ನೇಮಕಾತಿಯಲ್ಲಿ ಅವಕಾಶ ನೀಡಿ :ಸಂಕನೂರ


ಧಾರವಾಡ ಜ.5:ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಹಿಂದಿ ಭಾμÉ ಸಹ ಶಿಕ್ಷಕರ ನೇಮಕಾತಿ ಆಗಲು 2016 ರಲ್ಲಿ ಸಿ ಆ್ಯಂಡ್ ಆರ್ ನಿಯಮ ಬದಲಾವಣೆ ಮಾಡಿ ಹಿಂದಿ ಪ್ರಚಾರ ಸಭೆಯವರು ನಡೆಸುವ ಬಿ.ಇಡಿ ಪದವಿ ಮಾನ್ಯತೆಯನ್ನು ರದ್ದುಗೊಳಿಸಲಾಗಿರುವುದು. ಹೀಗಾಗಿ ಈ ನಿಯಮವು ಜಾರಿಗೆ ಬರುವ ಪೂರ್ವದಲ್ಲಿ ಬಿ.ಇಡಿ ಪದವಿ ಹೊಂದಿರುವ ಪದವೀಧರರಿಗೆ ಸಹ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿಕೊಡುವಂತೆ ಸೂಕ್ತ ಕ್ರಮ ಕೈಗೊಳ್ಳುಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್ ಸುರೇಶಕುಮಾರ ಅವರಿಗೆ ವಿಧಾನ ಪರಿಷತ್ ಸದಸ್ಯರಾದ ಎಸ್ ವ್ಹಿ ಸಂಕನೂರ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಯಾವುದೇ ಒಂದು ಕಾನೂನು ಜಾರಿಗೆ ತರುವಾಗ ಅದನ್ನು ಪೂರ್ವನ್ವಯವಾಗಿ ಜಾರಿಗೆ ತರದೇ ಭವಿಷ್ಯವರ್ತಿಯಾಗಿ ತರುವುದು ನ್ಯಾಯಸಮ್ಮತ ಹಾಗೂ ಕಾನೂನುಬದ್ದವಾಗಿದೆ. ಆದ್ದರಿಂದ 2016ರ ಪೂರ್ವದಲ್ಲಿ ಹಿಂದಿ ಪ್ರಚಾರಸಭೆಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದ ರೀತಿಯಲ್ಲಿ ಕೂಡಲೇ ಕ್ರಮ ಜರುಗಿಸಲು ವಿಧಾನ ಪರಿಷತ್ ಸದಸ್ಯರಾದ ಎಸ್ ವ್ಹಿ ಸಂಕನೂರ ಸರಕಾರವನ್ನು ಒತ್ತಾಯಿಸಿದ್ದಾರೆ.