ನೇತಾಜಿ ಜನ್ಮ ವಾರ್ಷಿಕ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸ್ಪರ್ಧೆ

ದಾವಣಗೆರೆ. ಜ.೯; ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ, ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮ  ವಾರ್ಷಿಕದ ಹಿನ್ನೆಲೆಯಲ್ಲಿ  ದಾವಣಗೆರೆಯ ಆರ್ ಎಲ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ನೇತ್ರತಜ್ಞರ ಹಾಗೂ ಮೆಡಿಕಲ್ ಸರ್ವೀಸ್ ಸೆಂಟರ್ ನ ರಾಜ್ಯ ಅಧ್ಯಕ್ಷರಾದ ಡಾ ವಸುಧೇಂದ್ರ, ನಿರಂತರವಾಗಿ ವಿದ್ಯಾರ್ಥಿಗಳ ಹಲವಾರು ಶೈಕ್ಷಣಿಕ ಸಂಸ್ಥೆಗಳ ಕುರಿತು ಹೋರಾಟಗಳನ್ನು ಸಂಘಟಿಸುತ್ತಿರುವ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಇಂದು ನೇತಾಜಿಯವರ ಜನ್ಮವಾರ್ಷಿಕದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಗಾಯನ ಚರ್ಚೆ ಪ್ರಬಂಧ ಚಿತ್ರಕಲೆ ಸೇರದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿರುವುದು ಅಭಿನಂದನಾರ್ಹವಾದ ಕೆಲಸ. ಈ ಮೂಲಕ ನೇತಾಜಿಯವರ ಚಿಂತನೆಗಳನ್ನು ವಿದ್ಯಾರ್ಥಿಗಳ ಮಧ್ಯ ಹರಡುತ್ತಿರುವ ಸಂಘಟನೆಯ ಕೆಲಸ ಶ್ಲಾಘನೀಯವಾದದ್ದು ಎಂದು ಹೇಳಿದರು. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭಾಶಯ ಕೋರುತ್ತಾ ಸೋಲು ಅಥವಾ ಗೆಲುವಿಗಿಂತ ನಿಮ್ಮ ಭಾಗವಹಿಸುವಿಕೆ ಮುಖ್ಯವಾದುದು. ಸ್ಪರ್ಧೆಯಲ್ಲಿ ಸ್ಥಾನ ಗಳಿಸಿದ್ದವರು ಕುಗ್ಗಬಾರದು ಮತ್ತು ಮೊದಲನೇ ಸ್ಥಾನ ಪಡೆದವರು ನಾನೇ ಅತ್ಯಂತ ನಿಪುಣ ಎಂದು ಬೀಗಬಾರದು ಎಂದು ಕಿವಿ ಮಾತು ಹೇಳಿದರು. ಹಾಗೂ ನೇತಾಜಿ ಅವರು ಹೇಳಿದಂತೆ ಅನ್ಯಾಯದ ವಿರುದ್ಧ ನಾವು ದುನಿಯಾ ಬೇಕು ಮತ್ತು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರ ಮುಖಾಂತರ ಯಶಸ್ಸನ್ನು ಸಾಧಿಸಬೇಕು. ಇತಿಹಾಸದಲ್ಲಿ ನಾವು ನೋಡುವುದಾದರೆ ವಿದ್ಯಾರ್ಥಿಗಳ ಹೋರಾಟಕ್ಕೆ ಹೋಗಬಾರದು ಎಂಬ ಒಡಂಬಡಿಕೆಯು ಹಿಂದಿನಿಂದಲೂ ಇದೆ ಆದರೆ ಈ ದೇಶದ ವಿದ್ಯಾರ್ಥಿಗಳು  ಯುವಜನತೆ ಹೋರಾಡದೆ ಹೋಗಿದ್ದರೆ ನಾವು ಇಷ್ಟು ಸ್ವಾತಂತ್ರ್ಯವಾಗಿ ಇರಲು ಸಾಧ್ಯವಾಗುತ್ತಿರಲ್ಲಿಲ್ಲ. ಯಾವುದೇ ಒಂದು ಅನ್ಯಾಯವನ್ನು ಅಸಹಿಷ್ಣುತೆಯನ್ನು ಹಾಗೂ ಜನತೆಯ ವಿಮುತ್ತಿಗಾಗಿ  ಹೋರಾಟಕ್ಕೆ ಮೊದಲು ನಾಯಕತ್ವ ಕೊಡುವವರು ವಿದ್ಯಾರ್ಥಿಗಳೆ!… ಇವತ್ತು ರಾಜಕೀಯ ಎಂದರೆ ಅಸಹ್ಯ ಬರುವಂತಾಗಿದೆ  ಒಂದು ಪಕ್ಷದಿಂದ ಇನ್ನೊಂದು ಪಕ್ಷ ಬದಲಾಯಿಸುವುದು, ಯಾವ ಸರ್ಕಾರ ಯಾರನ್ನ ಬದಲಾಯಿಸಿತು! ಇಂದು ನೆಡೆಯುವ ರಾಜಕೀಯ ನಿಜವಾದ ರಾಜಕೀಯನಾ!?  ರಾಜಕೀಯಕ್ಕೆ ತುಂಬಾ ಗೌರವ ಇದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್  ಹಗಲು ಇರುಳು ಶ್ರಮಿಸಿದ್ದಾರೆ. *”ನೇತಾಜಿ ಹೇಳುವುದು ಅನ್ಯಾಯ ಮತ್ತು ಅಸತ್ಯತೆಯನ್ನು ವಿರೋಧಿಸುವುದನ್ನು ನೀವೂ ರಾಜಕೀಯ ಎನ್ನುವುದಾದರೆ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಈ ರಾಜಕೀಯ ಮಾಡುವುದು ಬಿಟ್ಟರೆ ಬೇರೆ ಯಾವ ದಾರಿ ಇಲ್ಲಾ!”* ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆಯ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ನೂರಾರು ಜನ ವಿದ್ಯಾರ್ಥಿಗಳು ರಸಪ್ರಶ್ನೆ, ಪ್ರಬಂಧ, ದೇಶಭಕ್ತಿ ಗೀತೆ, ಚಿತ್ರಕಲೆ ಸೇರಿದಂತೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ಸ್ವಾತಂತ್ರ್ಯ ಸೇನಾನಿ ನೇತಾಜಿಯವರಿಗೆ ತಮ್ಮ ನಮನ ಅರ್ಪಿಸಿದರು. ಎಲ್ಲ ಸ್ಪರ್ಧೆಗಳ ತೀರ್ಪುಗಳ ಘೋಷಣೆ ಹಾಗೂ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು 21 ಜನವರಿ  2023 ರಂದು ನಡೆಯುವ ನೇತಾಜಿಯವರ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿವರಿಸಲಾಗುವುದು ತೀರ್ಪುಗಾರರಾಗಿರಾಘವೇಂದ್ರ ನಾಯಕ ಚಿತ್ರಕಲಾ ಶಿಕ್ಷಕರು ಗ್ರಾಸಿಮ್ ಸಿರಿಗನ್ನಡ ವಿದ್ಯಾಲಯ ಕವಲತ್ತು ,ಜಿಎಂಐಟಿಯ ಸಂಗೀತ ಪ್ರಾದ್ಯಾಪಕರಾದ ಅಮಿತ್ ಸರ್, ಸೇರಿದಂತೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಕಛೇರಿ ಕಾರ್ಯದರ್ಶಿ ಕಾವ್ಯ ಬಿ, ಸಂಘಟನಾಕಾರರು ಯೋಗೇಶ್ , ವಿನಯ್ , ಬೀರೇಶ್ಮ, ಚೇತನ್, ಮಧುಸೂಧನ್ ಉಪಸ್ಥಿತರಿದ್ದರು.