
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.04: ಕಥೆ ,ಕವಿತೆ ,ಕಾದಂಬರಿಗಳಲ್ಲಿ ಕವಿಗಳು ಚಿತ್ರಿಸಿದ ನೋವಿನ ಕಥೆಗಳಿಗೆ ಸಂಭಾಷಣೆ ರೂಪ ಕೊಟ್ಟು ಪಾತ್ರ ಹಾಡು ಸಂಗೀತ, ಬೆಳಕಿನಾಟಕಗಳ ಮೂಲಕ ಕಥೆಗೆ ಜೀವ ತುಂಬಿ ಭೂತದ ಗಾಯಗಳಿಗೆ ವರ್ತಮಾನದ ವಿಷಯಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಪರಿ ರಂಗಭೂಮಿಯಿಂದ ಸಾದ್ಯತೆ ಇದೆ ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ ಬಸವರಾಜ ಜಿಲ್ಲಾಧ್ಯಕ್ಷರು ಅಭಿಪ್ರಾಯಪಟ್ಟರು.
ಅವರು ನಿನ್ನೆ ಸಂಜೆ ನಗರದ ರಾಘವ ಕಲಾ ಮಂದಿರದಲ್ಲಿ. ರಂಗ ಜಂಗಮ ಸಂಸ್ಥೆ ,ಡಿ ಕಗ್ಗಲ್ ಮತ್ತು ಆಲಾಪ್ ಸಂಗೀತ ಕಲಾ ಟ್ರಸ್ಟ್ ,ಬಳ್ಳಾರಿ ಜಂಟಿಯಾಗಿ ಆಯೋಜಿಸಿದ್ದ ರಂಗ ಶ್ರಾವಣ ಕಾರ್ಯಕ್ರಮ
ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಹೊಸ ಅಲೆಯ ನಾಟಕವನ್ನು ಪರಿಚಯಿಸುವ ಮತ್ತು ಹೊಸ ತಲೆಮಾರಿಗೆ ಬಣ್ಣದ ಬಯಕೆಯನ್ನ ಶಿಕ್ಷಣದ ಮೂಲಕ ನೀಡಿದಾಗ ಪರಂಪರೆ ಮುಂದುವರೆಯುತ್ತದೆ ಎಂದು ತಿಳಿಸಿದರು.
ಯೋಚಿತ ರೆಡ್ಡಿ, ಪ್ರತೀಕ,ಅನಿಷ ಮೈತ್ರಿ, ಗೌತಮಿ ದೇವರಾಜ್, ಪಂಡಿತ್ ಗುರು ರಾಘವೇಂದ್ರ ಹಾಗೂ ಹರ್ಷ ಇವರಗಳಿಂದ ಸುಗಮ ಸಂಗೀತ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಕೆ ಚೆನ್ನಪ್ಪ ಮಾತನಾಡಿ, ಕಲಾವಿದರ ಮೂಲಕ ಸಾಮಾನ್ಯ ಜನರ ಬದುಕಿನ ನೆಲೆಗಳನ್ನು ಅರಿಯುವ ಅರಿತು ನಡೆಯುವ ಹಾಗೆ ಮಾರ್ಗದರ್ಶನ ಮಾಡುತ್ತದೆಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಪ್ರೊಫೆಸರ್ ಎನ್. ಶಾಂತನಾಯ್ಕ್ ರವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಅಕ್ಷರ ದಾಸೋಹ ಸಾಕ್ಷರತ ಸಹಾಯಕ ನಿರ್ದೇಶಕ ಕೆ ಜೆ ಆಂಜನೇಯ, ಬಿ ಎಂ ಬಸವರಾಜ್, ಮಾಲೀಕರು ಸೋಮೇಶ್ವರ ಟ್ರಾವೆಲ್ಸ್ ಬಳ್ಳಾರಿ. ಕೋಟೇಶ್ವರ ರಾವ್ ಅಧ್ಯಕ್ಷರು ರಾಘವ ಮೆಮೋರಿಯಲ್ ಅಸೋಸಿಯೇಷನ್. ರಂಗ ಜಂಗಮ ಸಂಸ್ಥೆಯ ಡಾಕ್ಟರ್ ಅಣ್ಣಾಜಿ ಕೃಷ್ಣಾರೆಡ್ಡಿ, ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಕಲಾವಿದರು ಉಪಸ್ಥಿತರಿದ್ದರು.
ನಂತರ ನಿರ್ಗಂಧಿತ ತಂಡದಿಂದ ಗಾಯಗಳು ನಾಟಕ ಪ್ರದರ್ಶನ ನಡೆಯಿತು.