ನೇಮಕಾತಿ ಪರೀಕ್ಷೆಗಳನ್ನು ಆಯಾ ರಾಜ್ಯಗಳ ಭಾಷೆಗಳಲ್ಲಿ ನಡೆಸಿ : ತಹಶೀಲ್ದಾರ


ಶಿರಹಟ್ಟಿ, ನ 7- ಕೇಂದ್ರ ಸರ್ಕಾರ ನಡೆಸುವ ವಿವಿದ್ಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಆಯಾ ರಾಜ್ಯಗಳ ಭಾಷೆಗಳಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಜಾಪರ ವೇದಿಕೆಯ ವತಿಯಿಂದ ತಹಶೀಲ್ದಾರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾಪರ ವೇದಿಕೆಯ ತಾಲೂಕಾ ಅಧ್ಯಕ್ಷ ಹಸನ್ ತಹಶೀಲ್ದಾರ ಮಾತನಾಡುತ್ತಾ, ರಾಷ್ಟ್ರೀಕೃತ ಬ್ಯಾಂಕ, ಎಸ್‍ಎಸ್‍ಸಿ, ಎಲ್.ಐ.ಸಿ. ಬಿಎಸ್‍ಎನ್‍ಎಲ್ ಸೇರಿದಂತೆ ಇನ್ನೀತರೆ ಕೇಂದ್ರಿಯ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದಲ್ಲಿ ಕನ್ನಡದಲ್ಲೇ ನಡೆಸುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಹುದ್ದೆ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯವು ಗ್ರಾಮೀಣ ಪ್ರದೇಶಗಳಿಂದ ಕೂಡಿದ ರಾಜ್ಯವಾಗಿದೆ ಇಲ್ಲಿ ಬ್ಯಾಂಕುಗಳಲ್ಲಿ ಪರಭಾಷಿಕರು ಬಂದಿದ್ದರಿಂದ ಗ್ರಾಮೀಣ ಭಾಗದವರಿಗೆ ಸಮರ್ಪಕವಾದ ಸೇವೆ ಸಿಗುತ್ತಿಲ್ಲಾ ಗ್ರಾಮೀಣ ಬ್ಯಾಂಕುಗಳ ಉದ್ದೇಶವು ಪಲಿಸುತ್ತಿಲ್ಲಾ ಸಿಬ್ಬಂದಿಗಳಿಗೆ ಸ್ಥಳೀಯ ಭಾಷೆ ಗೊತ್ತಿಲ್ಲದಿರುವುದರಿಂದಾ ಗ್ರಾಮೀಣ ಭಾಗದ ರೈತರಿಗೆ ತೊಂದರೆಯಾಗುತ್ತಿದೆ ವಿಷಾದ ವ್ಯಕ್ತಪಡಿಸಿದರು.
ಸಂಘದ ಕಾರ್ಯಕರ್ತರಾದ ಶಶಿಧರ ದೇಗಾವಿ ಹಾಗೂ ಅಜ್ಜಪ್ಪ ಬಿಡವೆ ಮಾತನಾಡುತ್ತಾ, ಕೇಂದ್ರ ಸರ್ಕಾರ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗೆ ಹೆಚ್ಚು ಮನ್ನಣೆ ನೀಡುತ್ತಿರುವುದರಿಂದ ಹಿಂದಿ ಮತ್ತು ಆಂಗ್ಲ ಭಾಷಿಕರು ಮಾತ್ರ ಹೆಚ್ಚು ಹುದ್ದೆ ಅಲಂಕರಿಸುತ್ತಿದ್ದಾರೆ. ಕನ್ನಡಿಗರು ಸೇರಿದಂತೆ ಇತರೆ ಭಾಷಿಕರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಸಂವಿಧಾನದ 8 ನೇ ಪರಿಚ್ಚೇದದಂತೆ ದೇಶದ 22 ಭಾಷೆಗಳಲ್ಲಿ ಎಲ್ಲಾ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಆದ್ಯತೆ ಸಿಗಲೇಬೇಕು ಬ್ಯಾಂಕಿಂಗ್ ಹಾಗೂ ಇತರೇ ಕೇಂದ್ರ ಸರಕಾರದ ನೇಮಕಾತಿಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೋಡಬೇಕು ವಿನಂತಿ ಮಾಡಿಕೊಂಡರು.
ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಗಮನಹರಿಸಿ ಕನ್ನಡ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಹಾಗೂ ಇತರೇ ಪರೀಕ್ಷೆಗಳನ್ನು ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು.ಎಂದು ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ತಮಗೆ ಈ ಮೂಲಕ ವಿನಂತಿಯ ಮನವಿ.
ಈ ಸಂದರ್ಭದಲ್ಲಿ ಮಂಜುನಾಥ ಕೊಂಚಿಗೇರಿ, ಸಮೀರ ಕಾರಬೂದಿ, ಶಿವಾನಂದ ಸುಲ್ತಾನಪೂರ, ಪ್ರದೀಪ ಮೂರಶಿಳ್ಳಿ, ಮಂಜುನಾಥ ಬಳಿಗಾರ, ಶಶಾಂಕ ಮತ್ತೂರ, ಸತೀಶ ನರಗುಂದ, ಪರಶುರಾಮ ಹುಬ್ಬಳ್ಳಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.