ನೇಹಾ ಕೊಲೆ ಅಮಾನವೀಯ ಕೃತ್ಯ

ತಾಳಿಕೋಟೆ:ಏ.25: ಹುಬ್ಬಳ್ಳಿಯಲ್ಲಿ ನಡೆದಂತ ನೇಹಾ ಹಿರೇಮಠ ಕೊಲೆಯಾಗಿರುವುದು ಇಡೀ ಮನುಕುಲವೇ ತಲೆತಗ್ಗಿಸುವಂತ ಕೆಲಸವಾಗಿದೆ ಈ ರೀತಿ ಪದೇ ಪದೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮತ್ತು ಕೊಲೆ ಪ್ರಕರ್ಣಗಳು ನಡೆಯುತ್ತಿರುವದು ಖೇದಕರ ಸಂಗತಿಯಾಗಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು ಹುಬ್ಬಳ್ಳಿಯ ಕಾರ್ಪುರೇಟರ್ ಮಗಳು ಎಂಸಿಎ ವಿಧ್ಯಾರ್ಥಿನಿ ನೇಹಾ ಕೊಲೆಯು ಪೂರ್ವನಿಯೋಜಿತ ರೂಪಗೊಂಡಂತಿದೆ ಈ ಘಟನೆಯಿಂದ ಹಿಂದೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಾಲೇಜಿಗೆ ಕಳಿಸುವುದಕ್ಕೆ ಪಾಲಕರು ಭಯಪಡುವಂತಾಗಿದೆ ಸರ್ಕಾರದಲ್ಲಿರುವ ಮಂತ್ರಿಗಳು ಬೇಜವಾಬ್ದಾರಿತನದ ಹೇಳಿಕೆ ಇಂತಹ ವಿಕೃತಿ ಮನಸ್ಸಿನ ಯುವಕರಿಗೆ ಕುಮ್ಮಕ್ಕು ನೀಡಿದಂತಾಗುತ್ತಿದೆ ಕೂಡಲೇ ಮಂತ್ರಿಗಳು ಹೇಳಿಕೆಯನ್ನು ಹಿಂಪಡೆದುಕೊಳ್ಳುವದರೊಂದಿಗೆ ತಪ್ಪಿತಸ್ಥ ಯುವಕನಿಗೆ ಕಠಿಣವಾದ ಶಿಕ್ಷೆ ವಿಧಿಸಿ ಮುಂದೆ ಇಂತಹ ಘಟನೆಗಳು ಜರುಗದಂತೆ ಏಚ್ಚರಿಕೆ ವಹಿಸುವಂತಹ ಕಾರ್ಯ ಮಾಡಬೇಕೆಂದು ಒತ್ತಾಯಿಸಿರುವ ಶ್ರೀಗಳು ಇನ್ನು ಮುಂದಾದರೂ ಹಿಂದೂ ಯುವತಿಯರು ಲವ್ ಜಿಹಾದ್ ಎನ್ನುವ ಆಸೆಗೆ ಬಲಿ ಬೀಳದೆ ವಿದ್ಯಾಭ್ಯಾಸವನ್ನು ಮಾಡಬೇಕು ಹಾಗೂ ಇದರ ಬಗ್ಗೆ ಹಿಂದೂ ಯುವತಿಯರ ತಂದೆ-ತಾಯಿಗಳು ಕೂಡ ಮಕ್ಕಳ ಚಲನವಲನದ ಬಗ್ಗೆ ಜಾಗೃತ ವಹಿಸಬೇಕು ಮತ್ತು ಹಿಂದೂ ಧರ್ಮದ ಎಲ್ಲಾ ರಾಜಕೀಯ ವ್ಯಕ್ತಿಗಳು ಸಮಾಜ ಬಾಂಧವರು ಒಗ್ಗಟ್ಟಾಗಿ ಹಿಂದೂ ಧರ್ಮಕ್ಕೆ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಇದರಲ್ಲಿ ಯಾವುದೇ ರಾಜಕೀಯ ಮಾಡದೇ ನೇಹಾ ಹಿರೇಮಠ ಅವರ ಕುಟುಂಭಕ್ಕೆ ನ್ಯಾಯ ಕೊಡಿಸುವುದು ಹಾಗೂ ಕೊಲೆ ಮಾಡಿದಂತ ಆರೋಪಿಗೆ ತಕ್ಷಣ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಸರ್ಕಾರಕ್ಕೆ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಒತ್ತಾಯಿಸಿದ್ದಾರೆ.