ನೇಪಾಳದಲ್ಲಿ ಭೂಕಂಪನ: ಪ್ರಾಣ ಹಾನಿ ಇಲ್ಲ

ಕಠ್ಮಂಡು ,ನ.೨೩- ಹಿಮಾಲಯ ನೇಪಾಳದಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ.
ನೇಪಾಳದ ಮಕ್ವಾನ್‌ಪುರ ಜಿಲ್ಲೆಯ ಚಿತ್ಲಾಂಗ್‌ನಲ್ಲಿ ೪.೫ ತೀವ್ರತೆಯ ಭೂಕಂಪನದ ಅನುಭವವಾಗಿದೆ. ನೇಪಾಳ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಗುರುವಾರ (ನವೆಂಬರ್ ೨೩) ಮುಂಜಾನೆ ಭೂಕಂಪನದ ಅನುಭವವಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನವೆಂಬರ್ ೩ ರಂದು ಹಿಮಾಲಯ ರಾಷ್ಟ್ರವನ್ನು ಅಪ್ಪಳಿಸಿದ ೬.೪ ತೀವ್ರತೆಯ ಭೂಕಂಪದಿಂದ ಉಂಟಾದ ಜೀವ ಮತ್ತು ಆಸ್ತಿ ನಷ್ಟದಿಂದ ನೇಪಾಳವು ಇನ್ನೂ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈಗ ಈ ಭೂಕಂಪವು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
ವೈದ್ಯಕೀಯ ಉಪಕರಣಗಳು, ಪರಿಹಾರ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡಿರುವ ೬.೪ ತೀವ್ರತೆಯ ಭೂಕಂಪದಿಂದ ಹಾನಿಗೊಳಗಾದ ಜನರಿಗೆ ಭಾರತವು ತುರ್ತು ಸಹಾಯ ಪ್ಯಾಕೇಜ್ ಕಳುಹಿಸಿದೆ. ನವದೆಹಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿಯೂ ಸಹ ನಡುಗಿದೆ .
ನವೆಂಬರ್ ೩ರಂದು ಉಂಟಾದ ತೀವ್ರ ಭೂಕಂಪದಿಂದ ನೇಪಾಳದಲ್ಲಿ ೧೫೭ ಜನರು ಸಾವನ್ನಪ್ಪಿದ್ದಾರೆ , ಅನೇಕರು ಗಾಯಗೊಂಡಿದ್ದಾರೆ. ಮೊದಲ ಪ್ರತಿಸ್ಪಂದಕರಾಗಿ ಕಾರ್ಯನಿರ್ವಹಿಸಿದ ಭಾರತದಿಂದ ಭೂಕಂಪ-ಪೀಡಿತ ಸಮುದಾಯಗಳಿಗೆ ಸಹಾಯ ಮಾಡಲು ಅಗತ್ಯ ಔಷಧಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಲಾಗಿದೆ.
ನೇಪಾಳಕ್ಕೆ ಭೂಕಂಪ ಪರಿಹಾರ ನೆರವು ಮತ್ತು ಅಗತ್ಯ ವೈದ್ಯಕೀಯ ಸಾಮಗ್ರಿಗಳ ನಾಲ್ಕನೇ ಕಂತನ್ನು ಭಾರತ ಸೋಮವಾರ ಕಳುಹಿಸಿದೆ.
೨೦೧೫ ರಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪನವು ನೇಪಾಳದ ಇತಿಹಾಸದಲ್ಲಿ ಸಂಭವಿಸಿದೆ. ಆ ಸಮಯದಲ್ಲಿ, ಭೂಕಂಪದ ತೀವ್ರತೆಯನ್ನು ೭.೮ ಮತ್ತು ೮.೧ ರಲ್ಲಿ ಅಳೆಯಲಾಗಿದೆ. ಇದರಲ್ಲಿ ೮ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ .ಈ ಭೂಕಂಪದ ಕಂಪನಗಳನ್ನು ೨೫ ಏಪ್ರಿಲ್ ೨೦೧೫ ರಂದು ಸ್ಥಳೀಯ ಸಮಯ ಬೆಳಿಗ್ಗೆ ೧೧.೫೬ ಕ್ಕೆ ಉಂಟಾಗಿದೆ .ಆ ಸಮಯದಲ್ಲಿ ಅನೇಕ ಐತಿಹಾಸಿಕ ದೇವಾಲಯಗಳು ಮತ್ತು ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿದೆ.