ನೇತಾಜಿ 125ನೇ ಜಯಂತಿ:ಮಹಿಳಾ ಶಿಬಿರ


ಸಂಜೆವಾಣಿ ವಾರ್ತೆ
ಹೊಸಪೇಟೆ ನ14: ನೇತಾಜಿ ಸುಭಾಷ್ ಚಂದ್ರ ಬೋಸ್‍ರ 125ನೇ ಜಯಂತಿ ಪ್ರಯುಕ್ತ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ನಗರದ ಆವಿಷ್ಕಾರ ಕಚೇರಿಯಲ್ಲಿ ಶನಿವಾರ ಮಹಿಳಾ ಶಿಬಿರ ನಡೆಯಿತು.
ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ರಾಧಾಕೃಷ ್ಣಉಪಾಧ್ಯಾ ಅವರು, ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿ, ಮಹಿಳೆಯರು ಮನೆಯಿಂದ ಹೊರಬರುವುದೇ ಕಷ್ಟವಾಗಿದ್ದ ಕಾಲದಲ್ಲಿ ನೇತಾಜಿಯವರು, ದೇಶದ ಸ್ವಾತಂತ್ರಕ್ಕಾಗಿ ಮಹಿಳಾ ಯೋಧೆಯರ ಪಡೆಯನ್ನು ಕಟ್ಟಿ ಬೆಳೆಸಿದರು.
ಮಹಿಳೆಯರು ಪುರುಷರಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂದು ಪ್ರತಿಪಾಧಿಸಿದ ನೇತಾಜಿಯವರು, ಪ್ರಾಯದ ಯುವತಿಯರನ್ನು ರಣಭೂಮಿಯಲ್ಲಿ ಕಾದಾಡುವ ಸಾಹಸಿ ಕಾರ್ಯಕ್ಕೆ ಪ್ರೇರೇಪಿಸಿದರು. ತಮ್ಮ ಹೋರಾಟದ ಹಾದಿಯುದ್ದಕ್ಕೂ ಧರ್ಮಾತೀತ ಮೌಲ್ಯ, ಶಿಕ್ಷಣ, ಉದ್ಯೋಗ, ಆರೋಗ್ಯ, ಭದ್ರತೆ ಹಾಗೂ ಸಮಾಜಕ್ಕಾಗಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿದ್ದರು ಎಂದು ಸ್ಮರಿಸಿದರು.
ಎಐಎಮ್‍ಎಸ್‍ಎಸ್ ಸಂಘಟನೆಯ ರಾಜ್ಜ ಉಪಾಧ್ಯಕ್ಷ ಎಂ.ಎನ್. ಮಂಜುಳಾ ಮಾತನಾಡಿ, ಕಂಪ್ಯೂಟರ್ ಯುಗದಲ್ಲೂ ಕೂಡ ಮಹಿಳೆಗೆ ಸಿಗಬೇಕಾದ ನೈಜ ಸಮಾನತೆ, ಸ್ವಾತಂತ್ಯ್ರ, ಗೌರವ ಸಿಕ್ಕಿಲ್ಲ. ಸ್ತ್ರೀಯರು ಭೋಗದ ವಸ್ತು ಎಂಬ ಮನೋಭಾವನೆ ಇಂದಿಗೂ ಸಮಾಜದಲ್ಲಿ ಜೀವಂತವಾಗಿದೆ ಎಂದು ವಿಷಾಧಿಸಿದರು.
ಎಐಎಮ್‍ಎಸ್‍ಎಸ್‍ಜಿಲ್ಲಾ ಸಂಘಟಕ ಮಂಜುಳಾ ಡೊಳ್ಳಿ ಮಾತನಾಡಿ, “ಸಾಮಾಜಿಕ ಆಗು-ಹೋಗುಗಳ ಬಗ್ಗೆ ವೈಚಾರಿಕವಾಗಿ ಯೋಚಿಸುವ ಮತ್ತು ವಿಶ್ಲೇಷಿಸುವ ಸಾಮಥ್ರ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಂಘಟಕ ಶಿವಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.