ನೇಹಾ ಕೊಲೆ ಖಂಡಿಸಿ ಪ್ರತಿಭಟನೆ ಮನವಿ


ಬಾಗಲಕೋಟೆ, ಏ.20: 20ರಬಕವಿ-ಬನಹಟ್ಟಿ, ಹುಬ್ಬಳಿ ನಗರದ ಬಿವಿಬಿ ಶಿಕ್ಷಣ ಸಂಸ್ಥೆಯಲ್ಲಿ ಎಮ್‍ಸಿಎ ಓದುತ್ತಿದ್ದ ವಿಧ್ಯಾರ್ಥಿನಿ ನೇಹಾ ಹಿರೇಮಠ. ಅವಳನ್ನು ಅದೇ ಸಂಸ್ಥೆಯಲ್ಲಿ ಬಿಸಿಎ ಓದುತ್ತಿದ್ದ ಆರೋಪಿ ಪಯಾಜ್ ಆತನು ಕಾಲೆಜ್ ಕ್ಯಾಂಪಸ್ ಒಳಗೆ ಆಕೆಯ ಮೇಲೆ ಚಾಕುವಿನಿಂದ ಹಲ್ಲೆಮಾಡಿ ¨ರ್ಬರವಾಗಿ ಹತ್ಯೆಮಾಡಿದ್ದನ್ನು ಖಂಡಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಹಿಂದುಪರ ಸಂಘಟಣೆಗಳ ಜೊತೆಯಲ್ಲಿ ಜಂಗಮ ಸಮುದಾಯಗಳು ಪ್ರತಿಭಟಿಸುತ್ತಿವೆ.
ರಬಕವಿ-ಬನಹಟ್ಟಿ ತಾಲೂಕಿನ ಜಂಗಮ ಸಮುದಾಯದ ಬಾಂಧವರು ನೇಹಾ ಕೊಲೆ ಖಂಡಿಸಿ ಹಿಂದುಪರ ಸಂಘಟನೆಗಳ ಬೆಂಬಲದಲ್ಲಿ ಸಾಮೋಹಿಕವಾಗಿ ಪ್ರತಿಭಟಣೆ ಮಾಡಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು. ಆರೋಪಿಯನ್ನು ಕೂಡಲೆ ಗಲ್ಲಿಗೆರಿಸಿದರೆ ಇಂಥಹ ಹೇಯಕೃತ್ಯಗಳು ನಿಲ್ಲಿಸಲು ಸಾದ್ಯವಾಗುತ್ತದೆಂದು ಜಂಗಮ ಸಮುದಾಯದ ಮುಖಂಡ ಗುರುಪಾದಯ್ಯ ಅಮ್ಮಣಗಿಮಠ. ಹೇಳಿದರು. ಇದರಂತೆ ಕುಟುಂಬಕ್ಕೆ ನ್ಯಾಯವನ್ನು ಒದಗಿಸುವ ನಿಟ್ಟಿನ ಕ್ರಮಗಳÀಲ್ಲಿ ರಾಜ್ಯಸರ್ಕಾರ ಮತ್ತು ಪೋಲೀಸ್ ಇಲಾಖೆಯ ಕಾರ್ಯವು ಪ್ರಾಮಾಣಿಕವಾಗಿ ಬೆಂಬಲಿತವಾಗಿರಬೇಕು ಇದರಲ್ಲಿ ಏನಾದರು ಕುಂಟಿತವಾಗಿ ಕಂಡುಬಂದರೆ ರಾಜ್ಯದ ಎಲ್ಲ ಜಂಗಮ ಸಮುದಾಯ ಹಾಗು ಹಿಂದುಪರ ಸಂಘಟನೆಗಳ ಬೆಂಬಲದಲ್ಲಿ ಬಿದಿಗಿಳಿದು ಭೀಕರ ಹೊರಾಟ ಮಾಡಬೇಕಾದಿತ್ತು ಎಂದು ಎಚ್ಚರಿಕೆ ನೀಡಿದರು.
ಪೋಲೀಸ್ ಇಲಾಖೆಯು ಯಾವದೆ ರಾಜಕೀಯದ ಒಳಸಂಚಿನ ಒತ್ತಡಕ್ಕೆÀ ಕೈಗೊಂಬೆಯಾಗದೆ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಲು ಮುಂದಾಗಬೇಕು ಹಾಗೆ ಈ ಕೊಲೆಯ ಹಿಂದೆ ಸಂಚು ಮಾಡಿದ ಇನ್ನು ನಾಲ್ಕು ಜನರ ತಂಡ ಇರುವ ಬಗ್ಗೆ ರಾಜ್ಯದ ಜನರಲ್ಲಿ ಸಾಕಷ್ಟು ಸುದ್ಧಿ ಹರಡಕೊಂಡಿದ್ದು ಅವರನ್ನು ಕೂಡಾ ಶೀಘ್ರವಾಗಿ ಪತ್ತೆಮಾಡಿ ಜೈಲಿಗೆ ಅಟ್ಟಿ ಸರೀಯಾದ ಶಿಕ್ಷೆಗೆ ಗುರಿ ಮಾಡಬೇಕೆಂದು ರ-ಬ ನಗರಸಭಾ ಮಾಜಿ ಅಧ್ಯಕ್ಷ ಸಂಜು ತೆಗ್ಗಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನಗರದ ಹಿಂದುಪರ ಸಂಘಟಿತ ಮುಖಂಡ ನಂದು ಗಾಯಕವಾಡ ಮಾತನಾಡಿ ಕೊಲೆಮಾಡಿದ ಆ ಕಟುಕ ಆರೋಪಿಯನ್ನು ಸ್ಥಳದಲ್ಲಿ ಎನ್,ಕೌಂಟರ ಮಾಡಿದರೆ ಸಮಾಜದಲ್ಲಿ ಸಧ್ಯ ಹುಟ್ಟಿರುವ ಆತಂಕದ ಬಯದ ಛಾಯೆ ಕಡಿಮೆಯಾಗುತ್ತದೆ. ಲವ್-ಜಿಹಾದ್ ಎಂಬ ಹೆಸರಿನಲ್ಲಿ ಇಂಥವರು ಹಿಂದು ಹೆಣ್ಣು ಮಕ್ಕಳನ್ನು ದಿಕ್ಕುತಪ್ಪಿಸುವ ಯತ್ನಗಳು ಮಾಡುವುದು ಅವರು ಮಾಡುವ ಸಂಚುಗಾರಿಕೆಯಲ್ಲಿ ಒಪ್ಪದ ಹೆಣ್ಣು ಮಕ್ಕಳನ್ನು ಕೊಲೆ ಮಾಡುವುದು ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇದರ ಬಗ್ಗೆ ಹಿಂದುಪರ ಸಂಘಟಣೆಗಳು ಎಚ್ಚೆತ್ತುಕೊಂಡಿವೆ ಇದು ಹೀಗೆ ಮುಂದು ವರಿದರೆ ಲವ್Àಜಿಹಾದಿಗಳನ್ನು ದೇಶದಿಂದ ಗಡಿಪಾರು ಮಾಡಲು ಉಗ್ರವಾದ ಹೋರಾಟ ಮಾಡಲು ಸಿದ್ದರಿದ್ದೆವೆ ಎಂದು ರಬಕವಿ-ಬನಹಟ್ಟಿ ತಾಲೂಕಾ ತಹಶೀಲ್ದಾರ ಗಿರಿಶ್ ಸ್ವಾದಿ. ಅವರಿಗೆ ಮನವಿಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬನಹಟ್ಟಿ ಜಂಗಮ ಸಮುದಾಯದ ಮುಖಂಡ ದೊಡಯ್ಯ ಲಿಂಗದ್.. ದುಂಡಯ್ಯ ಕಾಡದೇವರ್. ಗಂಗಯ್ಯ ಹಿರೇಮಠ. ಸಂಜು ಅಮ್ಮಣಗಿಮಠ. ಮಾದೇವ ಮಠಪತಿ. ವಿವೇಕಾನಂದ ಹಿರೇಮಠ. ರಾಜು ಮಠಪತಿ. ಈಶ್ವರ ಕಾಡದೇವರ್. ವೀರಭಧ್ರ ಶಾಸ್ತ್ರಿಹಿರೇಮಠ. ಶೀವಾನಂದ ಮಠದ. ರಾಜು ಮಠದ. ಹಾಗು ಎಬಿವಿಪಿ ಮುಖಂಡ ಹೇಮಂತ್ ಮಳಲಿ. ಶ್ರೀರಾಮ ಸೇನಾ ಮುಖಂಡ ಯಮನಪ್ಪಾ ಕೋರಿ. ಹಿಂದು ಜಾಗರಣ ಮುಖಂಡ ಭೀಮ್ಸಿ ಆಲ್ಗೋಂಡ. ಬಸವರಾಜ್ ಮನ್ಮಿ. ಶಿವಾನಂದ ಕಾಗಿ. ಅಶೋಕ ರಾವಳ ಹಿಂದುಪರ ಸಂಘಟಿತ ಮುಖಂಡರು ಕಾರ್ಯಕರ್ತರು ಹಾಜರಿದ್ದರು