
ಸಂಜೆವಾಣಿ ವಾರ್ತೆ
ದಾವಣಗೆರೆ,ಆ.19; ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳಿಗೋಸ್ಕರ ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯ,ಮೈಸೂರು ಮತ್ತು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಾಂಕನ ನಿರ್ಣಯ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 2024 ರ ಮಾರ್ಚ್ ತಿಂಗಳಲ್ಲಿ ನಡೆಯುವ ಎಸ್ಸ್ಸೆಸ್ಸೆಲ್ಸಿ ನೇರ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ದಾವಣಗೆರೆ ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯದ ಸಮನ್ವಯಾಧಿಕಾರಿ ಹಾಗೂ ಸ್ವಯಂ ನಿವೃತ್ತ ಶಿಕ್ಷಕರಾದ ಅಣಬೇರು ಶಿವಮೂರ್ತಿ ತಿಳಿಸಿದ್ದಾರೆ.ಕನಿಷ್ಠವಿದ್ಯಾರ್ಹತೆ 7ನೇ ತರಗತಿ ಓದಿರಬೇಕು ಅಥವಾ 8, 9 ಮತ್ತು 10ನೇ ತರಗತಿಯಲ್ಲಿ ಓದಿ, ಅರ್ಧಕ್ಕೇ ಶಾಲೆ ಬಿಟ್ಟವರು ಅಥವಾ ಅನುತ್ತೀರ್ಣರಾದವರು. ಕನಿಷ್ಠ 15 ವರ್ಷ ತುಂಬಿದವರು ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕಟ್ಟಬಹುದಾಗಿದ್ದು ಮೊ.ನಂ. 98866 78178, 70229 36433 ಸಂಪರ್ಕಿಸಬಹುದಾಗಿದೆ.ಈ ಪರೀಕ್ಷೆಯಲ್ಲಿ ಪಾಸಾದವರು ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದು. ಅನುಕಂಪದ ನೌಕರಿ ಪಡೆಯಬಹುದು. ಅಂಗನವಾಡಿ ಸಹಾಯಕಿಯರು ಶಿP್ಷÀಕಿಯಾಗಿ ಬಡ್ತಿ ಪಡೆಯಬಹುದು. ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಹೋಂ ಗಾರ್ಡ್ಸ್ ಆಶಾ ಕಾರ್ಯಕರ್ತೆಯರು, ಸೆಕ್ಯೂರಿಟಿ ಗಾರ್ಡ್ಸ್ ಮತ್ತು ಇತರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಪರೀಕ್ಷೆ ತೆಗೆದುಕೊಳ್ಳಬಹುದು ಹಾಗೂ ಪಿಯುಸಿ, ಡಿಪ್ಲೋಮಾ, ಐಟಿಐ ಇನ್ನಿತರೆ ಕೋರ್ಸ್ಗಳಿಗೆ ಸೇರಿ ವಿದ್ಯಾಭ್ಯಾಸವನ್ನು ಮುಂದುವರೆಸಲು ಅವಕಾಶವಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಅಣಬೇರು ಶಿವಮೂರ್ತಿ, ಸ್ವಯಂ ನಿವೃತ್ತ ಶಿP್ಷÀಕರು ಹಾಗೂ ಸಮನ್ವಯಾಧಿಕಾರಿಗಳು, ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯ/ ಕನಕ ಕರೆಸ್ಟಾಂಡೆನ್ಸ್ ಕಾಲೇಜು, ಕುರುಬರ ಹಾಸ್ಟೆಲ್ ಕಾಂಪ್ಲೆಕ್ಸ್, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ – 577 002. ಅಭ್ಯರ್ಥಿಗಳು ತಮ್ಮ ಮೂಲ ವರ್ಗಾವಣೆ ಪ್ರಮಾಣ ಪತ್ರ, ಮೊಬೈಲ್ ನಂ. ಲಿಂಕಾಗಿರುವ ಆಧಾರ್ ಕಾರ್ಡ್, ಇತ್ತೀಚಿನ 5 ಪಾಸ್‌ಪೋರ್ಟ್ ಸೈಜಿನ ಭಾವಚಿತ್ರಗಳೊಂದಿಗೆ ಕಚೇರಿಯನ್ನು ಸಂಪರ್ಕಿಸಿ ಆಸಕ್ತ ಅಭ್ಯರ್ಥಿಗಳು ಮತ್ತು ಪೋಷಕರು ಪ್ರವೇಶ ಪಡೆದು ಇದರ ಸದುಪಯೋಗಪಡಿಸಿಕೊಳ್ಳಲು ಅಣಬೇರು ಶಿವಮೂರ್ತಿ ತಿಳಿಸಿದ್ದಾರೆ.