ನೈಜ ಸಮಸ್ಯೆ ಮರೆತ ಮಾಧ್ಯಮ: ರಾಹುಲ್ ಕಿಡಿ

ಜಮ್ಮು,ಜ.೨೦- ದೇಶದಲ್ಲಿ ಆರೆಸ್ಸೆಸ್- ಬಿಜೆಪಿ ಜೊತೆಗೆ ಮಾಧ್ಯಮಗಳು ಸಮಾಜದ ನೈಜ ಸಮಸ್ಯೆಗಳ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಇದಕ್ಕೆ ಆರ್ ಎಸ್ ಎಸ್ ಪ್ರೇರಣೆ ಜೊತೆಗೆ ಸಮಾಜದ ಸಮಸ್ಯೆಗಳನ್ನು ಬಿಂಬಿಸಬೇಕಾದ ಮಾಧ್ಯಮಗಳು ಜನರಿಗೆ ನೈಜ ವಿಷಯ ಮುಂದಿಡುವ ಬದಲು ದಿಕ್ಕು ತಪ್ಪಿಸುತ್ತಿವೆ ಎಂದು ದೂರಿದ್ದಾರೆ.
ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆ ಕೊನೆಯ ಹಂತವಾಗಿ ಜಮ್ಮು ಕಾಶ್ಮೀರ ಪ್ರವೇಶಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸುಳ್ಳುಗಳನ್ನು ಬಿತ್ತರಿಸುವ ಮೂಲಕ ಜನರನ್ನು ಗಮನ ಬೇರೆ ಕಡೆ ಸೆಳೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ
ಜನರ ನೋವು ಹಂಚಿಕೊಳ್ಳುವೆ:
ಭಾರತ್ ಜೋಡೋ ಯಾತ್ರೆಯ ಕೊನೆಯ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದೆ.ಲಖನ್‌ಪುರ ಗಡಿಯಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ.
ಪೂರ್ವಜರು ಬದುಕಿದ ಭೂಮಿಗೆ ಕಾಲಿಟ್ಟಿರುವುದು ಖುಷಿ ಕೊಟ್ಟಿದೆ.ಪೂರ್ವಜರು ಕಾಶ್ಮೀರದಿಂದ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಇದೀಗ ಪಾದಯಾತ್ರೆಯಲ್ಲಿ ಪೂರ್ವಜರ ನಾಡಿಗೆ ಭೇಟಿ ನೀಡಿರುವುದು ಖುಷಿಕೊಟ್ಟಿದೆ ಎಂದಿದ್ದಾರೆ.
ಮರಳಿ ಪೂರ್ವಜರ ಮನೆಗೆ ಬಂದಿದ್ದೇನೆ, ಜನರ ನೋವು ಹಂಚಿಕೊಳ್ಳಲು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಗಡಿಯಲ್ಲಿ ಅದ್ಧೂರಿ ಸ್ವಾಗತ:
ಭಾರತ್ ಜೋಡೋ ಯಾತ್ರ ಕೊನೆ ಹಂತಕ್ಕೆ ಪ್ರವೇಶಿಸಿದ್ದು ಜಮ್ಮು ಕಾಶ್ಮೀರದ ಗಡಿ ಪ್ರವೇಶಿಸಿದ್ದು ರಾಹುಲ್ ಗಾಂಧಿ ನೇತೃತ್ವದ ಯಾತ್ರೆಗೆ ಬಾರಿ ಜನ ಬೆಂಬಲ ವ್ಯಕ್ತವಾಗಿದೆ.
ಸೆಪ್ಟಂಬರ್ ೭ ರಂದು ಶ್ರೀಪರಂಬೂರಿನಲ್ಲಿ ತಂದೆ ರಾಜೀವ್ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿ ಕನ್ಮಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿ ರಾಹುಲ್ ಗಾಂಧಿ ಅವರು ಈ ತಿಂಗಳ ೩೦ ರಂದು ಜಮ್ಮುನಲ್ಲಿ ದೊಡ್ಡ ಮಟ್ಟದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸಮಾನ ಮನಸ್ಕ ೨೧ ಕ್ಕೂ ಅಧಿಕ ವಿವಿಧ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ.