ನೇಹಾಳ ಬರ್ಬರ ಕೊಲೆ ಸಹಿಸಲು ಸಾಧ್ಯವಿಲ್ಲ:ಗುರುನಾಥ್ ಗಡ್ಡೆ

ಬೀದರ:ಏ.25: ಬೀದರ್ ಜಿಲ್ಲಾ ಸದ್ಭಾವನಾ ಮುಂಚ್ನ್ ಸಂಚಾಲಕರಾದ ಗುರುನಾಥ್ ಗಡ್ಡೆ ಯವರ ಅಧ್ಯಕ್ಷತೆಯಲ್ಲಿ ಸದಸ್ಯರ ಸಭೆ ನಡೆಯಿತು. ಸದಸ್ಯರ ಸಭೆಯಲ್ಲಿ ಇತ್ತೀಚೆಗೆ ಹುಬ್ಬಳ್ಳಿಯ ಬಿ ವಿ ಬೀ ಕಾಲೇಜಿನಲ್ಲಿ ನಡೆದ ನೇಹಾಳ ಬರ್ಬರ ಹತ್ಯಾಯನ್ನು ಅತ್ಯುಗ್ರ ಶಬ್ದಗಳಲ್ಲಿ ಖಂಡಿಸಲಾಯಿತು.
ಯಾವ ಸಭ್ಯ ಸಮಾಜವೂ ಇಂತಹ ಕೃತ್ಯ ಸಹಿಸಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತ ಪಡಿಸಲಾಯಿತು.ಇಂತಹ ಕೃತ್ಯ ಗಳು ಸಮಾಜದಲ್ಲಿ ನಡಿಯುತ್ತಿರುವುದು ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಲಾಯಿತು.
ಇದೇ ವೇಳೆ ಕೆಲವು ಶಕ್ತಿಗಳು ಅಪರಾಧವನ್ನು ಧರ್ಮದೊಂದಿಗೆ ಹಾಗೂ ಸಮುದಾಯದೊಂದಿಗೆ ಜೋಡಿಸಿ ಧರ್ಮವನ್ನು ದೋಷಿಸುವ ತೆಗಳುವ ಮುಖಾಂತರ ಸಮಾಜವನ್ನು ವಡಿಯುವ ಹೀನ ಕೃತ್ಯದಲ್ಲಿ ತೊಡಗಿರುವುದು ಆತಂಕದ ವಿಷಯ ಎಂದು ಕಳವಳ ವ್ಯಕ್ತ ಪಡಿಸಲಾಯಿತು.ಸಮಾಜವನ್ನು ಒಂದುಗೂಡಿಸಲು ಮತ್ತು ಸಮಾಜದಲ್ಲಿ ಸದ್ಭಾವನೆ, ಕೋಮು ಸೌಹಾರ್ದತೆಗೆ ಶ್ರಮಿಸಲು ನಿರ್ಧರಿಸಲಾಯಿತು.
ದೇವಭಯದ ಕೊರತೆ,ಮರಣಾನಂತರ ಜೀವನದ ಭಯ ಇಲ್ಲದಿರುವುದು ಅಪರಾಧ ಹೆಚ್ಚುತ್ತಿರುವುದಕ್ಕೆ ಕಾರಣ ವೆಂಬ ಅಭಿಪ್ರಾಯ ವ್ಯಕ್ತಪಡಿಸಿತು.
ಸಭೆಯಲ್ಲಿ ಅಬ್ದುಲ್ ಖದೀರ್, ಮುಹಮ್ಮದ್ ನಿಜಾಮುದ್ದಿನ, ಓಂಪ್ರಕಾಶ್ ರೊಟ್ಟೆ, ರಫೀಕ್ ಅಹ್ಮದ್, ಮುಹಮ್ಮದ್ ಮುಅಜ್ಜ್ಮ್, ಬಾಬುರಾವ್ ಹೊನ್ನಾ, ಮುಹಮ್ಮದ್ ಮುಜ್ತಬಾ,ಸಂತೋಷ್ ಜೊಲ್ಡಪ್‍ಗೆ, ಸೈಯದ್ ಇಬ್ರಾಹಿಂ, ಮುಹಮ್ಮದ್ ಏಹತೆಶಾಂ ಸೈಯ್ಯದಾ ಉಮ್ಮೆ ಹಬೀಬಾ, ತೌಹೀದ್ ಶಿಂಧೆ , ಹರಮ್ಯೆನ್ ಷರೀಫ್ ಹಾಜರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.