ನೇಹಾ ಹಿರೇಮಠ ಹತ್ಯೆ ಖಂಡಿಸಿ ಪ್ರತಿಭಟನೆ

ಚಿಟಗುಪ್ಪ:ಏ.23: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಗೈದ ಕ್ರೂರಿಫಯಾಜ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ವಿವಿಧ ಸಮಾಜದ ಮುಖಂಡರು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಪಟ್ಟಣದ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದ ಮುಖಾಂತರ ಶಿವಾಜಿ ವೃತ್ತದ ವರಗೆ ಪ್ರತಿಭಟನೆ ಮೆರವಣಿಗೆ ಮಾಡಿ ಕ್ರೂರಿ ಫಯಾಜಿಗೆ ಗಲ್ಲು ಶಿಕ್ಷೆ ಇಲ್ಲವಾದರೆ ಎನ್ಕೌಂಟರ್ ನಡೆಸಬೇಕೆಂದು ರಾಜಪಾಲರಿಗೆ ಬರೆದ ಪತ್ರ ತಹಶೀಲ್ದಾರ್ ರವೀಂದ್ರ ದಾಮಾ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಪಾಟೀಲ್ ಹಿಂದೂ ಹೆಣ್ಣು ಮಗಳ ಮೇಲಿನ ಕೃತ್ಯ ಅತ್ಯಂತ ಕ್ರೂರವಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಜನತೆಗೆ ಸುರಕ್ಷತೆ ಇಲ್ಲದಾಗಿದೆ. ವಿದ್ಯಾರ್ಥಿನಿ ಹತ್ಯೆ ಮಾಡಿರುವ ಕ್ರೂರಿಗೆ ಎನ್‍ಕೌಂಟರ್ ಮಾಡುವ ಮೂಲಕ ಕೊಲೆಗಡುಕರಿಗೆ ಎಚ್ಚರಿಕೆ ನೀಡಬೇಕಿದೆ. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಹೆತ್ತವರು ತೀವ್ರ ದುಃಖದಲ್ಲಿದ್ದು, ಕೊಲೆಗಡುಕ ರಾಕ್ಷಸನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ಅಮೀತ ತೊಗಲೂರ್, ಅಮರ ರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜಗೋಪಾಲ್ ಐನಪುರ್, ಪ್ರವೀಣ ರಾಜಾಪುರ್, ಆಕಾಶ ಗುತ್ತೆದಾರ್, ಸಚಿನ ಮಠಪತಿ, ರಾಜಕುಮಾರ ಗುತ್ತೆದಾರ್, ಪವನ ಪೂಜಾರಿ, ಸಾಯಿ ಶಿರ್ಕೆ, ಪ್ರಶಾಂತ ಜವಳಿ, ಬಸಪ್ಪ ಪಡಗಿ ರಾಜು ಪೂಜಾರಿ ಸೇರಿದಂತೆ ಹಿಂದೂ ಪರ ಸಂಘಟನೆಯವರು ಉಪಸ್ಥಿತರಿದ್ದರು.