ನೇಹಾ ಹಿರೇಮಠ ಹತ್ಯೆ ಖಂಡಿಸಿ ಇಲಕಲ್ಲದಲ್ಲಿ ತಹಸೀಲ್ದಾರ್‍ಗೆ ಮನವಿ

ಇಲಕಲ್ಲ : ಏ.20:ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ನಗರದ ಎಸ್.ಆರ್. ಕಂಠಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಪ್ರತಿಭಟನೆಯಲ್ಲಿ ವಾಲ್ಮೀಕಿ ವೃತ್ತ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಸತೀಶ ಕೂಡಲಗಿ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆ ಕಾರ್ಯಕರ್ತರು ಮಾತನಾಡಿ, ರಾಜ್ಯದಲ್ಲಿ ಲವ್ ಜಿಹಾದ್‍ಗೆ ಮತ್ತೆ ಹಿಂದು ಯುವತಿ ಬಲಿಯಾಗಿದ್ದಾಳೆ. ಕೊಲೆ ಆರೋಪಿ ಫಯಾಜ್ ಪ್ರೀತಿಸುವ ಹೆಸರಿನಲ್ಲಿ ಜಿಹಾದ್ ಕೃತ್ಯ ಎಸಗಿದ್ದಾನೆ. ಕೂಡಲೇ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಎಂ.ಆರ್. ಪಾಟೀಲ, ರಾಜೇಂದ್ರ ಆರಿ, ತೃಪ್ತಿ ಸಾಲಿಮಠ, ಗುರುಲಿಂಗ ಅಂಗಡಿ, ರಾಘು ಮ್ಯಾಕುಲ್, ಮಲ್ಲು ಕುಂಬಾರ, ವಿರೂಪಾಕ್ಷಿ ಹಿರೇಮಠ, ಪವನ ಪವಾರ, ಪವನ ಕುಮಾರ ಸಾರಂಗಮಠ ಪೃಥ್ವಿ ಹಿರೇಮಠ ವೀರೇಶ ಬಲಕುಂದಿ ,ಶಿವು ಚಿಲವೇರಿ, ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಪಾಲ್ಗೊಂಡಿದ್ದರು.