ ಜಾಧವ, ಬಸವರಾಜ ಬಸಳಿಗುಂದಿ, ರಾಜೇಶ್ವರಿ ರಾಜಶೇಖರ, ಎಂ.ಸಿ.ಮುಲ್ಲಾ ಉಪಸ್ಥಿತರಿದ್ದು, ಮಾತನಾಡಿದರು.
ಸಭೆಯಲ್ಲಿ ಸೇರಿದ ವಿವಿಧ ಸಮಾಜದ ಮುಖಂಡರು ಸ್ವ ಖರ್ಚಿನಿಂದ ಭಾಗವಹಿಸಿ ಸಿದ್ರಾಮಯ್ಯನವರ ಋಣ ಸಂದಾಯ ಮಾಡುವ ಸಣ್ಣ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಭೆಯಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಕೆಂಚಪ್ಪ ಬಿರಾದಾರ, ಮಲ್ಲಣ್ಣ ಸಾಲಿ, ಮುಖಂಡರಾದ ಮಾದೇವ ಗೊಲ್ಲರ, ಮಲ್ಲಿಕಾರ್ಜುನ ಮದರಿ, ಪ್ರೇಮಕುಮಾರ ಮ್ಯಾಗೇರಿ, ಜಟ್ಟೆಪ್ಪ ರವಳಿ, ದೀಪಾ ಕುಂಬಾರ, ಸಂಜು ಗೊಲ್ಲರ, ಕಾಮೇಶ ಉಕ್ಕಲಿ, ಬಂದಗಿಸಾಬ ಗಸ್ತಿ, ಪ್ರಭಾವತಿ ನಾಟಿಕಾರ, ಮಲ್ಲಣ್ಣ ಶಿರಶ್ಯಾಡ, ವೈ.ವೈ.ಹಿಪ್ಪರಗಿ, ಸೋಮು ಉಮರಾಣಿ, ನಿಂಗಪ್ಪ ನಾವಿ, ಪರಶುರಾಮ ರೋಣಿಹಾಳ, ಸಿದ್ದುಗೌಡನವರ, ಬಿ.ಸಿ.ಸಾವುಕಾರ, ಚಂದ್ರಶೇಖರ ಯಾಳವಾರ, ಸಂಜೀವ ಶಿವಣಗಿ, ಬಿ.ಟಿ.ಗೌಡರ, ರಾಜು ಯರನಾಳ, ಸಂಗಮೇಶ ಓಲೇಕಾರ, ದಯಾನಂದ ಸಂಗೋಗಿ, ರಾಜು ಕಗ್ಗೋಡ, ಮಲ್ಲು ಸಾವಳಸಂಗ, ಬಿ.ಟಿ.ಗೌಡರ, ಬಸವರಾಜ ಕುರಿ, ದೇವಕಾಂತ ಬಿಜ್ಜರಗಿ, ಭೀರಪ್ಪ ಜುಮನಾಳ, ಸತೀಶ ಅಡವಿ, ಸಂಗಮೇಶ ವಾಡೇದ, ಮಂಜುನಾಥ ಬೋರಗಿ, ಚಂದ್ರಶೇಖರ ಬಗಲಿ, ಮಲ್ಲು ಕಾಮನಕೇರಿ, ಮನು ಭಾವಿಕಟ್ಟಿ, ದ್ಯಾಮಗೊಂಡ ಕೆ. ನಾಗೋಡ ಇತರರು ಉಪಸ್ಥಿತರಿದ್ದರು.