ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ


ಗುಳೇದಗುಡ್ಡ: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಂದಾಗ ಇಂಥಹ ಕ್ರೂರ ಘಟನೆಗಳು ಮುಂದೆ ನಡೆಯುವುದಿಲ್ಲ. ಸರ್ಕಾರ ಆರೋಪಿಗೆ ಕಠಿಣ ಶಿಕ್ಷೆ ಕೊಡಬೇಕೆಂದು ಶ್ರೀವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಠಾಧೀಶರು ತೀವ್ರವಾಗಿ ಆಗ್ರಹಿಸಿದ್ದಾರೆ.
ಅವರು ಶನಿವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಮಂಗಳಾ ಎಂ. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಹತ್ಯೆಗೈದಿರುವುದು ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆ. ಲವ್ ಜಿಹಾದ್‍ಗೆ ಹಿಂದೂ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮುರುಘಾಮಠದ ಶ್ರೀ ಕಾಶೀನಾಥ ಶ್ರೀಗಳು, ಡಾ. ನೀಲಕಂಠ ಶ್ರೀಗಳು ಮಾತನಾಡಿ, ವಿದ್ಯಾರ್ಥಿನಿಯನ್ನು ಹೀನಾಯವಾಗಿ ಕೊಲೆ ಮಾಡಿದ ಫಯಾಜ್‍ನನ್ನು ಗುಂಡಿಕ್ಕಿ ಕೊಂದು ನೇಹಾಳ ಸಾವಿಗೆ ನ್ಯಾಯ ಒದಗಿಸಬೇಕು. ಇದು ವೈುಕ್ತಿಕ ಕೊಲೆ ಎಂದು ಹೇಳಿಕೆ ನೀಡುವ ಸರ್ಕಾರ ನೇಹಾಳ ಸಾವಿಗೆ ಅನ್ಯಾಯ ಮಾಡಿದ್ದಾರೆ. ಸರ್ಕಾರ ಕೊಲೆಗಡುಕರ ಪರವಾಗಿ ಮಾತನಾಡುತ್ತಿದೆ. ಗೃಹ ಮಂತ್ರಿಗಳು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಶ್ರೀಗಳು, ಜಂಗಮ ಸಮಾಜದ ಅಧ್ಯಕ್ಷ ಶಿವಾನಂದ ಮಳ್ಳಿಮಠ, ಮಹಾಂತಯ್ಯ ಸರಗಣಾಚಾರಿ, ಉಮೇಶ ಶಿವನಗೌಡರ, ನಿಜಗುಣಯ್ಯ ಹಿರೇಮಠ, ವಿಶ್ವನಾಥ ಹಿರೇಮಠ, ಪಡದಯ್ಯ ಕಕ್ಕನ್ನಯನಮಠ, ಈರಯ್ಯ ಚನಸಂಗಯ್ಯನಮಠ, ವೀರಭದ್ರಯ್ಯ ಹೊಸಮಠ, ಜಗದೀಶ ಸರಗಣಾಚಾರಿ, ಶಿವಕುಮಾರ ಸಾವಳಗಿಮಠ, ಸಂಗಯ್ಯ ಶಿವಪ್ಪಯ್ಯನಮಠ, ಎಂ.ಎಸ್.ಭಂಡಾರಿ, ಶ್ರೀಕಾಂತ ಸರಗಣಾಚಾರಿ, ಸಂಗಯ್ಯ ಗವಿಮಠ, ಶೇಖರಯ್ಯ ಜಂಗಮರ, ಬಸವರಾಜ ಸಿಂದಗಿಮಠ, ಶಿವು ತುಪ್ಪದ, ಮುತ್ತಣ್ಣ ಮೋತಿಮಠ, ಸಂಗಯ್ಯ ಸಿಂದಗಿಮಠ ಮತ್ತಿತರರು ಇದ್ದರು.