ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಸುಬ್ಬಯ್ಯ ಎಂ ನೀಲಾ

ಕಲಬುರಗಿ;ಏ.28: ನೇಪಾಳದ ಕಠ್ಮಂಡುವಿನ ಸೋಂಜಾ ಆರ್ಟ್ ಗ್ಯಾಲರಿಯಲ್ಲಿ ಏಪ್ರಿಲ್ 15 ರಿಂದ 17 ರವರೆಗೆ ಶೋರಾಂಗ್ ಆರ್ಟ್ ಗ್ರೂಪ್ ವತಿಯಿಂದ ಆಯೋಜಿಸಿದ, ಅಂತರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಶರಣಬಸವ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಪೆÇ್ರ.ಸುಬ್ಬಯ್ಯ ಎಂ ನೀಲಾ ಪ್ರಥಮ ಬಹುಮಾನ ಗಳಿಸಿ ದೇಶಕ್ಕೆ ಹಾಗೂ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಅಕ್ರಿಲಿಕ್ ಮತ್ತು ಕ್ಯಾನ್ವಾಸ್‍ನಲ್ಲಿ ಮೂಡಿ ಬಂದಿರುವ ಪ್ರಸಿದ್ಧ ಪಶುಪತಿನಾಥ ದೇವಾಲಯ ಮತ್ತು ಶ್ರೀ ಶರಣಬಸವೇಶ್ವರ ದೇವಾಲಯವನ್ನು ಚಿತ್ರಿಸಿರುವ ಪೆÇ್ರ.ನೀಲಾ ಅವರ “ಭಾರತ ಮತ್ತು ನೇಪಾಳ” ಚಿತ್ರಕಲೆ ವಿವಿಧ ದೇಶಗಳ ತೀರ್ಪುಗಾರರ ಮೆಚ್ಚುಗೆಯನ್ನು ಗಳಿಸಿ ಅತ್ಯುತ್ತಮ ಕಲಾಕೃತಿ ಎಂದು ಘೋಷಿಸಲಾಯಿತು.

ವಿವಿಧ ದೇಶಗಳ ಸುಮಾರು 44 ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು, ಅವರಲ್ಲಿ 22 ಕಲಾವಿದರನ್ನು ಕಲಾ ಶಿಬಿರದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಯಿತು, ಅಲ್ಲಿ ಕಲಾವಿದರು ಅತ್ಯುತ್ತಮ ಚಿತ್ರಗಳ ಆಯ್ಕೆಗಾಗಿ ಕ್ಯಾನ್ವಾಸ್‍ನಲ್ಲಿ ತಮ್ಮ ಕಲ್ಪನೆಯನ್ನು ಹೊರತರುವಂತೆ ತಿಳಿಸಲಾಯಿತು. ವಸ್ತುಪ್ರದರ್ಶನದ ಕೊನೆಯಲ್ಲಿ ಪೆÇ್ರ.ನೀಲಾ ಅವರಿಗೆ ಸಂಸದ ಗಣೇಶ್ ಪರಾಜುಲಿ ಪ್ರಶಸ್ತಿ ಪ್ರದಾನ ಮಾಡಿದರು.