ನೇತ್ರದಾನ ಮಾಡಿ ಮಾದರಿಯಾದ ವಾಮನಮೂರ್ತಿ

ಕೋಲಾರ,ಮಾ,೧೫- ನಗರದ ಪಿ.ಸಿ. ಬಡಾವಣೆಯ ಮೊಥೋಡಿಸ್ಟ್ ಶಾಲೆಯ ನಿವೃತ್ತ ಶಿಕ್ಷಕರಾದ ಕೆ.ವಾಮನಮೂರ್ತಿ ರವರು ಮಾರ್ಚ್ ೧೨ರ ಭಾನುವಾರ ತಮ್ಮ ೭೫ನೇ ವಯಸ್ಸಿನಲ್ಲಿ ನಮ್ಮ ಸ್ವಗೃಹದಲ್ಲಿ ನಿಧನರಾದರು.
ಕೆ.ವಾಮನಮೂರ್ತಿರವರು ಮೆಥೋಡಿಸ್ಟ್ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸುಧೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಅವರು ಮಗಳು ಗೀತ, ಅಳಿಯ ಸುಬ್ಬರಾಮ್, ಮೊಮ್ಮಕ್ಕಳಾದ ವರ್ಷಿಣಿ, ಇಂಚರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಆರ್.ಎಲ್. ಜಾಲಪ್ಪ ಆಸ್ಪತ್ರೆಯ ನೇತ್ರ ವಿಭಾಗದ ತಂಡದ ಡಾ.ಶರದಿ, ಡಾ.ರವೀನ, ಡಾ.ತೇಜ ಅವರುಗಳು ಶ್ರೀಯುತರ ಎರಡು ನೇತ್ರಗಳನ್ನು ಸಂಗ್ರಹಿಸಿ ಮತ್ತಿಬ್ಬರಿಗೆ ದಾನ ನೀಡಲು ಸಹಕಾರಿಸಿದರು.
ಸಂಬಂಧಿಕರಾದ ವಾಸು, ಶ್ರೀಧರ್, ರೋಟರಿ ಸಂಸ್ಥೆಯ ರೊ. ವಿ.ಪಿ.ಸೋಮಶೇಖರ್ ರವರು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.