ನೇತ್ರದಾನ ಕಾರ್ಯಕ್ರಮ ರಾಜ್ಯದ ನೌಕರರಿಗೆ ಮಾದರಿ: ಎ. ಎಚ ಖನಗಾಂವಿ

(ಸಂಜೆವಾಣಿ ವಾರ್ತೆ)
ಇಂಡಿ:ನ.21:ತಾಲೂಕಿನ ಚಿಕ್ಕಬೇವನೂರ ಗ್ರಾಮದ ಆರೋಗ್ಯ ಕೇಂದ್ರದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧಿಕಾರಿ ಸಿಬ್ಬಂದಿ ವರ್ಗ ಏಕಕಾಲಕ್ಕೆ ಒಟ್ಟು 125 ಜನ ನೇತ್ರದಾನ ವಾಗ್ದಾನ ಪ್ರಮಾಣ ಪತ್ರ ಬರೆದುಕೊಡುವುದರೊಂದಿಗೆ ಪ್ರತಿಜ್ಞಾವಿಧಿ ಮಾಡಿದರು.
ರಾಜ್ಯದ ಸರ್ಕಾರಿ ಇಲಾಖೆಗಳ ಸಂಸ್ಥೆಗಳಿಗೆ ಎಲ್ಲಾ ನೌಕರರಿಗೆ ಮಾದರಿ ಮೆಚ್ಚುಗೆ ವ್ಯಕ್ತಪಡಿಸಿ ಜೀವಂತವಿದ್ದಾಗ ನೇತ್ರದಾನ ಪ್ರಮಾಣ ಪತ್ರ ಬರೆದು ಕೊಡುವುದರೊಂದಿಗೆ ಮರಣದ ನಂತರ ನಮ್ಮ ಕಣ್ಣುಗಳು ದಾನ ಮಾಡಿದರೆ ಪ್ರಪಂಚದಲ್ಲಿ ನಾವು ಇನ್ನು ಬದುಕಿದಂತೆ ಇರುತ್ತದೆ ಎನ್ನುವ ಮೂಲಕ ಅಂಧರ ಬಾಳಿಗೆ ಬೆಳಕು ಚೆಲ್ಲಿದರು.
ಪ್ರಸ್ತುತ ಸಂದರ್ಭದಲ್ಲಿ ದೇಹದಾನ ಮಾಡಿರುವ ರೇಖಾ ಆಶಾ ಕಾರ್ಯಕರ್ತೆ ದೇಹದಾನ ಪರಿಚಯ ಪತ್ರ ನೋಡಿ ಸಮುದಾಯದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾದರಿ ಆಶಾ ಕಾರ್ಯಕರ್ತೆ ಸನ್ಮಾನಿಸಿ ಶ್ಲಾಘನೀಯ ಮಾತುಗಳು ಹೇಳಿದರು
ಡಾ ಪ್ರಶಾಂತ ಡಿ ಮಾತನಾಡಿ ಜಿಲ್ಲೆಯಲ್ಲಿ ಹುಟ್ಟುಕುರುಡರು ಸಂಖ್ಯೆ 800 ಜನ ಅಂಧತ್ವ ಹೋಗಲಾಡಿಸುವ ಸಂಕಲ್ಪ ನಮ್ಮದಾಗಿದೆ ಎಂದು ಹೇಳುತ್ತಾ ಕಣ್ಣುದಾನಕ್ಕೆ ಜಾತಿ ಲಿಂಗ ಯಾವುದೇ ಭೇದಭಾವವಿಲ್ಲ ಕನ್ನಡಕ ಧರಿಸಿದವರು. ಕಣ್ಣು ನೋವಿದೆ. ಬಿಪಿ. ಶುಗರ್ .ಹಾರ್ಟು .ಅಸ್ತಮಾ . ಇತರೆ ಯಾವುದೇ ಕಾಯಿಲೆಗಳಿಂದ ಬಳಲುವರುಕಣ್ಣು ದಾನ ಮಾಡಬಹುದು ಎಂದು ಹೇಳಿದರು
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಮಾತನಾಡಿ ಕಣ್ಣು ದಾನ ಮಾಡದಿದ್ದರೆ ಮರಣದ ನಂತರ ಮಣ್ಣಲ್ಲಿ ಹೂಳಿದರೆ ಮಣ್ಣಲ್ಲಿ ಹಾಳಾಗುತ್ತವೆ ಶವ ಸುಟ್ಟರೆ ಕಣ್ಣುಗಳು ಸುಟ್ಟುಹೋಗುತ್ತದೆ ತಿಳಿದುಕೊಂಡು ನೇತ್ರದಾನ ವಾಗ್ದಾನ ಪತ್ರ ಬರೆದು ಕೊಟ್ಟವರು ತಮ್ಮ ಕುಟುಂಬಸ್ಥರಿಗೆ ತಿಳಿಸಿರಿ ಮರಣದ ನಂತರ 6:00 ಗಂಟೆ ಒಳಗೆ ನಮ್ಮ ಕಣ್ಣುಗಳು ದಾನ ಮಾಡಲು ವಾಗ್ದಾನ ಪತ್ರ ಬರೆದು ಕೊಟ್ಟಿದ್ದೇನೆ ತೆಗೆದುಕೊಂಡರೆ ಮುಖ ಅಸಹ್ಯ ಮುಖ ಚಹರ ಬದಲಾವಣೆ ಯಾವುದು ಆಗೋದಿಲ್ಲ ಸಮೀಪದ ನೇತ್ರ ಬಂಡಾರಕ್ಕೆ ಕರೆ ಮಾಡಿದಾಗ 20ರಿಂದ 30 ನಿಮಿಷ ನೇತ್ರದಾನ ಪ್ರಕ್ರಿಯೆ ಮುಗಿಯುತ್ತದೆ ಆದರೆ ನೇತ್ರದಾನ ಅಧಿಕಾರಿಗಳು ಬರುವತನಕ ಕಣ್ಣಿನ ಮೇಲೆ ತಣ್ಣೀರ ಪಟ್ಟಿ ಇಡಿ ಫ್ಯಾನ್ ಹಚ್ಚಬೇಡಿ ತಲೆದಿಂಬು ಆರು ಅಡಿ ಎತ್ತರದಲ್ಲಿರಲಿ ಎಂದು ಮಾಹಿತಿ ನೀಡಿದರು
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರುಗಳು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮೇಲ್ವಿಚಾರಕರು.ಪತ್ತಾರ .ಪೂಜಾರ. ಅತನೂರ. ಕಾಳೆ ಮತ್ತು ಪಾಟೀಲ. ಆರೋಗ್ಯ ಇಲಾಖೆ ಅಂಜುಟಗಿ. ಬಿರಾದಾರ. ದಶವಂತ. ಪ್ರದೀಪ. ಮಾರುತಿ. ಮಹಾಂತೇಶ. ವಿದ್ಯಾ. ಬಡಿಗೇರ್. ಕಲ್ಪನಾ. ಮಂಜುಳಾ. ಶೇಕ. ಶ್ರೀಮಂತ. ಶಿವುಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿದ್ದರು.