ನೊಂದವರ ಬದುಕಿಗೆ ಆಶಾಕಿರಣ ದಿ.ಬಾಪುಗೌಡರು: ಶಂಕ್ರಣ್ಣ ವಣಿಕ್ಯಾಳ

ಶಹಾಪುರ:ನ.16:ಹುಟ್ಟು ಅನಿರೀಕ್ಷಿತ ಸಾವು ನಿಶ್ಚಿತವಾದ ಈ ಸೃಷ್ಟಿಯಲ್ಲಿ ಬದುಕು ಅತ್ಯಂತ ಮಹತ್ಪೂರ್ಣವಾದದ್ದು. ಅದನ್ನು ಅರ್ಥೈಹಿಸಿಕೊಂಡಲ್ಲಿ ಜೀವನ ಸಾರ್ಥಕವಾಗುತ್ತದೆ. ಮಧ್ಯದ ಬದುಕಿನಲ್ಲಿ ಕಿರಣದಂತೆ ಕೃಷಿ ಕುಟುಂಬದಲ್ಲಿ ಜನಸಿದ ದಿವಂಗತ ಬಾಪುಗೌಡರು ದಿಮಂತ ರಾಜಕಾರಣಿಗಳಾಗಿ ನೊಂದವರ ಬದುಕಿಗೆ ಆಶಾಕಿರಣವಾಗಿದ್ದರು, ಎಂದು ಮಾಜಿ, ಜಿ,ಪಂ, ಉಪಾಧ್ಯಕ್ಷರಾದ ಶಂಕ್ರಣ್ಣ ವಣಿಕ್ಯಾಳರವರು ಅಭಿಮತ ವ್ಯಕ್ತಪಡಿಸಿದರು. ಅವರು ಹೈದ್ರಾಬಾದ ಕರ್ನಾಟಕದ ಸಜ್ಜನ ರಾಜಕೀಯ ಶಕ್ತಿಯಾಗಿದ್ದ ಮಾಜಿ ಮಂತ್ರಿ ದಿವಂಗತ ಬಾಪುಗೌಡ ದರ್ಶನಾಪುರವರ 34 ನೇಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು. ಬದುಕಿನ ದಿಕ್ಕನ್ನೇ ಬದಲಾವಣೆ ಮಾಡಿ ಸಾಮಾಜಿಕ ಪ್ರಗತಿಗೆ ಅವಿರತವಾಗಿ ಶ್ರಮಿಸಿದ ನಾಡು ಕಂಡ ಸರಳ ರಾಜಕಾರಣಿ ಬಾಪುಗೌಡ ದರ್ಶನಾಪುರವರು ಒಬ್ಬರಾಗಿದ್ದರು ಎಂದು ಅವರು ನುಡಿದರು. ಬಾಪುಗೌಡರ ಆದರ್ಶಗಳು ಇಂದು ಪ್ರತಿಯೊಬ್ಬರ ಬದುಕಿಗೆ ದಾರದೀಪವಾಗಿವೆ. ಅವರ ಮಾರ್ಗದಲ್ಲಿ ನಡೆದುಕೊಂಡು ನಾವುಗಳು ಬದುಕಿನತ್ತ ಸಾಗಬೇಕು ಎಂದು ತಿಳಿಸಿದ ಅವರು ಮಾತಾಪಿತೃಗಳ ಸಂಜಾತಾರಾಗಿ ಇಂದು ಕಲ್ಯಾಣ ಕರ್ನಾಟಕದಲ್ಲೆ ಚಾಪು ಮೂಡಿಸಿಕೊಂಡು ಅಭಿವೃದ್ದಿಯನ್ನೇ ಮೈಗೂಡಿಸಿಕೊಂಡ ಮಾಜಿ ಸಚಿವ ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರವರು ಅಮೋಘ ಸಾಧನೆಗಳ ಹರಿಕಾರರಾಗಿದ್ದಾರೆ. ದಿವಂಗತ ಬಾಪುಗೌಡರ ಸನ್ಮಾರ್ಗದಲ್ಲಿ ಮುಂದೆ ಸಾಗಿಕೊಂಡು ಜನಮಾನಸದಲ್ಲಿ ಹೆಸರು ಮಾಡಿದ ಶರಣಬಸ್ಸಪ್ಪಗೌಡ ದರ್ಶನಾಪುರವರು ಜನಾನುರಾಗಿಯಾಗಿದ್ದಾರೆ. ದಿವಂಗತ ಬಾಪುಗೌಡ ಆದರ್ಶಗಳು ಮನೆಮನೆಗಳಿಗೆ ಮುಟ್ಟಲಿ ಎಂದು ವಣಿಕ್ಯಾಳ ಆಶಿಸಿದರು.ವೇದಿಕೆಯಲ್ಲಿ ದಿವ್ಯ ಸಾನಿಧ್ಯವನ್ನು ನಗನೂರಿನ ಪೂಜ್ಯ ಶರಣಪ್ಪ ಶರಣರು. ಕೆಂಭಾವಿಯ ಪೂಜ್ಯ ಚೆನ್ನಬಸವ ಶಿವಾಚಾರ್ಯರು ಸಿದ್ರಾಮಪ್ಪ ಮಾಹಾಸ್ವಾಮೀಗಳು. ವಹಿಸಿದ್ದರು. ಸಮಾರಂಭದಲ್ಲಿ ಮಾಜಿ ಸಚಿವ ದಿವಂಗತ ಬಾಪುಗೌಡ ದರ್ಶನಾಪುರವರ ಭಾವ ಚಿತ್ರಕ್ಕೆ ಹಣತೆಯ ದೀವಿಗೆ ಹಚ್ಚುವದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿರಿಯ ಮುಖಂಡರು ದಿವಂಗತ ಬಾಪುಗೌಡ ದರ್ಶನಾಪುರವರ ಸಹೋಧರರಾದ ಬಸವರಾಜಪ್ಪಗೌಡ ದರ್ಶನಾಪುರ.ಹಿರಿಯ ನ್ಯಾಯಾವಾದಿ ಶ್ರೀನಿವಾಸರಾವ್ ಕುಲಕರ್ಣಿ. ನಿವೃತ್ತ ಅಧಿಕಾರಿ ಭೀಮರಡ್ಡಿ ಬೈರಡ್ಡಿ. ವಿಧಾನ ಪರಿಷತ್ ಮಾಜಿ ಸದಸ್ಯರಾದ ಚೆನ್ನಾರಡ್ಡಿ ತುನ್ನೂರ. ಈ,ಪಂ, ಮಾಜಿ ಸದಸ್ಯರಾದ ಬಸನಗೌಡ ಸುಬೇದಾರ. ಹಣಮಂತ್ರಾಯ ದಳಪತಿ. ಬಸನಗೌಡ ಯಾಳಗಿ. ಮಾಣಿಕರಡ್ಡಿ ಶಿರಡ್ಡಿ. ಗುರುನಾಥರಡ್ಡಿ ಹಳಿಸಗರ. ಸಿದ್ದಲಿಂಗಪ್ಪ ಆನೆಗುಂದಿ, ಚಂದ್ರಶೇಖರ ಆರಬೋಳ. ಸಾಹು. ಸಿದ್ದಾರಡ್ಡಿ ಕೌಳೂರ. ಸೈಯದ್ ಚಾಂದಪಾಷಾ. ಸೇರಿದಂತೆ ನೂರಾರು ಜನ ಹಿರಿಯ ಮುಖಂಡರು ಆಶೀನರಗಿದ್ದರು.ಶಾಸಕರಾದ ಶರಣಬಸ್ಸಪ್ಪಗವಡ ದರ್ಶನಾಪುರ ಬಸನಗೌಡ ಯಡಿಯಾಪುರ. ಸೋಮಶೇಖರ ಗೋನಾಯಕ. ಬಸನಗೌಡ ಪಾಟೀಲ ಸುರೇಶ ಸಜ್ಜನ. ಸೇರಿದಂತೆ ಅನೇಕಗಣ್ಯರು ದರ್ಶನಾಪುರ ಅಭಿಮಾನಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಅಂಕ ಪಡೆದ , ಕ್ರೀಡೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿ ವಿಧ್ಯಾಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶ್ರೀ ಚರಬಸವೇಶ್ವರ ಶಿಕ್ಷಣ ಸಂಸ್ಥೆಯ ಘೇವರಚಂದ ಜೈನರವರು ಪ್ರಾಸ್ತಾವಿಕವಾಗಿ ಮತನಾಡಿದರು. ವಿವಿಧಡೆಗಳಿಂದ ಆಗಮಿಸಿದ್ದ ಆಕಾಶವಾಣಿ ಕಲಾವಿದರು, ಜಾನಪದ ಕಲಾವಿದರು ಜಾನಪದ ಭಾವಗೀತೆ ರಾಷ್ಟ್ರಗೀತೆಗಳನ್ನು ಹಾಡಿ ಜನರನ್ನು ರಂಜಸಿದರು.ಅನೇಕ ಹಳ್ಳಿಗಳಿಂದ ಅಭಿಮಾನಿಗಳು ಆಗಮಿಸಿದ್ದರು.