ನೊಂದವರಿಗೆ ಸಚಿವ ಪ್ರಭು ಚವ್ಹಾಣ್ ಅಭಯ

ಬೀದರ:ಜೂ.11: ಪಶುಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜೂ.10ರಂದು ಔರಾದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಕೋವಿಡ್‍ನಿಂದ ಮೃತಪಟ್ಟ ಪಕ್ಷದ ಪ್ರಮುಖ ಕಾರ್ಯಕರ್ತರ ಕುಟಂಬದವರಿಗೆ ಸಾಂತ್ವನ ಹೇಳಿದರು.

ಎಕಂಬಾ ಗ್ರಾಮದಲ್ಲಿ ಕೋವಿಡ್‍ನಿಂದ ಮರಣ ಹೊಂದಿದ ಮಾರುತಿ ಕಾಂಬಳೆ ಹಾಗೂ ಪ್ರಕಾಶ ಶಿಂಧೆ ಅವರ ಮನೆಗೆ ಭೇಟಿ ನೀಡಿದ ಸಚಿವರು, ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು. ಕುಟುಂಬಸ್ಥರ ನೋವು ಮತ್ತು ಸಮಸ್ಯೆಗಳನ್ನು ಶಾಂತ ಚಿತ್ತತೆಯಿಂದ ಆಲಿಸಿ, ನಾನು ಸದಾ ನಿಮ್ಮ ಜೊತೆಗಿದ್ದೇನೆ. ಯಾವುದೇ ಕಾರಣಕ್ಕೂ ಭಯಪಡುವುದು ಬೇಡ ಎಂದು ಧೈರ್ಯ ತುಂಬಿದರು.

ಕೋವಿಡ್‍ನಿಂದ ಮೃತಪಟ್ಟ ಪಕ್ಷದ ಕಾರ್ಯಕರ್ತರಾದ ರಾಯಪಳ್ಳಿಯ ಬಾಬುರೆಡ್ಡಿ, ನಾಗೂರ(ಎಂ) ಗ್ರಾಮದ ನಾಗಪ್ಪ ಮಾದಗೌಡ, ಲಕ್ಷ್ಮಣ ಶರಣಪ್ಪ, ಧನರಾಜ ಲಕ್ಷ್ಮಣ ಹಾಗೂ ಮನೋಹರ ಖಾಶೆಂಪೂರ, ಕೊಳ್ಳೂರ್ ಗ್ರಾಮದ ನಿವೃತ್ತಿರಾವ ಬಿರಾದಾರ, ಅರ್ಜುನ್ ಶೆಟ್ಟೆ, ಹೃದಯಾಘಾತದಿಂದ ಮರಣ ಹೊಂದಿದ ಸುರೇಶ ಅಕನೂರೆ ಅವರ ಮನೆಗೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ ಧನಸಹಾಯ ಮಾಡಿದರು. ಕೋವಿಡ್‍ನಿಂದ ಆಸ್ಪತ್ರೆಗೆ ದಾಖಲಾದ ಕಾರ್ಯಕರ್ತರನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಅಷ್ಟಾಗಿಯೂ ಕೆಲವು ಪ್ರಮುಖ ಕಾರ್ಯಕರ್ತರನ್ನು ಕಳೆದುಕೊಳ್ಳುವಂತಾಗಿದೆ. ಅವರ ಅವಲಂಬಿತರ ಸಹಾಯಕ್ಕೆ ನಾನು ಸದಾ ಸಿದ್ಧನಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.

ನಾಗನಪಲ್ಲಿ ಗ್ರಾಮದಲ್ಲಿ ನ್ಯೂಮೋನಿಯಾ ಕಾಯಿಲೆಗಾಗಿ ಚಿಕಿತ್ಸೆಯ ವೆಚ್ಚ ಭರಿಸಲಾಗದೇ ತೀವ್ರ ಸಂಕಷ್ಟದಲ್ಲಿದ್ದ ಮಾರುತಿ ಮೇತ್ರೆ, ಜಂಬಗಿ ಗ್ರಾಮದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಿರ್ಗತಿಕರಾಗಿರುವ ಮನೋಹರ್ ಚಂದಪ್ಪ ಹಾಗೂ ಬರ್ದಾಪೂರ ಗ್ರಾಮದ ಕ್ಯಾನ್ಸರ್ ಪೀಡಿತ ನಾಗೇಶ ಭೀಮಣ್ಣ ಅವರಿಗೆ ಆಸ್ಪತ್ರೆ ವೆಚ್ಚಕ್ಕಾಗಿ ವೈಯಕ್ತಿಕ ಧನಸಹಾಯ ಮಾಡಿದರು.

ಚಿಂತಾಕಿ ಗ್ರಾಮದಲ್ಲಿ ಕೋವಿಡ್‍ನಿಂದ ಗುಣಮುಖರಾದ ಪಕ್ಷದ ಕಾರ್ಯಕರ್ತ ಗೋವಿಂದರೆಡ್ಡಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಕೋವಿಡ್‍ನಿಂದ ಗುಣಮುಖರಾದರೂ ಸಹ ಯಾವಾಗಲೂ ಜಾಗೃತಿ ವಹಿಸಬೇಕು. ಮನೆಯಿಂದ ಹೊರಹೋಗುವಾಗ ತಪ್ಪದೇ ಮಾಸ್ಕ್ ಧರಿಸಬೇಕು. ದಿನಾಲು ಯೋಗ, ವ್ಯಾಯಾಮದಂತಹ ದೈಹಿಕ ಕಸರತ್ತು ಮಾಡುವುದನ್ನು ರೂಢಿಸಿಕೊಳ್ಳಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಬಂಡೆಪ್ಪಾ ಕಂಟೆ, ರಮೇಶ ಉಪಾಸೆ, ಕಾಶಿನಾಥ ಜಾಧವ್, ಖಂಡೋಬಾ ಹಾಗೂ ಇತರರಿದ್ದರು.