ನೈಜ ಘಟನೆಯ ಲಕ್ಷ್ಯ

ಬಹುತೇಕ ಉತ್ತರ ಕರ್ನಾಟಕದ ಮಂದಿ ಸೇರಿಕೊಂಡು ನಿರ್ಮಿಸಿರುವ ಚಿತ್ರ ” ಲಕ್ಷ್ಯ” ರವಿ ಸಾಸನೂರ್ ,ನಿರ್ದೇಶನ ಮಾಡಿರುವ ಲಕ್ಷ್ಯ ಚಿತ್ರದ ಟ್ರೈಲರ್ ಅನ್ನು ನಿರ್ದೇಶಕ ಪವನ್ ಒಡೆಯರ್ ಕುಮಾರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನೈಜ ಘಟನೆಗಳನ್ನು ಆಧರಿಸಿ ‌ ಸಾಮಾಜಿಕ ಕಳಕಳಿಯ ವಿಷಯವನ್ನು ಇಟ್ಟುಕೊಂಡು ನಿರ್ಮಿಸಿರುವ ಚಿತ್ರವಿದು .ಮುಂದಿನ ವಾರ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

ನಿರ್ದೇಶಕ ರವಿ ಸಾಸನೂರು , ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಘಟನೆಗಳೇ ಚಿತ್ರದಲ್ಲಿದ್ದು ಎಲ್ಲರಿಗೂ ಚಿತ್ರ ಹೊಂದಿಕೊಳ್ಳುತ್ತದೆ.. ಚಿತ್ರದಲ್ಲಿ ಗೋಕಾಕ್ ಫಾಲ್ಸ್ ನ್ನು ವಿಭಿನ್ನವಾಗಿ ತೋರಿಸಿದ್ದೇವೆ. ಬೆಳಗಾವಿ, ಸಾಂಗ್ಲಿ, ಗೋಕಾಕ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ, ಕಮರ್ಷಿಯಲ್ ಚಿತ್ರವಿದು ಎಂದು ಹೇಳಿದರು.

ಒಳ್ಳೆಯ ಅಪ್ಪ ಅಮ್ಮ ಭ್ರಷ್ಟಾಚಾರ ಅಧಿಕಾರಿಗಳನ್ನು ತೆರೆಯ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ನಾಯಕ ಸಂತೋಷ್ ರಾಜ್ ,ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ೪ ವರ್ಷದ ಹಿಂದೆ ಶುರುವಾಗಿದ್ದ ಚಿತ್ರದುಡ್ಡಿನ ಹಿಂದೆ ಬಿದ್ದಿರುವ ವ್ಯಕ್ತಿಯಿಂದ ಇತರರಿಗೆ ಯಾವರೀತಿ ಪರಿಣಾಮ ಬೀರುತ್ತೆ. ಆತನಿಗೆ ಹೇಗೆ ಪರಿಣಾಮ ಆಗುತ್ತೆ ಎಂಬುದನ್ನು ತುಂಬಾ ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ಹೇಳಲಾಗಿದೆ ಎಂದರು.

ನಿತಿನಾದ್ವಿ , ಪಿಕೆ ಎನ್ನುವ ಪಾತ್ರ, ಸಮಾಜದಲ್ಲಿ ಜವಾಬ್ದಾರಿ ಇರುವಂಥ ವ್ಯಕ್ತಿಗಳು ಅದನ್ನು ಮರೆತಾಗ ಅವರಿಗೆ ಬುದ್ದಿ ಕಲಿಸುವಂಥ ಪಾತ್ರ ಎಂದು ಪರಿಚಯಿಸಿಕೊಂಡರು. ಹಿರಿಯನಟಿ ಮಾಲತಿಶ್ರೀ ಮೈಸೂರು ಮಾತನಾಡಿ ನಾನೂ ಸಹ ಉತ್ತರ ಕರ್ನಾಟಕದವಳು, ಅದೇ ನೆಲದ ಮಹಿಳೆಯಾಗಿ ಚಿಕ್ಕ ಪಾತ್ರ ಮಾಡಿದ್ದೇನೆ ಎಂದರು.

ಜುವಿನ್ ಸಿಂಗ್ ಚಿತ್ರಕ್ಕೆ ಸಂಗೀತ‌ನೀಡಿದ್ದಾರೆ ಬನಹಟ್ಟಿಯ ಆನಂದ್ ಶಿವಯೋಗಪ್ಪ ಕೊಳಕಿ, ಸುಧೀರ್ ದೇವೇಂದ್ರ ಹುಲ್ಲೋಳಿ, ಶಿವಕುಮಾರ್ ಎ, ರವಿ ಸಾಸನೂರ್ ಚಿತ್ರದ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.