ನೇಹ ಹೀರೆಮಠ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಏ.25:- ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಯನ್ನು ಹಾಡು ಹಗಲೆ ಎಲ್ಲರ ಎದುರಿಗೆ ಕೋಲೆ ಮಾಡಿದ್ದರೆ ಅದನ್ನು ಖಂಡಿಸುವ ಬದಲು ವಯಕ್ತಿಕ, ಪ್ರೀತಿ, ಪ್ರೇಮ ಎಂದು ಸರ್ಕಾರದ ಹೇಳಿಕೆ ನಾಚೀಕೆ ತರಿಸುವಂತೆ ಇದೆ ಎಂದು ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭದ ಮಾಜಿ ಅಧ್ಯಕ್ಷ ಹಾಗು ಜಿ.ಪಂ.ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ತಾ.ವೀರಶೈವ ಲಿಂಗಾಯತ ವೇದಿಕೆಯಿಂದ ಹಮ್ಮಿಕೊಂಡಿದ್ದ ಹುಬ್ಬಳ್ಳಿಯಲ್ಲಿ ಕೋಲೆಯಾದ ಬಿಸಿಎ ವಿಧ್ಯಾರ್ಥಿನಿ ನೇಹ ಹೀರೆಮಠ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ವೀರಶೈವ ಲಿಂಗಾಯತ ಸಮಾಜ ಒಟ್ಟಿಗೆ ಸೇರಿ ಹೋರಾಟ ಮಾಡಬೇಕಾಗಿದೆ, ಯಾವುದೆ ವಿಚಾರದಲ್ಲಿಯು ಸಹ ಪಕ್ಷಾತೀತವಾಗಿ ಒಗ್ಗೂಡಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು, ವೀರಶೈವ ಲಿಂಗಾಯತ ಸಮಾಜ ಒಬ್ಬ ಹೆಣ್ಣು ಮಗಳು ಕೋಲೆಯಾದರೆ ಅದನ್ನು ಸಮಾಜದಿಂದ ಪ್ರತಿಭಟಿಸಬೇಕು, ಎಲ್ಲಾ ಜಾತಿ ಜನಾಂಗದವರ ಜೊತೆ ಪ್ರೀತಿ ವಿಶ್ವಾಸ ಗಳಿಸುವುದರ ಜೊತೆಗೆ ನೋದವರ ಪರವಾಗಿ ನಿಲ್ಲಬೇಕು ಎಂದರು.
ವಿದ್ಯಾರ್ಥಿ ನೇಹ ಹೀರೆಮಠ್ ಕೋಲೆ ಅದು ಪೂರ್ವ ನಿಯೋಜಿತ ಅಥವಾ ಉದ್ದೇಶ ಪೂರ್ವಕವಾಗಿ ನಡೆದ ಕೋಲೆನ ಸರ್ಕಾರ ಸಮಗ್ರವಾಗಿ ತನಿಖೆ ನಡೆಸಿ ಕೊಲೆಗಡುಕನಿಗೆ ಗಲ್ಲು ಶಿಕ್ಷೆ ವಿಧಿಸಲಿ ಎಂದು ಒತ್ತಾಯಿಸಿದರು.
ಬಳಿಕ ವೀರಶೈವ ಲಿಂಗಾಯತ ಸಮಾಜ ಮುಖಂಡ ರುದ್ರೇಶ್ ಮಾತನಾಡಿ ಹುಬ್ಬಳ್ಳಿಯಲ್ಲಿ ಕೊಲೆಯಾದ ವಿದ್ಯಾರ್ಥಿ ನೇಹ ಹೀರೆಮಠ್ ಅವಳಿಗೆ ಹಲವಾರು ಬಾರಿ ಮಾನಸಿಕ ಕಿರುಕುಳ ಕೊಡುತ್ತಿದ್ದ ಕೊಲೆಗಡುಕ ಫಯಾಜ್, ಏಕಾಏಕಿ ಒಂದಲ್ಲ ಒಂಬತ್ತು ಕಡೆ ಚುಚ್ಚಿದ್ದಾನೆ ಇದು ಮತೀಯ ಕೋಲೆಯಾಗಿದೆ, ನೇಹಳ ಮೇಲೆ ಪ್ರೀತಿ ಇದ್ದರೆ ಕೋಲೆ ಮಾಡುತ್ತಿರಲಿಲ್ಲ, ಪ್ರೀತಿ ಮಾಡಿದವರು ಕೋಲೆ ಮಾಡಲ್ಲ, ಒಂದು ವೇಳೆ ಇಬ್ಬರು ಪ್ರೀತಿ ಮಾಡಿದ್ದರೆ ಅವಳನ್ನು ಕೊಂದು ತಾನು ಸಹ ಸಾಯುತ್ತಿದ್ದ, ಆದ್ದರಿಂದ ಇದು ಮುಸ್ಲಿಂ ಸಮುದಾಯದ ಖಂಡಿಸಿ ಬೇಕು, ಇಂತಹ ಯುವಕರನ್ನು ಆದಷ್ಟು ಮಟ್ಟಹಾಕಿ, ಇಲ್ಲದಿದ್ದರೆ ಸಮಾಜಘಾತುಕ ಶಕ್ತಿಯಾಗಿ ಬೆಳೆಯುತ್ತಾರೆ ಎಂದು ಖಂಡಿಸಿದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡರು ನೀವು ರಾಜಕೀಯವಾಗಿ ಯಾವ ಪಕ್ಷದಲ್ಲಿ ಆದರು ಗುರುತಿಸಿ ಕೊಳ್ಳಿ ಆದರೆ ಸಮಾಜ ಅಂತ ಬಂದಾಗ ಒಗ್ಗೂಡಿಸಿ ಕೆಲಸ, ಹೋರಾಟ ಮಾಡ ಬೇಕು, ಇತ್ತೀಚೆಗೆ ನಮ್ಮ ಸಮಾಜ ಒಬ್ಬ ಪೆÇಲೀಸ್ ಪೇದೆ ಏನ್ನನ್ನು ತಪ್ಪು ಮಾಡದೇ ಕಾಂಗ್ರೆಸ್ ಪಕ್ಷದ ಮುಖಂಡರ ಮಗ ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಮಾಡುವಾಗ ಮಾಡಬೇಡ ಎಂಬ ಕಾರಣಕ್ಕೆ ಅವರನ್ನು ತನಿಖೆ ಮಾಡಿಸಿ ವರ್ಗಾವಣೆಯನ್ನು 24 ಗಂಟೆಗಳಲ್ಲಿ ಮಾಡಿಸಲಾಯಿತು, ಸಮಾಜದ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಶ್ನೆ ಮಾಡಲಿಲ್ಲ, ಉಳಿದವರು ಖಂಡಿಸಲಿಲ, ನಮ್ಮ ಒಗ್ಗಟ್ಟನ್ನು ಎಲ್ಲೋ ಒಂದು ಕಡೆ ಒಡೆಯವ ಹುನ್ನಾರ ಮಾಡಲಾಗಿದೆ ಎಂದು ಆರೋಪ ಮಾಡಿದರು. ಇನ್ನಾದರು ಎಚ್ಷೆತ್ತು ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಕೈ ಜೊಡಿಸಿ ಕಾರ್ಯ ನಿರ್ವಹಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ರೈತ ಮುಖಂಡ ಸರಗೂರು ನಟರಾಜ್, ಪುರಸಭಾ ಸದಸ್ಯ ಕೆ.ಪಿ.ಪ್ರಭುಶಂಕರ್, ತೋಂಟದಾರ್ಯ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮಾತನಾಡಿದರು.ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೇರ್ಯ ಪ್ರಕಾಶ್, ರೂಪಸತೀಶ್, ದಾಕ್ಷಾಯಿಣಿ, ಮಲ್ಲಪ್ಪ, ಮುಖಂಡ ಚಂದ್ರಶೇಖರ್, ಲಾಲನಹಳ್ಳಿ ಮಹೇಶ್, ಎಸ್.ವಿ.ಎಸ್ ಸುರೇಶ್, ಲಯನ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಲೋಕೇಶ್, ಹಾಡ್ಯ ಪಟೇಲರು, ಗಿರೀಶ್, ಮಹೇಶ್ ,ಜಿತೇಂದ್ರ, ಕುಪ್ಪೆ ಮಹೇಶ್ ಮೊದಲಾದವರು ಇದ್ದರು.