ನೇತಾಜಿ ಬೋಸ್ ರವರ ಕನಸಿನ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಸಂಕಲ್ಪ

ಕಲಬುರಗಿ:ಜ.23:ಈ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾμï ಚಂದ್ರ ಬೋಸ್ ರವರ 128ನೇ ಜನ್ಮದಿನಾಚರಣೆ ಅಂಗವಾಗಿ ಇಂದು ನಗರದ ವಿವಿಧ ಕಡೆ, ಉದ್ಯಾನವನ, ಶಾಲಾ-ಕಾಲೇಜು, ಹಳ್ಳಿಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನಗರದ ಗಂಜ ಮುಖ್ಯ ರಸ್ತೆಯಲ್ಲಿರುವ ನೇತಾಜಿ ಅವರ ಪ್ರತಿಮೆಗೆ ಪುμÁ್ಪರ್ಚನೆ ಮಾಡಿ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ಮಾತನಾಡುತ್ತಾ, ನೇತಾಜಿ ಅವರು ಬಾಲ್ಯದಲ್ಲಿಯೇ ವಯಸ್ಸಾದ ಅಜ್ಜಿ ತಮ್ಮ ಮನೆಯ ಮುಂದೆ ಮರದ ಕೆಳಗಡೆ ಬಿಕ್ಷೆ ಬೇಡಿ ಬದುಕುವ ಪರಿಸ್ಥಿತಿ ನೋಡಿ, ನಾನು ಯಾಕೆ ಎಲ್ಲಾ ಅನುಕೂಲಗಳ ಜೊತೆಗೆ ಒಳ್ಳೆಯ ಮನೆಯಲ್ಲಿ ಬದುಕುತ್ತಿರುವೆ? ಯಾಕೆ ಆ ಅಜ್ಜಿಯ ಪರಿಸ್ಥಿತಿ ಆಗಿದೆ. ಇದೇ ಸ್ಥಿತಿ ನನಗೆ ಹೋರಾಡಲು ಪ್ರೇರಣೆ ನೀಡಿತು ಅವರು ಹೇಳಿದರು.

ಭಾರತದಲ್ಲಿ ಕೇವಲ ಬ್ರಿಟಿಷರನ್ನು ಹೋಲಿಸಿದರೆ ಸಾಲದು, ಭಾರತದಲ್ಲಿ ಹೊಸದೊಂದು ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಲು ಮತ್ತೊಂದು ಕ್ರಾಂತಿಯೇ ಜರುಗಿಸಬೇಕು. ಯಾವ ಜಾತಿ ಧರ್ಮ ಇಲ್ಲದೆ ಸ್ವಾತಂತ್ರಕ್ಕಾಗಿ ಜನಗಳು ಒಂದಾಗಬೇಕು, ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸಿ ಸಮಾಜವಾದಿ ಭಾರತ ಕಟ್ಟಬೇಕು ಎಂಬುದು ನೇತಾಜಿಯ ಕನಸಾಗಿತ್ತು.

ಆದರೆ ಇಂದು ನಮ್ಮನ್ನು ಆಳುತ್ತಿರುವ ಸರ್ಕಾರಗಳು ಅವರ ವಿಚಾರಗಳಿಗೆ ವಿರುದ್ದವಾಗಿ ಸಾಗುತ್ತಿವೆ. ಪ್ರತಿ ವರ್ಷ ಉನ್ನತ ಶಿಕ್ಷಣದ ಶುಲ್ಕವನ್ನು ಹೆಚ್ಚಿಸಿ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಸುತ್ತಿದೆ. ಅವೈಜ್ಞಾನಿಕ, ಅಂಧಕಾರ, ಕೋಮುವಾದ, ಮೂಡನಂಬಿಕೆಯ ವಿಚಾರಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಲಾಗುತ್ತಿದೆ. ಉದ್ದೇಶ ಪೂರ್ವಕವಾಗಿ ಯಾವುದೇ ಅಡೆತಡೆ ಇಲ್ಲದೆ ಅಶ್ಲೀಲ ಸಿನಿಮಾ, ಸಾಹಿತ್ಯಗಳನ್ನು ಅರೆ ಬಿಡಲಾಗುತ್ತಿದೆ. ಮತ್ತೆ ಇಂದು ಇಂತಹ ತಾರತಮ್ಯ ವ್ಯವಸ್ಥೆ ವಿರುದ್ಧ ವಿದ್ಯಾರ್ಥಿ – ಯುವಜನರು ನೇತಾಜಿಯ ಆದರ್ಶ ದೊಂದಿಗೆ ಸಮಾಜವಾದಿ ಭಾರತ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸೋಮಶೇಖರ್, ವಿ.ಮಠಪತಿ. ಅಧ್ಯಕ್ಷರು, ನೇತಾಜಿ ನಗರಿಕರ್ ಸಮಿತಿ ನೇತಾಜಿ ಚೌಕ್, ಕಲಬುರಗಿ. ಅತಿಥಿಗಳಾಗಿ ಕಾರ್ಯ-ಅಧ್ಯಕ್ಷ ಶಾಂತಯ್ಯ, ಸಂದಿಮಠ, ಮಾಜಿ ಸುಬೇದರ್ ವಾರ್ ಹೀರೋ. ವೆಕ್ರಾನ್ನಾ. ಹೊನ್ನಶೆಟ್ಟಿ-ಅಧ್ಯಕ್ಷ ನಿ. ಫೆÇೀಲಿಸ್ ಓಪ್ರೈಸರ್ಸ್ ಅಸೋಸಿಯೇಷನ್, ಮಾಲ್ಸೆ ಹಾಯ್. ಇಂಡಿ-ಹೆಡ್ ಮಾಸ್ಟರ್ಸ್, ಬಸವೇಶ್ವರ ಪ್ರೌಢಶಾಲೆ ರಾಜಶೇಖರ್ ಪೆದ್ದಿ, ಪಿ.ಆರ್.ಬಿಟ್ರದಾರ್, ನೀಲಕಂಠ, ಮೋರ್ನಿಸಾಬ್, ಈಶ್ವರಪ್ಪ, ಮಹದೇವಪ್ಪ, ರೇವಣಸಿದ್ದಯ್ಯ, ದಿಗಂಬರ್ ನಾಡಗೋವೊಲ-ಕಾಪೆರ್Çರೇಟರ್, ಎಚ್.ಬಿ. ಪಾಟೀಲ, ಪ್ರಾಚಾರ್ಯರು ಗೋಯಿನ್ ಮುದ್ದಾ, ಅಣ್ಣವೀರ ಟೆಂಗಳಿ ಶಂಕರ ಚವ್ಹಾಣ, ಶ್ರೀಮತಿ ಶಿಲ್ಪಾ. ಆರ್.ವಸ್ತ್ರದ್, ಮಹಾನಂದ ಅಸೆಂಬ್ಲಿ, ಬಸವೇಶ್ವರ ತೊಡೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಸುಭಾಸಚಂದ್ರ ಗಡ, ನೀಲಕಂಠ ನೂಲ ಮತ್ತು ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರಾದ ಪ್ರೀತಿ ದೋಡ್ಡಮನಿ ಉಪಸ್ಥಿತರಿದ್ದರು.