
ಮಾನ್ವಿ,ಜು.೨೪-
ನಾಡಿನ ಹಿರಿಯ ಬರಹಗಾರ, ಚಿಂತಕ ಕುಂ.ವೀರಭದ್ರಪ್ಪ ಇವರಿಂದ ನೇತಾಜಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಶಾಲೆಯ ಗ್ರಂಥಾಲಯಕ್ಕೆ ಅತ್ಯುತ್ತಮ ೧೦೦ ಪುಸ್ತಕ ಗಳನ್ನು ಕಾಣಿಕೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಂ.ವೀ ಅವರು ನೇತಾಜಿ ಶಿಕ್ಷಣ ಸಂಸ್ಥೆ ಅತ್ಯಂತ ಪರಿಶ್ರಮದಿಂದ ಅಧ್ಯಕ್ಷ ಕೆ.ಈ. ನರಸಿಂಹ ವಿಜಯಲಕ್ಷ್ಮಿ ದಂಪತಿಗಳು ಕಟ್ಟಿದ್ದಾರೆ ಅವರ ಶ್ರಮಕ್ಕೆ ತಕ್ಕಂತೆ ಈ ಶಾಲೆಯ ವಿದ್ಯಾರ್ಥಿಗಳನ್ನು ಕೂಡ ಅತ್ಯುತ್ತಮ ದರ್ಜೆಯೊಂದಿಗೆ ಉತೀರ್ಣರಾಗುವುದರ ಮೂಲಕ ಶಾಲೆಗೆ ಕೀರ್ತಿ ತರುವಂತಹ ಕೆಲಸ ಮಾಡಬೇಕಾಗಿದೆ ಅದರಿಂದ ಈ ಶಾಲೆಗೆ ನನ್ನ ಕಡೆಯಿಂದ ನೂರು ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು ಎಂದರು.
ನಮ್ಮ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ನೀಡಿ ವಿದ್ಯಾರ್ಥಿಗಳ ಹರಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ, ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿ, ಶಾಲೆ ಶಿಕ್ಷಕರಿಂದ ಕುಂವೀ ಅವರಿಗೆ ವಿಶೇಷ ಅಭಿನಂದನೆಗಳು ಸಲ್ಲಿಸಿದರು.