ನೇಪಾಳ ಅಧ್ಯಕ್ಷರ ಆಯ್ಕೆಗೆ ಮತದಾನ

ಕಠ್ಮಂಡು, ಮಾ.೯- ನೇಪಾಳದ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ಪ್ರಗತಿಯಲ್ಲಿದ್ದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ನೇಪಾಳಿ ಕಾಂಗ್ರೆಸ್ ಹಿರಿಯ ನಾಯಕ ರಾಮ್ ಚಂದ್ರ ಪೌಡೆಲ್ ಮತ್ತು ಸಿಪಿಎನ್ – ಯುಎಂಎಲ್ ನ ಉಪಾಧ್ಯಕ್ಷ ಸುಭಾಷ್ ಚಂದ್ರ ನೆಂಬಾಂಗ್ ನಡುವೆ ನೇಪಾಳ ಅಧ್ಯಕ್ಷಸ್ಥಾನಕ್ಕೆ ಅಧ್ಯಕ್ಷೀಯ ನೇರ ಹಣಾಹಣಿ ನಡೆದಿದೆ.
ನೇಪಾಳಿ ಕಾಂಗ್ರೆಸ್ ಹಿರಿಯ ನಾಯಕ ರಾಮಚಂದ್ರ ಪೌಡೆಲ್ ಅವರನ್ನು ಎಂಟು ಪಕ್ಷಗಳು ಬೆಂಬಲಿಸಿದರೆ, ಸಿಪಿಎನ್ – ಯುಎಂಎಲ್ ನ ಏಕೈಕ ಅಭ್ಯರ್ಥಿ ಸುಭಾಷ್ ಚಂದ್ರ ನೆಂಬಾಂಗ್ ಅವರನ್ನು ಸ್ವತಂತ್ರ ಶಾಸಕರು ಬೆಂಬಲಿಸುವ ನಿರೀಕ್ಷೆಯಿದೆ.
ಮಧ್ಯಾಹ್ನ ೩ ಗಂಟೆ ತನಕ ಮತದಾನ ನಡೆಯಲಿದ್ದು ಆ ಬಳಿಕ ಮತ ಎಣಿಜೆ ಆರಂಭವಾಗಲಿದ್ದು ಮುಗಿದ ಸಂಜೆ ೭ ಗಂಟೆಗೆ ಫಲಿತಾಂಶ ಪ್ರಕಟವಾಗುವ ಸಾದ್ಯತೆ ಇದೆ ಎಂದು ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ೨೭೫ ಸದಸ್ಯರು, ರಾಷ್ಟ್ರೀಯ ಅಸೆಂಬ್ಲಿಯ ೫೯ ಮತ್ತು ಏಳು ಪ್ರಾಂತೀಯ ಅಸೆಂಬ್ಲಿಗಳಲ್ಲಿ ೫೫೦ ಸದಸ್ಯರು ಸೇರಿದಂತೆ ಒಟ್ಟು ೮೮೪ ಸದಸ್ಯರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವ ಅರ್ಹತೆ ಪಡೆದಿದ್ದಾರೆ.
ಫೆಡರಲ್ ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಯಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲದಿದ್ದರೆ, ಚುನಾವಣಾ ಕಾಲೇಜಿನಲ್ಲಿ ಒಟ್ಟು ೫೨,೭೮೬ ಮತಗಳ ಮೌಲ್ಯವಿರಲಿದೆ.
ರಾಜಪ್ರಭುತ್ವದ ಪರ ಪಕ್ಷ ಮತದಾನದಿಂದ ದೂರವಿದೆ. ರಾಜಪ್ರಭುತ್ವದ ಪರವಾದ ಉದಾಹರಣೆಗಾಗಿ ಹೆಸರು ವಾಸಿಯಾಗಿರುವ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಅಧ್ಯಕ್ಷೀಯ ಚುನಾವಣೆಯಿಂದ ದೂರವಿರಲು ನಿರ್ಧರಿಸಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ತಟಸ್ಥವಾಗಿರಲು ಕೇಂದ್ರ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ ಎಂದು ಆರ್‌ಪಿಪಿ ವಕ್ತಾರ ಮೋಹನ್ ಶ್ರೇಷ್ಠಾ ಖಚಿತಪಡಿಸಿದ್ದಾರೆ.
ಆರ್ ಪಿಪಿ ಅಧ್ಯಕ್ಷರ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸಲಿಲ್ಲ. ಆರ್‌ಪಿಪಿ ಪಕ್ಷ ಅಧ್ಯಕ್ಷೀಯ ಚುನಾವಣೆಯ ಮುನ್ನಾದಿನದಂದು ಮತದಾನದಿಂದ ದೂರವಿರಲು ನಿರ್ಧರಿಸಿದೆ. ಹೀಗಾಗಿ ಪೌಡೆಲ್ ಮತ್ತು ನೆಂಬಾಂಗ್ ನಡುವೆ ತೀವ್ರ ಸ್ಪರ್ಧೆ ಎದುರಾಗಿದೆ.