ನೈಸ್ ಕ್ರಿಕೆಟ್ ಟೂರ್ನಮೇಂಟ್ ಗೆ ಚಾಲನೆ ನೀಡಿದ ನಟ ಶಿವರಾಜ್ ಕುಮಾರ್

ಬೀದರ್:ಜ.11: ಬೀದರ ದಕ್ಷಿಣ ಕ್ಷೇತ್ರದ ಅಯಸಪೂರ ಹತ್ತಿರದ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಮಾಲಾತಿ ಖೇಣಿ ಅವರ ಸ್ಮರಣಾರ್ಥವಾಗಿ ಎಕೆಕೆ ಗ್ರೂಪ್ ವತಿಯಿಂದ ಕ್ರಿಕೆಟ್ ರ್ಟೋನಾಮೆಂಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ನಟ ಶಿವರಾಜಕುಮಾರ ಅವರ ಪತ್ನಿ ಗೀತಾ ಶಿವರಾಜಕುಮಾರ ಆಗಮಿಸಿದರು. ಚಲನಚಿತ್ರ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರಿದ್ದರು.

ಕಾರ್ಯಕ್ರಮ ಉದ್ದೇಶಿಸಿ
ಮಾಜಿ ಸಚಿವರಾದ ಅಶೋಕ ಖೇಣಿ ಮಾತನಾಡಿ, ನಮ್ಮ ತಾಯಿಯವರ ಸ್ಮರಣಾರ್ಥವಾಗಿ ನಮ್ಮ ಸಂಸ್ಥೆಯ ವತಿಯಿಂದ ಕ್ರಿಕೆಟ್ ಪಂದ್ಯಾವಳಿಗಳನ್ನ ಆಯೋಜಿಸಿದ್ದೆನೆ.ನಿಮ್ಮೆಲ್ಲರ ಪ್ರತಿ ಸಹಕಾರ ನಮ್ಮ ಜೊತೆಗಿರಲಿ. ನಿಮ್ಮ ನೆಚ್ಚಿನ ನಾಯಕ ನಟನ ಮಾತಿಗಾಗಿ ಕಾಯುತ್ತಿದ್ದಿರೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಮಾತು ಮುಗಿಸಿದರು.

ನಂತರ ಈಶ್ವರ ಖಂಡ್ರೆ ಅವರು ಮಾತನಾಡಿದರು. ಅಶೋಕ ಖೇಣಿ ಅವರು ತಮ್ಮ ತಾಯಿ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ನೈಸ್ ಟೊರ್ನಾಮೆಂಟ್ ಮಾಡುತ್ತಾ ಬಂದಿದ್ದಾರೆ. ಕ್ರಿಡೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳಲ್ಲಿ ಕ್ರಿಡಾ ಮನೋಬಾವ ಹುಟ್ಟುತದೆ ಎಂದರು.

ಈ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಡಾ ರಾಜಕುಮಾರ ಅವರ ಕುಡಿ ನಮ್ಮೆಲ್ಲರ ಮುಂದೆ ಬಂದಿದ್ದಾರೆ. ಅವರ ತಮ್ಮ ಅಪ್ಪು ಅವರು ಹತ್ತಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು.ರಾಜಕುಮಾರ ಮನೆತನ ನಮ್ಮ ಕರ್ನಾಟಕಕ್ಕೆ ಮಾದರಿ ಕುಟುಂಬವಾಗಿದೆ. ಶಿವರಾಜಕುಮಾರ ಅವರು ಯಾವತ್ತು ನಾನು ದೊಡ್ಮನೆಯವರು ಎಂದು ನಡೆದುಕೊಂಡಿಲ್ಲ.ನಮ್ಮೆಲ್ಲರಲ್ಲಿ ಅವರೊಬ್ಬರಾಗಿ ನಮ್ಮ ಜೊತೆಗಿದ್ದಾರೆ ಎಂದರು.

ನಮ್ಮ ಬೀದರ ಜಿಲ್ಲೆಯಿಂದ ಕ್ರಿಡೆಯಲ್ಲಿ ದೊಡ್ಡ ಸಾಧನೆ ಮಾಡಿ ನಮ್ಮ ಜಿಲ್ಲೆಗೆ ಹೆಸರು ತರಲಿ ಎಂದು ಆಶೀಸಿದರು.ನಂತರ ಮಾತನಾಡಿದ ಮಾಜಿ ಸಚಿವರು ಹಾಲಿ ಶಾಸಕರಾದ ರಹೀಮಖಾನ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಿವೆಲ್ಲರೂ ಅಶೋಕ ಖೇಣಿ ಅವರ ಕೈ ಬಲಪಡಿಸಬೇಕು. ಅವರ ಜೊತೆಗೆ ತಾಲೇಲ್ಲರು ಇರಬೇಕು ಎಂದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ, ಅಶೋಕ ಖೇಣಿ ಅವರಂತ ಮಗನ ಪಡೆದ ಮಾಲತಿ ತಾಯಿ ಪುಣ್ಯವಂತರು ಯಾಕೆಂದರೆ ತಾಯಿ ಮರೆಯಾದ ಮೇಲೆ ಪ್ರತಿವರ್ಷ ಅವರ ಸ್ಮರಣಿಕೆಗಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ನಂತರ ಸಿನಿಮಾ ಹಾಡುಗಳಿಂದ ನೇರದಿದ್ದ ಅಭಿಮಾನಿಗಳಿಗೆ ರಂಜಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಎಲ್ಲಾ ಘಟಕದ ಅಧ್ಯಕ್ಷರು, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.