ನೊಂದವರಿಗೆ ನೆರವಾಗುವ ಗುಣ ಹೊಂದಲು ಕರೆ

ಹರಿಹರ.ಜ.2; ನಮ್ಮ ತಾಲೂಕಿನವರಾದ  ನಂದಿಗಾವಿ ಎನ್.ಎಚ್.ಶ್ರೀನಿವಾಸ್ ರವರ ಸಮಾಜಿಕ ಕಳಕಳೆ  ಸೇವಾಮನೋಭಾವ ಇದೇ ರೀತಿ ಮುಂದು ವರಿಯಲಿ ಎಂದು ಕಾಗಿನೆಲೆ ಶ್ರೀ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಶುಭ ಹಾರೈಸಿದರು.    ನಗರದ ತಾಲೂಕ ಕ್ರೀಡಾಂಗಣದಲ್ಲಿ ಎನ್.ಎಚ್.ಶ್ರೀನಿವಾಸ್ ಸ್ನೇಹ ಬಳಗದಿಂದ ಅವರ 41ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ 3 ದಿನ ಆಯೋಜಿಸಲಾಗಿರುವ ರಾಜ್ಯಮಟ್ಟದ ಸೀಮಿತ ಓವರುಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ     ಶ್ರೀನಿವಾಸ್ ರವರು ಕಳೆದ ಕೆಲವು ವರ್ಷಗಳಿಂದ ತಾಲೂಕಿನ ಹಲವಾರು ಬಡಕುಟುಂಬ,ಆಟೋಚಾಲ ಕರು, ಗುಡಿಸಲು ನಿವಾಸಿಗಳು, ಕೊಳಚೆ ಪ್ರದೇಶದ ನಿವಾಸಿಗಳು ಈ ರೀತಿ ಹಲವಾರು ಕುಟುಂಬಗಳಿಗೆ ಕೋವಿಡ್-19 ರ ಸಂದರ್ಭದಲ್ಲಿ ಆಹಾರಧಾನ್ಯಗಳ ಕಿಟ್ ವಿತರಣೆಯನ್ನು ಮಾಡಿದ್ದಲ್ಲದೆ ತಾಲೂಕಿನಾ ದ್ಯಂತ ಪ್ರಾಕೃತಿಕವಾದ ವಾತಾವರಣದ ದೃಷ್ಟಿಯಿಂದ 1500 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವುದು ಶ್ಲಾಘ ನೀಯ ಎಂದು ಪ್ರಶಂಸಿಸಿದರು.ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀಬಾಲಯೋಗಿ ಜಗದೀಶ್ವರ ಮಹಾಸ್ವಾಮಿಗಳು ಮಾತನಾಡಿ ಜಗತ್ತನ್ನೇ ಕಾಡಿದ ಮಹಾಮಾರಿ ವೈರಸ್ ಜನರಲ್ಲಿ ಭಯಭೀತಿ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಎಚ್ಚೆನ್ ಶ್ರೀನಿವಾಸ್ ಸ್ನೇಹ ಬಳಗದ ಅವರು  ಕಡು ಬಡವರಿಗೆ ಮಧ್ಯಮ ವರ್ಗದವರಿಗೆ ಕೂಲಿಕಾರ್ಮಿಕರಿಗೆ ಆಟೋ ಚಾಲಕರಿಗೆ ದಿನನಿತ್ಯದ ಜೀವನದ ಬದುಕಿನಲ್ಲಿ ನೊಂದವರಿಗೆ ನೆರವಾಗುವಂಥ ಆಹಾರ ಧಾನ್ಯಗಳ ಕಿಟ್ ಗಳನ್ನು ಆರೋಗ್ಯ ವೃದ್ಧಿಸುವಂಥ ಔಷಧಿ ಆಯುಷ್ ಕಿಟ್ ಗಳನ್ನು ವಿತರಣೆ ಮಾಡಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿರುವ ನಂದಿಗಾವಿ ಶ್ರೀನಿವಾಸ ಸಾಮಾಜಿಕ ಕಳಕಳಿ ಅವರ ಜೀವನದಲ್ಲಿ ಮುಂದುವರಿಯಲಿ ಎಂದರು ಸರಳವಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಕ್ರೀಡಾಪಟುಗಳಿಗೆ ಕ್ರೀಡಾ ಅಭಿಮಾನಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ವಾದುದು ನೊಂದವರಿಗೆ ನೆರವು ಸಹಾಯ ಹಸ್ತ ಚಾಚುವ ಕಾರ್ಯ ಮುಂದುವರಿಯಲಿ ಇವರ ನೆಮ್ಮದಿ ಜೀವನ ಸುಖಕರವಾಗಿ ಸಾಗಲಿ ಎಂದು ಶುಭ ಹಾರೈಸಿದರು ಇದೇ ವೇಳೆ  ಎನ್.ಹೆಚ್.ಶ್ರೀನಿವಾಸ್ ಮಾತನಾಡಿ ನಮ್ಮ   ಸ್ನೇಹ ಬಳಗದ ವತಿಯಿಂದ ಅದ್ದೂರಿಯಾಗಿ ನನ್ನ ಹುಟ್ಟು ಹಬ್ಬವನ್ನು ಆಚರಿಸ ಲು ತೀರ್ಮಾನಿಸಿದ್ದರು. ಆದರೆ ಕರೋನಾ ಹಿನ್ನೆಲೆ ಯಲ್ಲಿ ಸರಳವಾಗಿ ಆಚರಿಸಿ ಕೊಳ್ಳೋಣ ಎಂದು ಸಲಹೆ ನೀಡಿದೆ ಅದಕ್ಕೆ  ಒಪ್ಪಿದ ಬಳಗ ದವರು ನಮ್ಮ ಮೇಲಿನ ಪ್ರೀತಿಯಿಂದ ಈ ಬಾರಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡೋಣ ಎಂದು   ರಾಜ್ಯಮಟ್ಟ ದ ಕ್ರಿಕೆಟ್ ಪಂದ್ಯಾವಳಿಗಳನ್ನು ಹಮ್ಮಿಕೊಂಡಿದ್ದಾರೆ. ನನ್ನ ಸಾಮಾಜಿಕ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿರುವ ಪ್ರತ್ಯಕ್ಷವಾಗಿ ಪರೋಕ್ಷವಾಗಿ  ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ  ಮತ್ತು ಭಾಗವಹಿಸಿರುವ ಕ್ರೀಡಾ ಪಟುಗಳಿಗೂ ಕ್ರೀಡಾ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು ಸ್ನೇಹಬಳಗದ ಪಂದ್ಯಾವಳಿಗಳ ಆಯೋಜಕರ ಪರವಾಗಿ ಸಂತೋಷ್ ಗುಡಿಮನಿ ಮಾತನಾಡಿ ಪಂ ದ್ಯಾವಳಿಯಲ್ಲಿ ರಾಜ್ಯದ ನಾನಾ ಕಡೆಯಿಂದ 24 ತಂಡಗಳು ಭಾಗವಹಿಸುತ್ತಿವೆ. ಇದರಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ 60 ಸಾವಿರ ರೂ, ನಗದು ಹಾಗೂ ಆಕರ್ಷಕ ಟ್ರೋಫಿ,ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ 30 ಸಾವಿರ ರೂ,ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.ಅಲ್ಲದೆ ಉತ್ತಮ ಆಟಗಾ ರರಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.ಈ ಪಂದ್ಯಾವಳಿಯ ಮತ್ತೊಂದು ವಿಶೇಷತೆ ಏನೆಂದರೆ ನಗರದಲ್ಲಿರುವ ನೌಕರ ವರ್ಗಕ್ಕೆ ಕ್ರೀಡಾ ಮನೋಭಾವ ಹೆಚ್ಚಿಸುವ ದೃಷ್ಟಿಯಿಂದ ‘ಅಫಿಶಿಯ ಲ್ ಕಪ್’ ಸಹ ಆಯೋಜನೆ ಮಾಡಲಾಗಿದೆ ಇದರಲ್ಲಿ ಪೊಲೀಸ್ ಇಲಾಖೆ, ವಿದ್ಯುಚ್ಛಕ್ತಿ ಇಲಾಖೆ, ನಗರದ ವಕೀಲರು ತಂಡಗಳು ಮತ್ತು ಸಾಮಾಜಿಕ ಕಾರ್ಯಕ ರ್ತರ ನಾಲ್ಕು ತಂಡಗಳು ಭಾಗವಹಿಸಲಿವೆ. ಈ ಪಂ ದ್ಯಗಳು ಭಾನುವಾರದಂದು ನಡೆಯಲಿವೆ ಎಂದು ಮಾಹಿತಿ ನೀಡಿದರು.  ಮಾಜಿ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮುಖಂಡ ರಾದ ದೇವೇಂದ್ರಪ್ಪ ಕುಣೆಬೆಳಕೆರೆ,ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ನಗರಸಭಾ ಮಾಜಿ ಸದಸ್ಯ ನಾಗರಾಜ್ ಮೆಹರವಾಡೆ, ನಗರಸಭೆ ಸದಸ್ಯ ರಾದ ಎನ್.ರಜನಿಕಾಂತ್, ಕೆ.ಜಿ.ಸಿದ್ದೇಶ್, ಬೆಸ್ಕಾಮ್ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕೆ. ಲಕ್ಷ್ಮಪ್ಪ, ಕಾಗಿನೆಲೆಯ ವಿದ್ಯಾಪೀಠದ ಶಾಲೆ  ಪ್ರಾಂಶು ಪಾಲರಾದ ಬೀರೇಶ್, ಕ್ರಿಕೆಟ್ ಪ್ರೋತ್ಸಾಹಕರಾದ ರಾಘವೇಂದ್ರ ಉಪಾಧ್ಯಾಯ, ವಕೀಲ ಆನಂದ್ ಸ್ನೇಹಬಳಗದ ಸುಚೇತ್  ಅಭಿ ಮಾನಿ ಬಳಗದ ಸದಸ್ಯರು ಹಾಗೂ ಕ್ರೀಡಾಪಟು ಗಳು ಭಾಗವಹಿಸಿದ್ದರು