ನೇಹಾ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸಿ

ತಾಳಿಕೋಟೆ :ಏ.21:ಹುಬ್ಬಳ್ಳಿಯ ಕೆಎಲ್‍ಇ ತಾಂತ್ರಿಕ ವಿಶ್ವವಿಧ್ಯಾಲಯದಲ್ಲಿ ಎಂಸಿಎ ವಿಧ್ಯಾಭ್ಯಾಸ ಮಾಡುತ್ತಿದ್ದ ವಿಧ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠಳನ್ನು ಹಾಡು ಹಗಲೆ ಬರ್ಬರವಾಗಿ ಹತ್ಯೆ ಮಾಡಿರುವದನ್ನು ಖಂಡಿಸಿ ತಾಳಿಕೋಟೆ ತಾಲೂಕಾ ಅಖೀಲ ಭಾರತೀಯ ವಿಧ್ಯಾರ್ಥಿ ಪರಿಷತ್ ಕಾರ್ಯಕರ್ತರು ಶನಿವಾರರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರಲ್ಲದೇ ಆರೋಪಿ ಫಯಾಜ್‍ನನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.
ಈ ಸಮಯದಲ್ಲಿ ಎಬಿವ್ಹಿಪಿ ಕಾರ್ಯಕರ್ತ ವಿಠ್ಠಲಸಿಂಗ್ ಹಜೇರಿ ಮಾತನಾಡಿ ರಾಜ್ಯದಲ್ಲಿ ಮೇಲಿಂದ ಮೇಲೆ ವಿಧ್ಯಾರ್ಥಿಗಳ ಮೇಲೆ ದೌರ್ಜನ್ಯ ಪ್ರಕರ್ಣಗಳು ಹೆಚ್ಚುತ್ತಾ ಸಾಗಿವೆ ಎಂಸಿಎ ವಿಧ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿನಿಗೆ ಜಿಹಾದಿ ಮನಸ್ಥಿತಿಯ ಕ್ರೂರ ಯುವಕ ಫಯಾಜ್ ಎಂಬಾಂತನು ಜ್ಞಾನ ದೇಗುಲದ ಒಳಗೆ ಬಂದು ಹಾಡು ಹಗಲೇ ಚಾಕುವಿನಿಂದ ವಿಧ್ಯಾರ್ಥಿನಿಯನ್ನು ಕೊಲೆ ಮಾಡಿರುವದು ವಿಧ್ಯಾರ್ಥಿ ಸಮೂದಾಯಕ್ಕೆ ಭಯ ಹುಟ್ಟಿಸುವಂತಾಗಿದೆ ಜಿಹಾದಿ ಮನಸ್ಥಿತಿಯ ಯುವಕ ಫಯಾಜ್‍ನು ವಿಧ್ಯಾರ್ಥಿನಿ ನೇಹಾ ಹಿರೇಮಠಳ ಹಿಂದೆ ಬಿಂದಿದ್ದಲ್ಲದೇ ಒತ್ತಾಯಪೂರ್ವಕವಾಗಿ ಪ್ರೀತಿಸಬೇಕೆಂದು ಬೆನ್ನಟ್ಟಿದ್ದಾನೆ ಆದರೆ ಆ ಯುವತಿ ಪ್ರೀತಿಯ ನಾಟಕ್ಕೆ ಒಳಗಾಗದೇ ಇದ್ದಾಗ ಹತ್ಯ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿದ್ದಾನೆ ವಿಧ್ಯಾರ್ಥಿನಿಗೆ 9 ಭಾರಿ ಚಾಕುವಿನಿಂದ ಇರಿದಿದ್ದಾನೆ ಇಂತಹ ಮನಸ್ಥಿತಿ ಇರುವ ಯುವಕರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿರುವದು ಖಂಡನೆಯವಾಗಿದೆ ಅಲ್ಲದೇ ಪ್ರೀತಿ ಪ್ರೇಮದ ವೈಯಕ್ತಿ ಘಟನೆಯಿಂದ ಈ ಹತ್ಯ ನಡೆದಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗ್ರಹ ಸಚಿವರು ಹೇಳಿರುವದು ನಾಚಿಕೆಗೇಡಿನ ಸಂಗತಿಯಾಗಿದೆ ಹೆಣ್ಣು ಮಕ್ಕಳಿಗಾಗಿ 5 ಗ್ಯಾರೆಂಟಿ ಕೊಟ್ಟಿದ್ದೇವೆಂದು ಜಂಬಕೊಚ್ಚಿಕೊಳ್ಳುತ್ತಿರುವ ರಾಜ್ಯದ ಕಾಂಗ್ರೇಸ್ ಸರ್ಕಾರ ಹೆಣ್ಣು ಮಕ್ಕಳಿಗೆ ಜೀವ ರಕ್ಷಣೆಯ ಗ್ಯಾರೆಂಟಿಕೊಟ್ಟಿಲ್ಲಾ ಇಂತಹ ಸರ್ಕಾರ ರಾಜ್ಯದಲ್ಲಿ ಮಹಿಳೆಯರ ಪಾಲಿಗೆ ಇದ್ದು ಸತ್ತಂತಾಗಿದೆ ಎಂದ ಅವರು ಕೂಡಲೇ ಮುಖ್ಯಮಂತ್ರಿಗಳು ನೇಹಾ ಹಿರೇಮಠಳ ಕುಟುಂಭಕ್ಕೆ ಕ್ಷಮೆ ಯಾಚನೆ ಮಾಡಬೇಕು ಮತ್ತು ಈ ಘಟನೆಯಲ್ಲಿ ಭಾಗಿಯಾದ ಫಯಾಜ್‍ನನ್ನು ಸಾರ್ವಜನಿಕವಾಗಿಯೇ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.
ಇನ್ನೋರ್ವ ಎಬಿವ್ಹಿಪಿ ಸಂಘಟನೆಯ ತಾಲೂಕಾ ಸಂಚಾಲಕ ಗುರುಪ್ರಸಾದ ಹಗರಗುಂಡ ಮಾತನಾಡಿ ಯಾರಿಗೂ ಪ್ರವೇಶವಿಲ್ಲದ ಕಾಲೇಜಿನ ಕ್ಯಾಂಪಸ್ಸಿನ ಒಳಗೆ ಯುವಕ ಬಂದು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲು ಸಾಧ್ಯವಾಗಿರಬೇಕಾದರೆ ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದಂತಾಗಿದೆ ಮತ್ತು ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಕುಸಿದು ಹೋಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುವಂತಾಗಿದೆ. ಈ ಘಟನೆಯಿಂದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಭಯದ ವಾತಾವರಣ ನಿರ್ಮಾಣವಾಗಿದೆ ಅಲ್ಲದೇ ಪಾಲಕರು ಮಕ್ಕಳನ್ನು ಶಾಲೆಗೆ ಹಿಂಜರಿಯುವಂತೆ ಈ ಘಟನೆ ಮಾಡಿದೆ ಇಂತಹ ಘಟನೆ ಮರುಕಳಿಸದಂತೆ ಘಟನೆಗೆ ಕಾರಣನಾದ ಜಿಹಾದಿ ಮನಸ್ಥಿತಿ ಫಯಾಜ್‍ನನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಪ್ರಾರಂಭಗೊಂಡ ಸಾವಿರಾರು ವಿಧ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಜ್ಯ ಸರ್ಕಾರದ ವಿರೂದ್ದ ಘೋಷಣೆಗಳನ್ನು ಕೂಗುತ್ತಾ ತಹಶಿಲ್ದಾರ ಕಚೇರಿಗೆ ಆಗಮಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನಾ ನೇತೃತ್ವವನ್ನು ಎಬಿವ್ಹಿಪಿ ಸಂಘಟನೆಯ ಸಂಪ್ರೀತ್, ನಾರಾಯಣಸಿಂಗ್, ಸುರೇಶ ಹಜೇರಿ, ಗುರುರಾಜ್, ಸಂಗಮೇಶ, ಒಳಗೊಂಡು ವಿವಿಧ ಶಾಲಾ ವಿಧ್ಯಾರ್ಥಿಗಳು ವಹಿಸಿದ್ದರು.