ನೇತ್ರ ತಜ್ಞ ಡಾ. ಕೆ.ನಾಗರಾಜ ಅವರ ನಿಧನ ವೈದ್ಯಲೋಕಕ್ಕೆ ಅಪಾರ ನಷ್ಟ- ಬಿ.ನಾಗನಗೌಡ


ಸಂಜೆವಾಣಿ ವಾರ್ತೆ
ಸಂಡೂರು : ಜು: 20: ವೈದ್ಯಲೋಕಕ್ಕೆ ಕೊಂಡ್ಲಳ್ಳಿಯ ಡಾ. ನಾಗರಾಜ ಅವರ ನಿಧನ ಅಪಾರ ನಷ್ಟವನ್ನು ಉಂಟುಮಾಡಿದೆ, ಅವರ ಸರಳತೆ ಮತ್ತು ಸೇವಾ ಗುಣವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳೋಣ , ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಬಿ.ಕೆ.ಜಿ. ಗಣಿ ಕಂಪನಿಯ ಮುಖ್ಯಸ್ಥರಾದ ಬಿ.ನಾಗನಗೌಡ ಸಂತಾಪ ಸೂಚಿಸಿದರು.
ಅವರು ಪಟ್ಟಣದ ಬಿಕೆಜಿ ಗಣಿ ಕಂಪನಿಯಲ್ಲಿ ಡಾ. ಕೆ.ನಾಗರಾಜ ಅವರು ಇದೇ ಜೂನ್ 15 ರಂದು ನಿಧನರಾಗಿದ್ದು ಅದರ ಪ್ರಯುಕ್ತ ಕಂಪನಿಯು ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮುರು ತಾಲೂಕಿನ ಕೊಂಡ್ಲಹಳ್ಳಿಯ ರುದ್ರಮ್ಮ, ತಾಳ್ಮೇರಪ್ಪ ಮೇಲುಮಾಳಿಗಿದಂಪತಿಗಳ 8ನೇ ಮಗನಾಗಿ ಜನಸಿದರು, ಅವರ ಕೃಷಿ ಕುಟುಂಬದಲ್ಲಿ ಆದರ್ಶ ಬದುಕನ್ನು ಸಾಗಿಸಿದ ಇವರು ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ 1974ರಲ್ಲಿ ಎಂ.ಬಿ.ಬಿ.ಎಸ್. ಪದವಿಯನ್ನು ಪಡೆದುಕೊಂಡು 1979ರಲ್ಲಿ ಮಿಂಟೋ ಅಸ್ಪತ್ರೆಯಲ್ಲಿ ಡಿ.ಓ.ಎಂ.ಎಸ್. ಪದವಿ ಪಡೆದುಕೊಂಡು ದಾವಣಗೆರಿಯ ಚಿಗಟೇರಿ ಅಸ್ಪತ್ರೆಯಲ್ಲಿ ಮೆಡಿಕಲ್ ಅಫಿಸರ್ ಅಗಿ ವೃತ್ತಿಯನ್ನು ಪ್ರಾರಂಭಿಸಿದರು. ಇವರು ಎಂ.ಎಸ್ ವಿದ್ಯಾರ್ಥಿಯಾಗಿದ್ದಾಗಲೆ ಸಂಡೂರು ತಾಲೂಕಿನ ದೋಣಿಮಲಯನಲ್ಲಿ ಶಸ್ತ್ರ ಚಿಕಿತ್ಸಾ ಶಿಬಿರಗಳಲ್ಲಿ ಭಾಗಿಯಾಗಿ ಉಚಿತಾ ಸೇವಾ ಕಾರ್ಯಕ್ಕೆ ನಾಂದಿಯಾಡಿದರು. ಇಲ್ಲಿಯವರೆಗೆ ಸಾವಿರಾರು ಸೇವಾ ಶಿಬಿರಗಳ ಮೂಲಕ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ, ಬಿ.ಕೆ.ಜಿ ಫೌಂಡೇಷನ್ ವತಿಯಿಂದ 1200ಕ್ಕೂ ಹೆಚ್ಚು ರೋಗಿಗಳಿಗೆ ನೇತ್ರ ಶಿಬಿರ ಮಾಡುವ ಮೂಲಕ ಸಂಡೂರಿನ ಜನತೆಗೂ ತಮ್ಮದೇ ಅದ ಸೇವೆಯನ್ನು ಸಲ್ಲಿಸಿದ್ದಾರೆ ಇಂತಹ ಸೇವಾ ಗುಣವನ್ನು ನಾವು ಅಳವಡಿಸಿಕೊಳ್ಳುವ ಮೂಲಕ ಸೇವೆ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಈ ಸಂದರ್ಭದಲ್ಲಿ ಬಿಕೆಜಿ ಕಂಪನಿಯ ಜನರಲ್ ಮ್ಯಾನೇಜರ್ ಪಿ.ಶ್ರೀನಿವಾಸ ರಾವ್ ಮಾತನಾಡಿ ಸಂತಾಪ ಸೂಚಿಸಿ ಅವರ ಸೇವೆ ಸ್ಮರಿಸಿದರು, ಅಲ್ಲದೆ ಕಂಪನಿಯ ಗಿರೀಶ್ ಅವರ ನಿರಂತರ ಸೇವೆ ಬಗ್ಗೆ ತಿಳಿಸಿದರು, ಹೆಚ್.ಅರ್. ವಿಭಾಗದ ಗೋಪಾಲ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕಂಪನಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು ಸಂತಾಪ ಸುಚಿಸಿದರು.

One attachment • Scanned by Gmail