ನೇತಾಜಿ ಜಯಂತಿ ಆಚರಣೆ

ಕಲಬುರಗಿ:ಜ,24: ನಗರದ ಸರದಾರ ವಲ್ಲಭಭಾಯಿ ಪಟೇಲ್ ಶಿಕ್ಷಣ ಸಂಸ್ಥೆಯ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲ್ಲಿ ನೇತಾಜಿ ಸುಭಾಷಚಂದ್ರ ಬೋಸ್‍ರ 128ನೇ ಜನ್ಮ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರು ಡಾ. ಭುರ್ಲಿ ಪ್ರಹ್ಲಾದ ರವರು ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಕಾಲೇಜಿನ ಉಪನ್ಯಾಸಕರಾದ ಮಳೇಂದ್ರ ಹಿರೇಮಠ, ವೈಶಾಲಿ ದೇಶಪಾಂಡೆ, ಟಿ. ನವೇನಕುಮಾರ, ಚಂದ್ರಭಾನು, ಶಾಂತೇಶ ಹುಂಡೇಕಾರ, ಪ್ರಕಾಶ ಚವ್ಹಾಣ, ಮಂಜುಳಾ ಪಲ್ಲೆದ್ ಮುಂತಾದವರು ಉಪಸ್ಥಿತರಿದ್ದರು. ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೆ ಹೋರಾಟ ಮಾಡಿದ ಹಾಗೂ ಸೈನ್ಯ ಕಟ್ಟಿದ ನೇತಾಜಿಯವರ ಧೀಮಂತ ವ್ಯಕ್ತಿತ್ವದ ಬಗ್ಗೆ ಪ್ರಾಚಾರ್ಯರು ಮಾತನಾಡಿದರು. ಸರಳ ಸಮಾರಂಭ ಯಶಸ್ವಿಯಾಗಿ ನಡೆಯಿತು.