ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆ

ಬೀದರ್:ಏ.23: ಇತ್ತಿಚೀಗೆ ಹುಬ್ಬಳ್ಳಿಯಲ್ಲಿ ಹಾಡಹಗಲೆ ಕಾಲೇಜು ಕ್ಯಾಂಪಸ್‍ನಲ್ಲಿ ಫಯಾಜ್ ಎನ್ನುವ ಮುಸ್ಲಿಮ್ ಯುವಕ ನೇಹಾ ಹಿರೇಮಠ ಎಂಬುವವಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಖಂಡಿಸಿ ಭಾರತೀಯ ಜನತಾ ಪಕ್ಷ, ಜ್ಯಾತ್ಯಾತೀತ ಜನತಾ ದಳ ಹಾಗೂ ಹಿಂದುಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಗ್ರಹ ಸಚಿವ ಡಾ.ಜಿ ಪರಮೇಶ್ವರ ಅವರ ವಿರೂದ್ಧ ಧಿಕ್ಕಾರ ಕೂಗಿದರು.
ನಂತರ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಅನೇಕರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಈಸ್ವರ ಖಂಡ್ರೆ ಅವರು ಅಖಿಲ ಭಾರತೀಯ ವೀರಶೈವ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನಮ್ಮ ಸಮಾಜದ ಓರ್ವ ಯುವತಿಗೆ ನ್ಯಾಯ ಕೊಡಿಸಲು ಸಾದ್ಯವಾಗಿಲ್ಲವೆಂದರೆ ಆ ಸ್ಥಾನದಲ್ಲಿ ಇರಬೇಕಾ? ಅದು ಅಲ್ಲದೇ ಅವರ ತಂದೆ ನಿಮ್ಮದೇ ಪಕ್ಷದ ಕಾರ್ಪೊರೆಟರ್ ಆಗಿದ್ದಾರೆ. ಈ ನಿಟ್ಟಿನಲ್ಲಿ ಆರೋಪಿ ವಿರೂದ್ಧ ಕೂಡಲೇ ಕ್ರಮ ಜರುಗಿಸದಿದ್ದಲ್ಲಿ ನಿಮ್ಮ ಸ್ಥಾನ ಖಾಲಿ ಮಾಡುವಂತೆ ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಥ ಪಾಟೀಲ ಮಾತನಾಡಿ, ನೇಹಾ ಹಿರೇಮಠ ಅವರ ಮನೆಗೆ ಸಾಂತ್ವನ ಹೇಳುವ ಸೌಜನ್ಯ ಕಾಂಗ್ರೆಸ್‍ನವರಿಗಿಲ್ಲ. ಸಿಎಂ ಆಗಲಿ, ಡಿಸಿಎಂ ಆಗಲಿ ಹಾಗೂ ಗ್ರಹ ಸಚಿವರಾದಿಯಾಗಿ ಯಾರು ತೆರಳಿಲ್ಲ. ಆದರೆ ನಮ್ಮ ಪಕ್ಷದ ರಾಷ್ಟ್ರೀಯ ಅದ್ಯಕ್ಷ ಜೆ.ಪಿ ನಡ್ಡಾ ನೇಹಾ ಮನೆಗೆ ಹೋಗಿ ಅವರ ತಂದೆಗೆ ಸಾಂತ್ವನ ಹೇಳಿದ್ದಾರೆ. ಬಿಜೆಪಿ ಮೊದಲು ಮಾನವಿಯತೆ ಮೆರೆಯುವ ಪಕ್ಷ ಕಾಂಗ್ರೆಸ್ ತುಷ್ಟಿಕರಣ ರಾಜಕಾರಣ ಮಾಡುವ ಪಕ್ಷವಾಗಿದೆ ಎಂದು ಹರಿಹೈದರಲ್ಲದೇ ಇಂದು ಬೀದರ್‍ನ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಲಿಯಾಖತ್ ಅಲಿಯನ್ನು ಬಂಧಿಸಿ ಮಾನವಿಯತೆ ಮೆರೆದ ಜಿಲ್ಲಾ ಪೋಲಿಸ್‍ರಿಗೆ ಕೃತಜ್ಞತೆ ಸಲ್ಲಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಹಿಂದು ಜನರು ಅಸುರಕ್ಷಿತರಾಗಿದ್ದಾರೆ. ನಿತ್ಯ ಕೊಲೆ, ದೌರ್ಜನ್ಯ, ಅಪರಾಧ ಕೃತ್ಯಗಳು ಹೆಚ್ಚಾಗಿವೆ. ನಾವು ನಮ್ಮ ಯುವತಿಯರು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ? ಎಂಬ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ರಾಜ್ಯ ಸರ್ಕಾರ ಒಂದು ಕಡೆ ಹೆಣ್ಣು ಮಕ್ಕಳಿಗೆ ಗ್ಯಾರಂಟಿ ಭಾಗ್ಯ ಎಂದು ಹೇಲಿ ಇನ್ನೊಂದು ಕಡೆ ಅವರ ಜೀವ ಹಿಂಡುವ ಹಂತಕರಿಗೆ ಆಶ್ರಯ ನೀಡುತ್ತಿದ್ದಿರಿ. ನೇಹಾಳ ಹತ್ಯೆಗೈದವನನ್ನು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ ಶುಟೌಟ್ ಮಾಡಬೇಕೆಂದು ಆಗ್ರಹಿಸಿದರು.
ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ಇದೊಂದು ಅತ್ಯಂತ ಹ್ಯಯ ಕೃತ್ಯ, ಮಾನವಿಯತೆ ಇಲ್ಲದ ಇಂಥ ಅಪರಾಧಿಗೆ ತುರ್ತು ಚಿಕಿತ್ಸೆ ನೀಡಲು ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆ ಎಂದರು.
ಬಿಜೆಪಿ ಕಲಬುರಗಿ ಸಹ ಪ್ರಭಾರಿ ಈಸ್ವರಸಿಂಗ್ ಠಾಕೂರ್ ಮಾತನಾಡಿ, ಈ ರಾಜ್ಯದಲ್ಲಿ ಹಿಂದು ಯುವಕ, ಯುವತಿಯರ ಮೇಲೆ ನಿತ್ಯ ಅಪರಾಧ, ಕೊಲೆ, ವಂಚನೆ ನಡೆಯುತ್ತವೆ. ನಮ್ಮವರು ಶಾಹಿನ್ ಕಾಲೇಜಿನಂಥ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಬಾರದೆಂದು ಎಚ್ಚರಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಲುಂಬಿಣಿ ಗೌತಮ ಮಾತನಾಡಿ, ಫಯಾಜ್ ಎನ್ನುವ ಅಪರಾಧಿಗೆ ಶಿಕ್ಷೆ ಕೊಡುವಷ್ಟು ಧೈರ್ಯ ಈ ಸರ್ಕಾರಕ್ಕಿಲ್ಲ. ಹಾಗಾಗಿ ನಮಗೆ ಒಪ್ಪಿಸಿ ಮಹಿಳೆಯರಾದ ನಾವುಗಳೆ ಅವನ ಕತ್ತು ಹಿಸುಕಿ ಕೊಂದು ಹಾಕುವುದಾಗಿ ಆಕ್ರೋಶ ಹೊರ ಹಾಕಿದರು.
ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಜೆಡಿಎಸ್ ಮುಖಂಡರಾದ ಐಲಿನ್ ಜಾನ್ ಮಠಪತಿ ಮಾತನಾಡಿದರು. ಜೆಡಿಎಸ್ ಪಕ್ಷದ ಪ್ರಮುಖರಾದ ರಾಜಶೇಖರ ಜವಳೆ, ಬಸವರಾಜ ಪಾಟೀಲ ಹಾರೂರಗೇರಿ, ಬಿಜೆಪಿ ಮುಖಂಡರಾದ ಮಾಜಿ ಎಮ್.ಎಲ್.ಸಿ ಅಮರನಾಥ ಪಾಟೀಲ, ರಾಜಶೇಖರ ನಾಗಮೂರ್ತಿ, ಚಂದ್ರಶೇಖರ ಗಾದಾ, ರೇವಣಸಿದ್ದಪ್ಪ ಜಲಾದೆ, ಜಗದೀಶಚಂದ್ರ ಸ್ವಾಮಿ, ಪೀರಪ್ಪ ಯರನಳ್ಳಿ, ಕಿರಣ ಪಾಟೀಲ, ಮಹೇಶ್ವರ ಸ್ವಾಮಿ, ಶ್ರೀನಿವಾಸ ಚೌದ್ರಿ ಸೇರಿದಂತೆ ಸಹಸ್ರಾರು ಬಿ.ಜೆ.ಪಿ, ಜೆ.ಡಿಎಸ್ ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.