ನೇಹಾ ಹತ್ಯೆ ಹೇಯ ಘಟನೆ :ಎಸ್‍ಯುಸಿಐ(ಸಿ)

ಕಲಬುರಗಿ,ಏ 22:ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯು ಅತ್ಯಂತ ಹೇಯ ಘಟನೆಯಾಗಿದ್ದು, ಇದರ ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ.ಉಮಾ ಮತ್ತು ವೀರಭದ್ರಪ್ಪ ಆರ್ ಕೆ ಆಗ್ರಹಿಸಿದ್ದಾರೆ.ಪ್ರಕರಣಕ್ಕೆ ಕೋಮು ಮತ್ತು ಚುನಾವಣಾ ರಾಜಕೀಯದ ಬಣ್ಣವನ್ನು ನೀಡುತ್ತಿರುವ ವಿದ್ಯಮಾನ ಖಂಡನೀಯ. ಇದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ, ಈ ವಿವಾದ ಕೋಮು ದಳ್ಳುರಿಗೆ ದಾರಿ ಮಾಡದಂತೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.