
ಇಂಡಿ:ಮೇ.25:ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ 61 ಸಾವಿರಕ್ಕೂ ಅಧಿಕ ಮತದಾರರು ಆಶೀರ್ವದಿಸಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ವಿರೋಧಿಗಳ ಕುತಂತ್ರದಿಂದ ಸೋತಿದ್ದೇನೆ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಎಂದು ತಮ್ಮ ಸೋಲನ್ನು ವಿಶ್ಲೇಷಿಸಿಕೊಂಡರು.
ಪಟ್ಟಣದ ರೈಲ್ವೇ ಸ್ಟೇಷನ್ ರಸ್ತೆಯ ಕಣ್ಣಿ ಕಟ್ಟಡದಲ್ಲಿ ಆಯೋಜಿಸಿದ ಜೆಡಿಎಸ್ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.
ಇಂಡಿ ಮತಕ್ಷೇತ್ರದ ಸಮಸ್ತ ನಾಗರೀಕರು 62 ಸಾವಿರ ಮತಗಳನ್ನು ನೀಡಿ, ಒಬ್ಬ ಹೋರಾಟಗಾರಾರನ ದುಡಿಮೆಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಿ. ನಾನು ತಮ್ಮಗೆ ಕೋಟಿ ಕೋಟಿ ನಮನಗಳು ಸಲ್ಲಿಸುತ್ತೇನೆ. ಜೆಡಿಎಸ್ ಕಾರ್ಯಕರ್ತರು ಹಾಗೂ ನನ್ನ ಅಭಿಮಾನಿಗಳು ಎದೆಗುಂದದೆ ಹೋರಾಟ ಮಾಡಿ, ನಾನು ನಿಮ್ಮ ಜೊತೆ ಸದಾ ಇರುತ್ತೇನೆ ಎಂದ ಅವರು, ಕಾಂಗ್ರೆಸ್‍ನ ಗ್ಯಾರಂಟಿ ಕಾರ್ಡ್ ಮತದಾರರನ್ನು ಆರ್ಕಷಣೆ ಮಾಡಿದ ಪರಿಣಾಮ ನಾನು ಸೋಲು ಅನುಭವಿಸಬೇಕಾಯಿತು ಎಂದರು.
ನಾನು ಸಾಮಾಜಿಕ ಜೀವನಕ್ಕೆ ಕಾಲಿಟ್ಟ ನಂತರ ಸರ್ವ ಜಾತಿ ಜನಾಂಗದ ಹಿತ ಕಾಪಾಡುವ ದೃಷ್ಠಿಯನ್ನಿಟ್ಟುಕೊಂಡವನಾಗಿದ್ದು ಯಾವದೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಾನು ಸಂಪರ್ಕದಲ್ಲಿಟ್ಟು ಕೊಂಡಿದ್ದೇನೆ. ಈ ಸೋಲು ಗೆಲವು ಇಲ್ಲಿಗೆ ಬಿಟ್ಟು ಪ್ರತಿಯೊಂದು ಬೂತ್ ಮಟ್ಟದಲ್ಲಿ ಮತಬಾರದಿರಲು ಕಾರಣಗಳನ್ನು ಹುಡುಕಿಕೊಳ್ಳಿ ಭಾವವೇಶಕ್ಕೆ ಒಳಪಡದೆ ಸಮಾಜದಲ್ಲಿ ಸಾಮರಸ್ಯ ಕದಡದೇ ಪಕ್ಷ ಬಲಿಷ್ಟ ಗೊಳಿಸುವ ಮೂಲಕ ಮುಂಬರುವ ಜಿ.ಪಂ,ತಾ.ಪಂ ಮತ್ತು ಸಂಸತ್ತು ಚುನಾವಣೆಯಲ್ಲಿ ಮತ ವಿಭಜನೆಯಾಗದಂತೆ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಕೇಂದ್ರಿಕರಿಸಬೇಕು ಎಂದರು.
ರೇವಣಸಿದ್ದ ಗೋಡಕೆ, ಟಿ.ಎಸ್. ಪೂಜಾರಿ, ನಾಗೇಶ ತಳಕೇರಿ, ಶರಣು ಡಂಗಿ, ಸುನಂದಾ ವಾಲಿಕಾರ, ಮುತ್ತಪ್ಪ ಪೆÇೀತೆ ಮಾತನಾಡಿದರು.
ಮರೇಪ್ಪ ಗಿರಣಿವಡ್ಡರ, ಶ್ರೀಶೈಲಗೌಡ ಪಾಟೀಲ, ಜಬ್ಬಾರ್ ಅಣ್ಣಾ ಅರಬ್, ಸಿದ್ದು ಡಂಗಾ, ಶರಣಪ್ಪ ಹೂಸೂರ, ಸದ್ದಾಂ ಅರಬ್, ಮಹಿಬೂಬ ಬೇವನೂರ, ಅಲ್ಲಾ ಮೆಟಗಾರ, ಪುಂಡು ಅಲಬಗೋಂಡ, ಯಲಗೋಂಡ ಪೂಜಾರಿ, ಎಮ್.ಎಸ್. ಪೂಜಾರಿ, ರಾಜು ಮುಲ್ಲಾ, ನಿಯಾಝ್ ಅಗರಖೇಡ, ಫಜಲು ಮುಲ್ಲಾ, ಬಾಳು ರಾಠೋಡ, ರವಿ ಕೆಂಗಾರ, ಅರವಿಂದ ಮೈದರಗಿ, ಅಪ್ಪು ಸಾಹುಕಾರ ಜಮಖಂಡಿ, ಎಮ್.ಡಿ. ವಾಲಿಕಾರ ಮತ್ತಿತರಿದ್ದರು.