ನೇತ್ರದಾನದ ಮಹತ್ವ ಸಾರುವ ಅಕ್ಷಿ

ನೇತ್ರದಾನದ ಕುರಿತು ಮಹತ್ವ ಸಾರುವ ” ಅಕ್ಷಿ” ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎನ್ನುವ ರಾಷ್ಡ್ರ ಪ್ರಶಸ್ತಿಯ ಗರಿ ಚಿತ್ರ ತಂಡದ ಮುಡಿಗೇರಿದೆ. ಪ್ರಶಸ್ತಿ ಬಂದಿರುವ ಖುಷಿಯಲ್ಲಿ ಚಿತ್ರತಂಡ ಚಿತ್ರವನ್ನು ತೆರೆಗೆ ತರುವ ಉದ್ದೇಶವೊಂದಿದೆ‌. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳ ಮೊದಲ ವಾತ ಚಿತ್ರ ತೆರೆಗೆ ಬರುವ ಎಲ್ಲಾ ಸಾದ್ಯತೆಗಳಿವೆ.

ದಿವಂಗತ ಡಾ.ಎಸ್. ಪಿ. ಬಾಲಸುಬ್ರಹ್ಮಣ್ಯಂ ಚಿತ್ರದ ಹಾಡೊಂದನ್ನು ಹಾಡಿರುವುದು ವಿಶೇಷ. ಕಣ್ಣಿಲ್ಲದವರಿಗೆ ಬಣ್ಣಗಳ ತಿಳಿಸಿ ಹೇಳುವ ಹಾಡಿನ ಸಾಹಿತ್ಯ ಕೇಳಿ, ಎಷ್ಟೋ ಹಾಡುಗಳನ್ನು ಹಾಡಿದ್ದೇನೆ. ಆದರೆ ಈ ರೀತಿಯ ಹಾಡು ಹಾಡಿದ್ದು ತುಂಬಾ ಖುಷಿಯಾಗಿದೆ ಎಂದು ಗಾಯಕ ದಿವಂಗತ   ಎಸ್.ಪಿ ಬಾಲಸುಬ್ರಮಣ್ಯಂ. ಖುಷಿ ವ್ಯಕ್ತಪಡಿಸಿದ್ದರು ಎನ್ನುವುದು ಚಿತ್ರತಂಡದ ಅಭಿಪ್ರಾಯ.

ಟಿವಿ ನಿರೂಪಕರಾಗಿ , ಕಲಾವಿದರಾಗಿರುವ  ಕಲಾದೇಗುಲ ಶ್ರೀನಿವಾಸ್  ಸಂಗೀತ ನೀಡುವ ಜೊತೆಗೆ ನಿರ್ಮಾಣದಲ್ಲಿಯೂ ಕೈ ಜೋಡಿಸಿದ್ದಾರೆ‌. ಮೊದಲ ಪ್ರಯತ್ನದಲ್ಲಿ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ಖುಷಿ ವ್ಯಕ್ತಪಡಿಸಿದರು.

ಚಿತ್ರಕ್ಕೆ ಮನೋಜ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ ಈ ವೇಳೆ ಅವರು ಐದು ವರ್ಷಗಳ ಕಾಲ ನಿರ್ಮಾಪಕರಿಗೆ ಹುಡುಕಾಡಿದೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು ಅಂತಾರಲ್ಲ. ಹಾಗೆ ಈಗ ಸಮಯ ಕೂಡಿ ಬಂದಿದೆ. ಸಿನಿಮಾ ಸಿದ್ದವಾಗಿದೆ. ಎಲ್ಲರ ಹಾರೈಕೆಯಿಂದ ರಾಷ್ಟ್ರಪ್ರಶಸ್ತಿಯೂ ಬಂದಿದೆ.

ಗೋವಿಂದೇಗೌಡ, ಬೇಬಿ ಸೌಮ್ಯ ಪ್ರಭು, ಮಾಸ್ಟರ್ ಮಿಥುನ್, ಇಳಾ ವಿಟ್ಲ ಮುಂತಾದವರು  ಅಭಿಪ್ರಾಯ ಹಂಚಿಕೊಂಡರು.  ಶ್ರೀನಿವಾಸ್ ವಿ, ರಮೇಶ್ ಹಾಗೂ ರವಿ ಹೆಚ್ , ಚಿತ್ರ ನಿರ್ಮಿಸಿದ್ದಾರೆ. ಸುಮಾರು 55 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆಯಂತೆ. ಇಂತಹ ಉತ್ತಮ ಚಿತ್ರವನ್ನು ಪ್ರತಿಯೊಬ್ಬರೂ ನೋಡಲೇ ಬೇಕು ಅದಕ್ಕೆ ಸರಿಯಾದ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ ಎಂದಿದೆ ಚಿತ್ರತಂಡ.