ನೈಜ ಕಾರ್ಯಕರ್ತರೇ ಪಕ್ಷದ ಆಸ್ತಿ: ವೆಂಕಟಪ್ಪ ನಾಯಕ

ಹುಣಸಗಿ,ಜ.5-ಕಳೆದ ನಾಲ್ಕುವರೆ ವರ್ಷಗಳಿಂದ ಸುರಪೂರ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಕ್ಷೇತ್ರದ ಶಾಸಕರು ಕೇವಲ ಕೇಲವು ನಾಯಕರ ಬಗ್ಗೆ ಟೀಕೆ ಮಾಡುವುದರಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದರು.
ಅವರು ಹುಣಸಗಿ ಐಬಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವನ್ನು ವಲಯ ಮತ್ತು ಬೂತ್ ಮಟ್ಟದಲ್ಲಿ ಸಂಘಟಿಸುವ ಕೆಲಸ ನಿರಂತರವಾಗಿ ನಡೆದಿದ್ದು ಕಾಂಗ್ರೆಸ್ ಪಕ್ಷದ ಇತಿಹಾಸ, ಇದರ ಕ್ರಾಂತಿಕಾರಿ ಕಾಯ್ದೆಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಬಗ್ಗೆ ಜನಪರ ಕಾಳಜಿಯಿಂದ ಮಾಡಿರುವ ಕೆಲಸಗಳು ಜನರಿಗೆ ಮನ ಮುಟ್ಟುವಂತೆ ತಿಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಿಗೌಡ ಕುಪ್ಪಿ, ಹಿರಿಯ ಮುಖಂಡರಾದ ನಾಗಣ್ಣ ಸಾಹುಕಾರ ದಂಡಿನ, ಸಿದ್ದಣ್ಣ ಸಾಹುಕಾರ ಮಲಗಲದಿನ್ನಿ, ಮಲ್ಲಣ್ಣ ಸಾಹುಕಾರ್ ನರಸಿಂಗ ಪೇಟ, ವೆಂಕೋಬ ಯಾದವ, ನಿಂಗರಾಜ್ ಬಾಚಿಮಟ್ಟಿ, ಆರ್, ಎಮ್, ರೇವಡಿ, ಚಂದ್ರಶೇಖರ ದಂಡಿನ, ಸಿದ್ದು ಮುದುಗಲ್, ಸುಗಪ್ಪ ಚಂದಾ, ಬಸವರಾಜ ಸಜ್ಜನ್, ರವಿ ಮಲಗಲದಿನ್ನಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.