ನೇಹಾ ಕೊಲೆ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ನರಿಬೋಳ್ ಆಗ್ರಹ

ಕಲಬುರಗಿ:ಏ.19: ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿ ಕುಮಾರಿ ನೇಹಾ ಹಿರೇಮಠ್ ಅವರ ಕೊಲೆ ಪ್ರಕರಣ ಇಡೀ ಮಾನವ ಜನಾಂಗವೇ ತಲೆ ತಗ್ಗಿಸುವ ವಿಚಾರವಾಗಿದ್ದು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ರಾಜ್ಯ ಸರ್ಕಾರ ಇಂತಹ ಕೃತ್ಯದಲ್ಲಿ ತೋರುವವರಿಗೆ ಕಠಿಣ ಸಂದೇಶ ರವಾನಿಸುವ ಅಗತ್ಯವಿದೆ ಎಂದು ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾದ ಯುವ ಘಟಕದ ಜಿಲ್ಲಾ ಗೌರವಾಧ್ಯಕ್ಷ ಎಸ್.ಎಸ್. ಪಾಟೀಲ್ ನರಬೋಳ್ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ
ಘಟನೆಯಿಂದ ರಾಜ್ಯದ ಜನತೆ ಬೆಚ್ಚಿ ಬಿದ್ದದ್ದು ಅಮಾಯಕ ವಿದ್ಯಾರ್ಥಿನಿಯ ಅಮೂಲ್ಯವಾದ ಜೀವ ಬಲಿ ತಗೆದಿರುವ ವಿಕೃತ ಮನಸ್ಸಿನ ವ್ಯಕ್ತಿಯ ಈ ನೀಚ ಕೆಲಸ ಎಂದಿಗೂ ಯಾರು ಕ್ಷಮಿಸುವ ಕೆಲಸ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಆರೋಪಿಗೆ ಗಲ್ಲು ಶಿಕ್ಷೆಯೇ ಸೂಕ್ತವಾಗಿದ್ದು, ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.