ನೇಪಾಳದಲ್ಲಿ ರಜನಿ ತಲವಾರ್‍ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ,ಏ.21-ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಆಳಂದ ತಾಲೂಕಿನ ಧುತ್ತರಗಾಂವ ಗ್ರಾಮದ ಯುವ ಕಲಾವಿದೆ ರಜನಿ ತಳವಾರ ಅವರು ಅತ್ಯುತ್ತಮ ಚಿತ್ರಕಲೆಗಾಗಿ ಪ್ರಶಸ್ತಿ ಪಡೆದರು. ಏಪ್ರಿಲ್ 18 ರಂದು ತಾಮೆಲ್ ಕಠ್ಮಂಡುವಿನ ಸೋಂಜಾ ಆರ್ಟ್ ಗ್ಯಾಲರಿಯಲ್ಲಿ ಸಂಸದ ಗಣೇಶ್ ಪರಾಜುಲಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಭಾರತೀಯ ಸಂಸ್ಕøತಿಯ ಸಂಪ್ರದಾಯವನ್ನು ಪ್ರತಿನಿಧಿಸುವ ಅತ್ಯುತ್ತಮ ಚಿತ್ರಕಲೆಗಾಗಿ ಶೋರೊಂಗ್ ಆರ್ಟ್ ಗ್ರೂಪ್ ಈ ಪ್ರಶಸ್ತಿಯನ್ನು ನೀಡಿದೆ.
ಈ ಸಂದರ್ಭದಲ್ಲಿ ಕಲಾ ಗ್ಯಾಲರಿ ನಿರ್ದೇಶಕ ಚಿರಂಜೀವಿ ಭಟ್ಟ, ಸಂಘಟಕ ನರ್ಗೀಶ ಸೋಮ, ಕಲಾವಿದ ರೆಹಮಾನ್ ಪಟೇಲ್ ಉಪಸ್ಥಿತರಿದ್ದರು.