ನೇರ ಪೋನ್ ಇನ್ ಕಾರ್ಯಕ್ರಮ

ಕಲಬುರಗಿ:ಮೇ.28: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಇದೆ ಮೇ 29 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಆಕಾಶವಾಣಿ ಆಯೋಜಿಸಿದ‌ ನೇರ‌ ಪೋನ್ ಇನ್ ಕಾರ್ಯಕ್ರಮದಲ್ಲಿ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಭಾಗವಹಿಸುವರು.

ವಿಧಾನ ಪರಿಷತ್ ಚುನಾವಣೆಗೆ ಬರುವ ಮೇ 3 ರಂದು ಬ್ಯಾಲೆಟ್ ಪೇಪರ್‌ ಮೂಲಕ ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ ಪ್ರಾಶಸ್ತ್ಯದ ಮತ ನೀಡಿಕೆ ಪ್ರಕ್ರಿಯೆ ಕುರಿತಂತೆ ಪದವೀಧರರು ಮತ್ತು ಆಕಾಶವಾಣಿ ಕೇಳುಗರ ಪ್ರಶ್ನೆಗಳಿಗೆ ಕೃಷ್ಣ ಬಾಜಪೇಯಿ ಉತ್ತರಿಸಲಿದ್ದಾರೆ. ಇವರೊಂದಿಗೆ ನ್ಯಾಷನಲ್‌ ಲೇವಲ್ ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಸಹ ಇರಲಿದ್ದಾರೆ.

ಕಲಬುರಗಿ ಆಕಾಶವಾಣಿಯ ಪ್ರಸಾರ ನಿರ್ವಾಹಕ ಸಂಗಮೇಶ ಕಾರ್ಯಕ್ರಮ‌ ನಡೆಸಿಕೊಡಲಿದ್ದು, ಪದವೀಧರರು, ಕೇಳುಗರು ದೂ.ಸಂ.08472-295986/ 295987 ಗೆ ಕರೆ ಮಾಡಿ ಇದರ ಲಾಭ ಪಡೆಯಬೇಕೆಂದು ಕೋರಲಾಗಿದೆ.