
ಕಠ್ಮಂಡು,ಮಾ.13- ನೆರೆಯ ನೇಪಾಳದ ನೂತನ ಅಧ್ಯಕ್ಷರಾಗಿ ರಾಮ ಚಂದ್ರ ಪೌಡೆಲ್ ಪ್ರಮಾಣ ವಚನ ಸ್ವೀಕರಿಸಿದರು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹರಿಕೃಷ್ಣ ಕರ್ಕಿ ಅವರು 78 ವರ್ಷ ವಯಸ್ಸಿನ ರಾಮ್ ಚಂದ್ರ ಪೌಡೆಲ್ ಅಗರಿಗೆ ಪ್ರಮಾಣ ವಚನ ಬೋಧಿಸಿದರು
ರಾಷ್ಟ್ರಪತಿಗಳ ಕಚೇರಿಯ ಶೀತಲ್ ನಿವಾಸದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪೌಡೆಲ್ 8 ಮಿತ್ರಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾದಿಸಿದ್ದರು.ಇದೀಗ ಅವರು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ನೇಪಾಳದ ಸಂವಿಧಾನದ ಒಂದು ನಿಬಂಧನೆಯು ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವ ಮೊದಲು ಮುಖ್ಯ ನ್ಯಾಯಾಧೀಶರಿಂದ ಅಧಿಕಾರದ ಪ್ರಮಾಣ ಮತ್ತು ಗೌಪ್ಯತೆಯನ್ನು ತೆಗೆದುಕೊಳ್ಳುತ್ತಾರೆ
ನೇಪಾಳದ ನೂತನ ಅಧ್ಯಕ್ಷರಾಗಿ ರಾಮಚಂದ್ರ ಪೌಡೆಲ್ ಕಳೆದ ಗುರುವಾರ 33,802 ಚುನಾವಣಾ ಮತಗಳನ್ನು ಗಳಿಸಿ, ಅವರ ಪ್ರತಿಸ್ಪರ್ಧಿ ಸುಭಾಷ್ ಚಂದ್ರ ಅವರನ್ನು ಪರಾಭವ ಗೊಳಿಸಿದ್ದರು.
ನೇಪಾಳದ ಚುನಾವಣಾ ಆಯೋಗದ ಪ್ರಕಾರ ನೆಂಬ್ವಾಂಗ್ 15,518 ಚುನಾವಣಾ ಮತಗಳನ್ನು ಪಡೆದಿದ್ದರು ಎಂದು ಆಯೋಗ ತಿಳಿಸಿದೆ.
ಇದಲ್ಲದೆ, ನೇಪಾಳದ ಚುನಾವಣಾ ಆಯೋಗದ ಪ್ರಕಾರ, ಫೆಡರಲ್‌ನ 313 ಸದಸ್ಯರು ಸೇರಿದಂತೆ ಪ್ರಾಂತೀಯದಿಂದ 518 ಸದಸ್ಯರು ಮತದಾನದಲ್ಲಿ ಪಾಲ್ಗೊಂಡರು