ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕು ನೀಡಿದ ಶರಣಮ್ಮ ಸಗರದ

ರಾಯಚೂರು,ಜೂ.೦೯-
ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಶರಣಮ್ಮ ಸಗರದ ಗಂಡ ಅಮರಣ್ಣ ಸಗರದ ಇಂದು ರಿಮ್ಸ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರ ಇಚ್ಛೆಯಂತೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರ ಬ್ಯಾಂಕ್‌ಗೆ ಅವರು ಕಣ್ಣುಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.
ನಗರದ ಖ್ಯಾತ ಹೃದಯ ರೋಗ ತಜ್ಞರಾದ ಡಾ.ಸುರೇಶ ಸಗರದ ಅವರು ತಮ್ಮ ಚಿಕ್ಕಮ್ಮ ನವರ ನೇತ್ರದಾನ ಮಾಡಲು ಕುಟುಂಬದ ಸದಸ್ಯರಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ಮಾಡಿದ್ದಾರೆ.
ರಿಮ್ಸ ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥರಾದ ಡಾ.ಸಿದ್ದೇಶ ಅವರ ಮಾರ್ಗದರ್ಶನದಲ್ಲಿ ವೈದ್ಯರ ತಂಡ ಡಾ. ಕರಿಶ್ಮಾ ನೇತ್ರ ಬ್ಯಾಂಕಿನ ಸಯೋಜಕರು, ಡಾ. ಐಶ್ವರ್ಯಾ, ಡಾ. ವಿಷ್ಣು, ಡಾ. ರಾಜು ಹಾಗೂ ಡಾ. ಸಂದೇಶ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ದಿವಂಗತ ಶರಣಮ್ಮ ಸಗರದ ಅವರ ಗಂಡ ಆಮರಣ್ಣ ಸಗರದ, ಅವರ ಕ್ಕಳಾದ ಚನ್ನಬಸವ ಸಗರದ, ಅಂಬಮ್ಮ, ರಾಜೇಶ್ವರಿ, ನೀಲಮ್ಮ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನೇತ್ರದಾನ ವೆಂಬುವುದು ಪವಿತ್ರ ಕಾರ್ಯ ಎಂದು ಲಾಯನ್ಸ್ ಕ್ಲಬ್‌ನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿಯ ರಾಯಚೂರು ಜಿಲ್ಲಾಧ್ಯಕ್ಷರಾದ ರಾಜೇಂದ್ರ ಕುಮಾರ್ ಎಸ್. ಶಿವಾಳೆ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ