ನೇಹಾ ಹತ್ಯೆ ಆರೋಪಿಗೆ ಉಗ್ರಶಿಕ್ಷೆ ವಿಧಿಸಿ: ಜೋಗೂರ

ಕಲಬುರಗಿ,ಏ.20: ಹುಬ್ಬಳ್ಳಿಯಲ್ಲಿ ನಡೆದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಕೊಲೆಗೆ ನ್ಯಾಯವಾದಿ ಸುರೇಶ ಪಾಟೀಲ ಜೋಗೂರ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಆರೋಪಿ ಫಯಾಜ್‍ಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
ಆರೋಪಿ ಫಯಾಜ್‍ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಠಿಣ ಸಂದೇಶ ರವಾನಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ದುರ್ಘಟನೆಯಿಂದಾಗಿ ವೀರಶೈವಲಿಂಗಾಯತ ಸಮಾಜವಷ್ಟೇ ಅಲ್ಲ ಪ್ರಜ್ಞಾವಂತ ಸಮಾಜದ ಇಡೀ ಮಹಿಳಾ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಆರೋಪಿಗೆ ಗಂಭೀರ ಸ್ವರೂಪದ ಶಿಕ್ಷೆ ವಿಧಿಸದಿದ್ದರೆ ವೀರಶೈವಲಿಂಗಾಯತ ಸಮುದಾಯ ಬೀದಿಗಿಳಿದು ಉಗ್ರಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.