ಮಾನ್ವಿ,ಜೂ.೨೧-
ಭಾರತೀಯ ಪ್ರಾಚೀನ ಪರಂಪರೆಯ ಯೋಗ ಸಾಧನೆಯು ಜೀವನದ ಎಲ್ಲಾ ಗುರಿ ಸಾಧನೆಗಳಿಗೆ ಮಾರ್ಗದರ್ಶನ ಮಾಡಿ ಸಶಕ್ತ ಬದುಕಿಗೆ ನಾಂದಿ ಹಾಡುತ್ತದೆ ಎಂದು ನೇತಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಹ ಅಭಿಪ್ರಾಯ ಪಟ್ಟರು.
ಅವರು ಇಂದು ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಸಮಿತಿ ಮರ್ಥಥ ನಝೀ ಯು.ಕಾಲೇಜ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಮಾನವನು ಇಂದು ಹಲವಾರು ದೈಹಿಕ ಮತ್ತು ಮಾನಸಿಕ ರೋಗಗಳಿಂದ ಬಳಲುತ್ತಿದ್ದು ಎಲ್ಲಾ ತೊಳಲಾಟಗಳಿಗೆ ಮದ್ದು ಯೋಗ ಅಭ್ಯಾಸವು ಸಾಧನವಾಗಿದೆ. ಯೋಗವು ಮಾನಸಿಕ ದೈಹಿಕ ಸದೃಢತೆಯನ್ನು ಒದಗಿಸುತ್ತದೆ ಎಂದು ಹೇಳಿದರು.
ಯೋಗ ಸಾಧಕರಿಗೆ ಯಾವುದೇ ರೋಗ-ಋಜಿನಗಳು ಬರುವುದಿಲ್ಲ ಅದಕ್ಕಾಗಿ ಪ್ರತಿಯೊಬ್ಬರು ಯೋಗದಲ್ಲಿ ತೊಡಗಬೇಕು ಆರೋಗ್ಯವೇ ಭಾಗ್ಯ ಮನುಷ್ಯ ಇಂದು ಬಿಪಿ, ಶುಗರ್, ಕ್ಯಾನ್ಸರ್, ಕೀಲು ನೋವು, ಮಂಡಿನೋವು, ಮಾನಸಿಕ ಒತ್ತಡದಿಂದ ಬಳುತ್ತಿದ್ದಾನ ಇವೆಲ್ಲಾವೂಗಳೆಂದ ಮನುಷ್ಯ ಹೊರಬಂದು ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬೇಕಾದರೆ ಎಲ್ಲಾರೂ ಪ್ರತಿನಿತ್ಯವೂ ಯೋಗ ಸಾಧನೆ ಮಾಡಬೇಕು ಏಕೆಂದರೆ ಯೋಗವೇ ಸರ್ವ ರೋಗಕ್ಕೆ ಮದ್ದಾಗಿದ್ದು ಯೋಗ ಅತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಪ್ರಾಚೀನ ಕಾಲದಲ್ಲಿ ಋ?ಷಿ ಮುನಿಗಳು ದೀರ್ಘಕಾಲ ಆರೋಗ್ಯದಿಂದ ಬದುಕಲು ಯೋಗ ಸಾಧನೆಯೇ ಮೂಲ ಕಾರಣ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ತಾಲೂಕ ಅಧ್ಯಕ್ಷೆ ಶ್ರೀಮತಿ ಅನುರಾಧ ಸೂಗಪ್ಪಗೌಡ ಮಾತನಾಡಿ ಪ್ರಪಂಚದಾದ್ಯಂತ ಇಂದು ಭಾರತೀಯ ಪರಂಪರೆಯ ಯೋಗವನ್ನು ಆಚರಿಸಲಾಗುತ್ತಿದೆ. ಇದು ನಾವೆಲ್ಲಾ ಹೆಮ್ಮೆ ಪಡುವ ವಿಷಯ ಎಂದರು. ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿ, ಸಹಕಾರ್ಯದರ್ಶಿ ಕೆ.ರವಿವರ್ಮಾ, ಸೂಗಪ್ಪಗೌಡ, ಅನೀಸ್ ಫಾತಿಮಾ ಮೇಡಂ, ಬಸವರಾಜ್, ರಹೀಂಪಾಷಾ ಸೇರಿದಂತೆ ನೇತಾಜಿ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.