
ಚಾಮರಾಜನಗರ, ಮೇ.02:- ಸಹಜಕೃಷಿಯನ್ನು ಮರೆತು ಹೆಚ್ಚು ಹೆಚ್ಚು ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಇಳುವರಿ ನಿರೀಕ್ಷೆಯಂತೆ ಆಗದೆ ಇರುವುದರಿಂದ ಕೆಲವು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಕೃಷಿ ವಿಜ್ಞಾನಿ ಡಾ|| ಮಂಜುನಾಥ್‍ಅಭಿಪ್ರಾಯಪಟ್ಟರು.
ಅವರುಜೆ.ಎಸ್.ಬಿ. ಪ್ರತಿμÁ್ಠನದ ವತಿಯಿಂದ ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯ ತೊಳಸಿಕೆರೆ ಗ್ರಾಮದಲ್ಲಿಆಯೋಜಿಸಲಾಗಿದ್ದ ‘ಸಹಜ ಬೇಸಾಯದರೈತರ ಸಶಕ್ತೀಕರಣ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಹಜಕೃಷಿಯನ್ನು ಮರೆತು ಹೆಚ್ಚು ಹೆಚ್ಚು ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆಕಡಿಮೆಯಾಗಿ ಇಳುವರಿ ನಿರೀಕ್ಷೆಯಂತೆ ಆಗದೆ ಇರುವುದರಿಂದ ಕೆಲವು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ರೈತರು ಹತಾಶರಾಗಿ ಕೃಷಿಯಿಂದ ವಿಮುಖರಾಗುತ್ತಿರುವುದು ಹೊಸತೇನಲ್ಲ. ಕೃಷಿಯಿಂದ ಲಾಭವಿಲ್ಲವೆಂದುಎಷ್ಟು ಹಳ್ಳಿಯ ರೈತರು ನಗರಕ್ಕೆ ವಲಸೆ ಹೋಗುತ್ತಿರುವುದು ನೋಡುತ್ತಿದ್ದೇವೆ. ಆದರೆ ಇಂದಿಗೂ ಸಹ ಭೂಮಿಯ ಫಲವತ್ತತೆಕಾಪಾಡಿಕೊಂಡು, ಸಹಜ ಕೃಷಿಗೆ ಮಹತ್ವಅರಿತು, ಹಿರಿಯರಅನುಭವದ ಮಾತುಗಳನ್ನು ಆಲಿಸಿಕೊಂಡು, ಮಣ್ಣನ್ನುದೇವರೆಂದು ತಿಳಿದು, ಯಾವುದೇರಾಸಾಯನಿಕ ವಿಷವುಣಿಸದೆ ಸಹಜ ಬೇಸಾಯ ಮಾಡುತ್ತಿರುವ ಮಹದೇಶ್ವರಬೆಟ್ಟ ವ್ಯಾಪ್ತಿಯರೈತರು ನಿಜಕ್ಕೂಆದರ್ಶಪ್ರಾಯರುಎಂದರು.
ಮಣ್ಣಿನ ನಿರ್ವಹಣೆ : ಸಕಲ ಜೀವರಾಶಿಗಳಿಗೆ ಮಣ್ಣೆಆಧಾರ. ಮಣ್ಣಿಲ್ಲದಿದ್ದರೆ ವ್ಯವಸಾಯವಿಲ್ಲ. ಕೃಷಿ ನಿಂತಿರುವುದೇ ಮಣ್ಣಿನ ಮೇಲೆ. ಸಹಜಕೃಷಿಯಲ್ಲಿ ಮಣ್ಣಿಗೆಯಾವುದೇರಾಸಾಯನಿಕ ಬಳಸುವುದಿಲ್ಲ. ಮಣ್ಣಿಗೆ ಹಸಿರೆಲೆ, ಕೊಟ್ಟಿಗೆಗೊಬ್ಬರವನ್ನು ಬಳಸಲಾಗುತ್ತದೆ. ಅವುಗಳನ್ನು ವೈಜ್ಞಾನಿಕವಾಗಿ ಮಾಡಿಕೊಂಡರೆ ಹೆಚ್ಚು ಅನುಕೂಲ.
ಬಿತ್ತನೆ ಬೀಜ : ಉತ್ತಮ ಬಿತ್ತನೆ ಬೀಜ ಸಂಗ್ರಹಣೆ ಬಹಳ ಮುಖ್ಯ. ಹೊರಗಡೆಯಿಂದ ಬಿತ್ತನೆ ಬೀಜತರುವುದರ ಬದಲು, ನಮ್ಮ ಭೂಮಿಯಲ್ಲೇಚೆನ್ನಾಗಿ ಬೆಳೆದ, ಉತ್ತಮವಾದತೆನೆಯನ್ನು ಹೆಕ್ಕಿ, ಅದರ ಬೀಜಗಳನ್ನು ಸರಿಯಾದರೀತಿಯಲ್ಲಿ ಸಂಗ್ರಹಿಸಿ, ಬಿತ್ತನೆ ಮಾಡುವುದರಿಂದ ಸ್ಥಳೀಯ ತಳಿಗಳ ಅಭಿವೃದ್ಧಿಯನ್ನು ಮಾಡಬಹುದು.
ಮಿಶ್ರ ಬೆಳೆ : ಇನ್ನೊಬ್ಬರ ಮೇಲೆ ಅವಲಂಬನೆಯಾಗದೆ ಮನೆಗೆ ಬೇಕಾಗುವ ಎಲ್ಲಾ ತರಹದ ಬೆಳೆಗಳನ್ನು ಬೆಳೆಸಬೇಕು. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಗುತ್ತದೆ.
ನೈಸರ್ಗಿಕ ಸಂಪನ್ಮೂಲ ಬಳಕೆ : ಸಹಜ ಕೃಷಿಯಲ್ಲಿ ನೈಸರ್ಗಿಕ ವಿಧಾನದ ಮೂಲಕ ಕೃಷಿ ಮಾಡಲಾಗುತ್ತದೆ. ಉಳುಮೆಗೆ ಟ್ರ್ಯಾಕ್ಟರ್ ಬದಲು, ಎತ್ತುಗಳು, ಮರದ ನೇಗಿಲು ಬಳಸಬೇಕು. ಕಳೆನಾಶಕ ಸಿಂಪಡಿಸುವುದಿಲ್ಲ. ಬೆಳೆಯ ಮಧ್ಯದಲ್ಲಿರುವ ಕಳೆ ಕೀಳಲು ಕತ್ತಿ, ಕುಡುಗೋಲುನಂತಹ ಉಪಕರಣ ಬಳಸಬೇಕು. ಕೂರಿಗೆಯಿಂದಲೇ ಬಿತ್ತನೆ ಮಾಡಬೇಕು.
ದೇಸಿ ಜಾನುವಾರುಗಳು : ಸಹಜ ಕೃಷಿಯಲ್ಲಿ ದೇಸಿ ಜಾನುವಾರಗಳ ಬಳಕೆ ಮಾಡಲಾಗುತ್ತದೆ. ಜಾನುವಾರುಗಳಿಲ್ಲದೆ ಸಹಜ ಕೃಷಿ ಅಸಾಧ್ಯ. ಜಾನುವಾರುಗಳ ಸಗಣಿ, ಮೂತ್ರ ಕೃಷಿಗೆ ಬಹಳ ಮಹತ್ವ. ಬೆಳೆ ಕಟಾವಾದ ನಂತರ ಕೃಷಿ ಭೂಮಿಯಲ್ಲಿ ಕುರಿಗಳ ಹಿಂಡು ನಿಲ್ಲಿಸಬೇಕು. ಕುರಿ, ಮೇಕೆಗಳ ಗೊಬ್ಬರ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಹಸಿರೆಲೆ ಗೊಬ್ಬರ : ರೈತನ ದೊಡ್ಡ ಶತ್ರು ಕಳೆ. ಕಳೆಯ ನಿರ್ವಹಣೆ ಮಾಡುವುದು ರೈತರಿಗೆ ಸವಾಲಿಗೆ ಕೆಲಸವಾಗಿದೆ. ಬಿತ್ತಿದ ಕೂಡಲೇ ಬೀಜ ಮೊಳಕೆಯೊಡೆಯುವುದರ ಹಿಂದೆ ಕಾಡುವುದು ಕಳೆ. ಈ ಕಳೆಯಿಂದಲೇ ಗೊಬ್ಬರ ಮಾಡುವುದು ಒಂದು ಕಲೆ. ಸಹಜ ಕೃಷಿ ಪದ್ಧತಿಯಲ್ಲಿ ಕಳೆ ಬೆಳೆಯದಂತೆ ಬೆಳೆಗಳ ನಡುವೆ ಹಸಿರೆಲೆ ಗೊಬ್ಬರವಾಗುವ ಡಯಾಂಚ, ಬೀನ್ಸ್, ಅಲಸಂದಿ ಬೆಳೆಸಿ ಹಸಿರೆಲೆ ಗೊಬ್ಬರವಾಗಿ ಪರಿವರ್ತಿಸಬೇಕು.
ಸ್ಥಳೀಯತೆ : ಮಳೆ ಆಶ್ರಿತ ಕೃಷಿ ಯಾವಾಗಲೂ ಹೆಚ್ಚಿನ ಮಹತ್ವ ಪಡೆದಿದೆ. ಇಲ್ಲಿ ಸ್ಥಳೀಯವಾಗಿ ಬೆಳೆಯುವ ಸಿರಿಧಾನ್ಯಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಮತ್ತು ಭತ್ತಕ್ಕೆ ಹೆಚ್ಚಿನ ಒತ್ತು ಕೊಟ್ಟು ಬೆಳೆಸಬೇಕು . ಸ್ಥಳೀಯ ವೈವಿಧ್ಯತೆಯನ್ನು ರಕ್ಷಿಸಬೇಕು.
ಮಾರಾಟ : ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಪ್ರಕ್ರಿಯೆ ನಡೆಸಬೇಕು. ಸಂಘ ಸಂಸ್ಥೆಗಳು ಇದಕ್ಕೆ ನೆರವು ನೀಡುವ ಮೂಲಕ ಅವರನ್ನು ಬೆಂಬಲಿಸಬೇಕು. ಅಥವಾ ಸರ್ಕಾರದಿಂದ ಎಂಎಸ್‍ಪಿ ದರಕ್ಕೆ ಕೊಂಡುಕೊಳ್ಳುವಂತೆ ನೋಡಿಕೊಳ್ಳಬೇಕು. ಇದಕ್ಕೆ ರೈತ ಸಂಘಟನೆಗಳು ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಜೆಎಸ್‍ಬಿ ಪ್ರತಿμÁ್ಠನದ ಶಶಿಕುಮಾರ್ ಮಾತನಾಡಿ, ಸರ್ಕಾರದ ವತಿಯಿಂದ ಗ್ರಾಮದ ರೈತರ ಜಮೀನುಗಳಗೆ ಕಾಡು ಪ್ರಾಣಿಗಳಿಂದ ರಕ್ಷಣೆ ಒದಗಿಸಲು ಸೋಲಾರ್ ತಂತಿ ಬೇಲಿ, ತಿರುಗಾಡಲು ಉತ್ತಮ ರಸ್ತೆ, ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಿಂದ ಅವರು ಗುಳೆ ಹೋಗುವುದನ್ನು ತಪ್ಪಿಸಿ, ಅತ್ಮಗೌರವದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಬಾಳುವುದಕ್ಕೆ ಸಹಕಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ ಮಾತನಾಡಿದರು.
ಚೆಂಗಡಿಕರಿಯಪ್ಪ, ಚಿಕ್ಕರಾಜು, ಮಾದೇಶ, ಬೊಮ್ಮ, ಮಹದೇವಪ್ರಸಾದ, ಸ್ವಾಮಿ, ಮುರುಗೇಶ, ಜಗದೀಶ, ಚಂದ್ರು, ಕುಮಾರ, ಮಹದೇವು, ಮುಂತಾದ ಗ್ರಾಮಸ್ಥರಿದ್ದರು.