ನೈಸರ್ಗಿಕ ಆಮ್ಲಜನಕದ ಮಹತ್ವ ಅಲೆಯಬೇಕಿದೆ


ಧಾರವಾಡ ಜೂ.7-ಕಳೆದ ಎರಡು ವರ್ಷದಿಂದ ಶ್ವಾಸಕೋಶದ ಸಮಸ್ಯೆಗಳನ್ನು ಎದುರಿಸುತ್ತಾ ಉಸಿರಾಟದಲ್ಲಿ ಆಮ್ಲಜನಕದ ತೊಂದರೆಯನ್ನು ಎದುರಿಸುತ್ತಿದ್ದೇವೆ.ಎರಡನೇ ಅಲೆಯಲ್ಲಿ ಆಮ್ಲಜನಕದ ಬಗ್ಗೆ ಎಲ್ಲರಿಗೂ ತಿಳಿದಂತಾಗಿದೆ.ಹಾಗಾಗಿ ಇನ್ನಾದರೂ ಗಿಡಮರಗಳನ್ನು ಉಳಿಸಿ ಬೆಳೆಸಿ ನೈಸರ್ಗಿಕ ಆಮ್ಲಜನಕದ ಮಹತ್ವ ಅರಿಯಬೇಕು ಎಂದು ರಕ್ತಭಂಡಾರದ ಡಾ.ಉಮೇಶ ಹಳ್ಳಿಕೇರಿ ಹೇಳಿದರು.
ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಧಾರವಾಡ ಮತ್ತು ರೌಂಡ್ ಟೇಬಲ್ ಧಾರವಾಡ ವತಿಯಿಂದ ಕೆಲಗೇರಿ ಕೆರೆಯಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಮನೆಗೆ ಬೇಕಾದ ಸಣ್ಣಸಣ್ಣ ಆಹಾರದ ಸಸಿಗಳನ್ನು ಬೆಳೆದರೆ ಸಾಕು ಎಂದು ಹೇಳಿದರು.ನಿರತ ಸೇವಾ ಸಂಸ್ಥೆಯ ಅಸ್ಲಮಾ ಜಹಾನ ಅಬ್ಬಿಹಾಳ ಮಾತನಾಡಿ ಪರಿಸರದ ಮಹತ್ವ, ಗಿಡಮರಗಳು ನೀಡು ಕೊಡುವೆಗಳ ಬಗ್ಗೆ ವಿವರಿಸಿದರು.
ಸಾಹಿತಿ ಮಾರ್ತಾಂಡಪ್ಪ ಎಮ್ ಕತ್ತಿ ಮಾತನಾಡಿ ಕೊರೊನಾದಿಂದ ಜನರಿಗೆ ದೇಹಕ್ಕೆ ಎಷ್ಟು ಅವಶ್ಯಕ, ಅದನ್ನು ನಾವು ಶುದ್ದವಾಗಿ ಇಟ್ಟುಕೊಂಡರೆ ಮಾತ್ರ ನಮ್ಮ ಜೀವನ ಎಂಬ ಬಗ್ಗೆ ಅರ್ಥವಾಗಿದೆ. ಸಮಾಜದ ಪ್ರತಿಯೊಬ್ಬರು ಮನೆಯಲ್ಲಿ ಅರಸಿ ಮೇಲೆ ಸಣ್ಣ ಗಿಡಗಳನ್ನು ನೆಟ್ಟು ಪೆÇೀಷಿಸಿ ಆಮ್ಲಜನಕ ಪಡೆದು ಅದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಸುನೀಲ ಬಾಗೇವಾಡಿ, ಜೆ.ಎಸ್.ಎಸ್ ಸಂಸ್ಥೆಯ ಮಹಾವೀರ ಉಪಾಧ್ಯಾಯ, ರುಡ್ ಸೆಟ್ ನ ಮಾಜಿ ನಿರ್ದೇಶಕರಾದ ಮಹಾಂತೇಶ ವೀರಾಪೂರ ಮಾತನಾಡಿದರು.ಈ ಸಂದರ್ಭದಲ್ಲಿ ಬಿಡಿ ಎಸ್.ಎಸ್.ನ ನಿರ್ದೇಶಕರಾದ ಫಾದರ್ ಪೀಟರ್ ಆಶೀರ್ವಾದ, ಅರಣ್ಯ ಇಲಾಖೆಯ ದೀಪಾ ಗಡಗಿ ಮುಂತಾದವರು ಹಾಜರಿದ್ದರು.