ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

ಕಲಬುರಗಿ,ಏ.22-ನೇಣು ಹಾಕಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮತೀರ್ಥ ನಗರದಲ್ಲಿ ನಡೆದಿದೆ.
ರಾಜಕುಮಾರ ಕುಂಬಾರ (32) ಆತ್ಮಹತ್ಯೆಗೆ ಶರಣಾದವರು.
ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ರಾಜಕುಮಾರ ಕುಂಬಾರ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನಿರ್ಮಾಣ ಹಂತದ ಮನೆಯ ಛತ್ತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮೃತನ ಪತ್ನಿ ಗುಂಡಮ್ಮ ಕುಂಬಾರ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.

ವ್ಯಕ್ತಿ ಸಾವು
ಕುಡಿದ ಅಮಲಿನಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಗೋವಾ ಹೋಟೆಲ್ ಹತ್ತಿರದ ಮಹಾನಗರ ಪಾಲಿಕೆಯ ಕಚೇರಿ ಪಕ್ಕದಲ್ಲಿ ನಡೆದಿದೆ.
ಸುಭಾಷ ಚೌಕ್‍ನ ಉದಯಕುಮಾರ ಮೃತಪಟ್ಟವರು.
ಈ ಸಂಬಂಧ ಮೃತನ ಸಹೋದರ ದೀಪಕ್ ದಿನಕರರಾವ ಪಾಟೀಲ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.