
ದಾವಣಗೆರೆ. ಜು.೨೧; ಶ್ರೀ ಹರಿಹರೇಶ್ವರ ಯೋಗ ಮತ್ತು ಸ್ಪೋರ್ಟ್ಸ್ ಅಕಾಡಮಿ ಹರಿಹರ ಸಂಸ್ಥೆಯ ಯೋಗಪಟು ಕುಮಾರಿ. ಪ್ರಿಯಾ .ಕೆ.ಆರ್ ನೇಪಾಳ ಆರ್ಮಿ ಸ್ಟೇಡಿಯಂ ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸುವುದರ ಮೂಲಕ ಸ್ವರ್ಣ ಪದಕವನ್ನು ಗಳಿಸಿದ್ದಾರೆ. 12 ರಿಂದ 16 ವಯಸ್ಸಿನ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.ಸ್ವರ್ಣ ಪದಕಪಡೆದ ಪ್ರಿಯಾಗೆ ನೇಪಾಳದ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಭರತ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.ಈ ವೇಳೆ ಭಾರತದ ಅಮಿತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಬಾಲಕಿಯ ಸಾಧನೆಗೆ ಕಾಳಿದಾಸ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ .ಯೋಗ ಶಿಕ್ಷಕರಾದ ಶ್ರೀಮತಿ ಸ್ವಪ್ನ ತರಬೇತಿಯನ್ನು ನೀಡಿದ್ದಾರೆ.
Attachments area