ನೇತ್ರ ತಪಾಸಣೆ ಮಾಡಿಸಿಕೊಂಡ ಜನತೆ

ವಾಡಿ:ಎ.2: ಪಟ್ಟಣದ ಬಳಿರಾಮಚೌಕ್‍ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಸಹಭಾಗಿತ್ವದಲ್ಲಿ ಆಯೋಜಿಸಲಾದ ಉಚಿತ ನೇತ್ರಾ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಪಟ್ಟಣದ ನಿವಾಸಿಗಳು ಹಾಗೂ ಸುತ್ತಲಿನ ಹಳ್ಳಿಯ ನಾಗರಿಕರು ನೇತ್ರಾ ತಪಾಸಣೆ ಮಾಡಿಸಿಕೊಂಡು ಶಿಬಿರದಲ್ಲಿ ಪಾಲ್ಗೋಂಡಿದ್ದರು.

ನೇತ್ರಾಧಿಕಾರಿ ಆಫ್ರೀನ್ ಕೌಸರ್ ಮಾತನಾಡಿ, ಕಣ್ಣುಗಳು ದೇಹದ ಪ್ರಮುಖ ಅಂಗವಾಗಿದೆ, ಕಣ್ಣಿನ ಆರೋಗ್ಯದ ಕುರಿತು ನಿಷ್ಕಾಳಜಿ ತೋರಬಾರದು. ಕಣ್ಣಿನ ಯಾವುದೇ ಸಮಸ್ಯೆವಿದ್ದರೂ ನೇತ್ರಾ ತಜ್ಞರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಸೂಕ್ತ ಆರೈಕೆ ಮಾಡಬೇಕು, ಪೋಷಕಾಂಶ ಭರಿತವಾದ ಆಹಾರ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಡಾ.ಸಾವಿತ್ರಿ ಗಲಗಲಿ ಶಿಬಿರದಲ್ಲಿ ಪಾಲ್ಗೋಂಡಿದ್ದರು. ಶಿಬಿರದಲ್ಲಿ ಕಣ್ಣಿನ ದೋಷವಿರುವ ಹಲವು ಜನರನ್ನು ತಪಾಸಣೆ ನಡೆಸಲಾಯಿತು.